ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ನೋಡಿ: ಕೆನಡಾದಲ್ಲಿ ಕನ್ನಡ: ಸತ್ಯನಾರಾಯಣ ವ್ರತದ ಕಥೆಯ ನೃತ್ಯರೂಪಕ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ದೂರದ ಕೆನಡಾ ದೇಶದ ಟೊರೊಂಟೋ ನಗರದಲ್ಲಿ ಸತ್ಯನಾರಾಯಣ ವ್ರತದ ಕಥೆ, ಅದೂ ಸವಿಗನ್ನಡದಲ್ಲಿ ಆಲಿಸುವ ಭಾಗ್ಯ. ನೃತ್ಯರೂಪಕದ ಮೂಲಕ ಪ್ರಸ್ತುತಿ.

ದಿವಂಗತ ಬೀರೂರು ಚಿದಂಬರ ಜೋಯಿಸ ಅವರು ಬರೆದ ಸತ್ಯನಾರಾಯಣ ಕಥೆಯ ಹಾಡನ್ನು ನೃತ್ಯರೂಪಕಕ್ಕೆ ಅಳವಡಿಸಿದವರು ಶ್ರೀಮತಿ ಸುಧಾ ಸುಬ್ಬಣ್ಣ. ಮಿಸ್ಸಾಸಾಗ ಕನ್ನಡ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ಅತ್ಯಂತ ಸುಂದರವಾಗಿ ಪ್ರಸ್ತುತಪಡಿಸಿದ್ದಾರೆ.


ಉಪಯುಕ್ತ ನ್ಯೂಸ್‌ ಓದುಗರಿಗಾಗಿ ದೂರ ದೇಶದಲ್ಲಿ ಆಯೋಜಿಸಲಾದ ಈ ಕನ್ನಡ ಕಾರ್ಯಕ್ರಮದ ವೀಡಿಯೋ ಲಿಂಕ್‌ ಅನ್ನು ಕಳುಹಿಸಿಕೊಟ್ಟವರು ಖ್ಯಾತ ಅಂಕಣಕಾರ ಶ್ರೀವತ್ಸ ಜೋಷಿ ಅವರು.


ಮುಂದಿನ ವಿವರಣೆ ಅವರದ್ದೇ. ಓದಿ, ವೀಡಿಯೋ ನೋಡಿ, ಮನಸ್ಸಿಗೆ ಮುದ ತಂದುಕೊಳ್ಳಿ.


****


ಸತ್ಯನಾರಾಯಣ ವ್ರತ ಕಥೆ: ಕನ್ನಡ & ಕೆನಡಾ

=========

ಸತ್ಯನಾರಾಯಣ ವ್ರತ ಕಥೆಯನ್ನು ಆಲಿಸುವುದು ಪುಣ್ಯದ ಕೆಲಸ. ನಿಮಗೆ ಇಷ್ಟವಾಗಿಯೇ ಆಗುತ್ತದೆ.

ವ್ರತ ಕಥೆಯನ್ನು ಕನ್ನಡದಲ್ಲಿ ಹೇಳಿದರಂತೂ ಇನ್ನಷ್ಟು ಇಷ್ಟವಾಗುತ್ತದೆ!

ವ್ರತ ಕಥೆಯ ಕನ್ನಡ ಪದ್ಯಗಳನ್ನೇ ಸಂಗೀತ ನೃತ್ಯ ರೂಪಕದ ಮೂಲಕ ಪ್ರಸ್ತುತಪಡಿಸಿದರೆ... ಮತ್ತಷ್ಟು ಇಷ್ಟವಾಗುತ್ತದೆ!

ಆ ಸಂಗೀತ ನೃತ್ಯ ರೂಪಕವನ್ನು ಚಿಕ್ಕ ಮಕ್ಕಳು ಅಭಿನಯಿಸಿದರೆ... ಮಗದಷ್ಟು ಸಂತೋಷವಾಗುತ್ತದೆ!

ಆ ಚಿಕ್ಕಮಕ್ಕಳು ಕೆನಡಾ ದೇಶದಲ್ಲಿ ನೆಲೆಸಿರುವ ಕನ್ನಡಿಗ ಪುಟಾಣಿಗಳು ಅಂತಾದರೆ ನಿಮ್ಮ ಖುಷಿಗೆ ಪಾರವೇ ಇಲ್ಲ!


ಅಂಥದೊಂದು ಖುಷಿಯನ್ನುಈಗ ಅನುಭವಿಸುವಂಥವರಾಗಿ 22 ನಿಮಿಷಗಳ ಈ ವಿಡಿಯೊ ಪ್ರಸ್ತುತಿಯನ್ನು ವೀಕ್ಷಿಸುವುದರ ಮೂಲಕ.

ಇದೋ ಇಲ್ಲಿದೆ ಕೆನಡಾ ದೇಶದ ಟೊರೊಂಟೊ ನಗರದ ಸುತ್ತಮುತ್ತ ನೆಲೆಸಿರುವ ಕನ್ನಡಿಗ ಮಕ್ಕಳು ಅಭಿನಯಿಸಿದ ಸತ್ಯನಾರಾಯಣ ವ್ರತ ಕಥೆ ಸಂಗೀತ ನೃತ್ಯ ರೂಪಕ."ಸತ್ಯಗೀತ"




(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

ನವೀನ ಹಳೆಯದು