ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ಶಿವ ಮಹಿಮೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಜಾನಪದ ಶೈಲಿಯ ಛಂದೋಬದ್ಧ ತ್ರಿಪದಿ



ಪರಮೇಶ ಗೌರೀಶ ಪರಶಿವ ಶಂಕರ

ಹರಹರ ಶಂಭೋ ಮಹದೇವ | ಸರ್ವೇಶ|

ಗಿರಿಧರ ನೀನೇ ಕಾಪಾಡು||೧||


ಶಿವಶಿವ ಎನ್ನುತ ಶಿವನಾಮ ಜಪಿಸಲು

ಭವರೋಗ ದೂರ ಸರಿದಾಗ| ಮನಸಿಗೆ|

ತವನಿಧಿ ದೊರೆತ ಸಂತಸ||


ತೆಂಗಿನ ಎಳನೀರು ಲಿಂಗಕ್ಕೆ ಅಭಿಷೇಕ

ಮಂಗಳ ವಾದ್ಯ ಘೋಷವು| ಮೊಳಗಲು|

ಕಂಗಳ ಕಾಂತಿ ಬೆಳಗೀತು ||


ಕವಿದಿಹ ಕತ್ತಲೆ ಭವಿತವ್ಯ ಬೆಳಗಲು

ಶಿವರಾತ್ರಿ ದಿನದ ಉಪವಾಸ| ಭಜನೆಯು|

ಜವರಾಯನನ್ನೂ ಗೆಲುತಾವ||


ಶಂಕರ ಶಶಿಧರ ಕಿಂಕರ ನಾನಾಗಿ

ಕುಂಕುಮ ಭಾಗ್ಯ ಉಳಿಸೆಂದು| ಶರಣಾಗಿ|

ಸಂಕಟ ಹರನ ಬೇಡುತ||


ಕಷ್ಟವನೊಡ್ಡುತ ಇಷ್ಟವನರಿಯುತ

ಮುಷ್ಟಿಯ ಸುಖವ ನೀಡುತ| ಪರಶಿವ|

ಇಷ್ಟಾರ್ಥವನ್ನು ಕರುಣಿಸಿ ||


ರುದ್ರಂಗೆ ಅಭಿಷೇಕ ನಿದ್ರೆಯ ಮಾಡದೆ

ಭದ್ರತೆಯನ್ನು ಬೇಡುತ| ಬಾಳಲ್ಲಿ|

ರುದ್ರಾಕ್ಷಿ ಮಾಲೆ ಧರಿಸುತ್ತ||


ನೊಸಲಿಗೆ ಭಸ್ಮವ ಹಸನಾಗಿ ಲೇಪಿಸಿ

ಮಸಣದ ಬಳಿಯೆ ನಿಂತಿದ್ದ |ಬೈರಾಗಿ|

ಕುಸಿದಿದ್ದ ಜನರ ಹರಸುತ್ತ||


ಶಿವರಾತ್ರಿ ದಿನವೆಲ್ಲ ಸುವಿಚಾರ ಚಿಂತನೆ

ಧವಳದ ಕೀರ್ತಿ ಪಸರಿಸಿ| ಜಗದಲ್ಲಿ|

ಭುವನದಿ ಶಾಂತಿ ತಲೆದೋರಿ||


ರಚನೆ: ಲಕ್ಷ್ಮೀ ವಿ ಭಟ್, ಮಂಜೇಶ್ವರ

ರಾಗ ಸಂಯೋಜನೆ:- ಪ್ರಸನ್ನಾ ಸಿ ಎಸ್ ಭಟ್ ಕಾಕುಂಜೆ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

ನವೀನ ಹಳೆಯದು