ಆಲಿಸಿ: ಭಕ್ತಿಗೀತೆ- ಮನಸಿನಲಿ ನಿಂತಿರಲು ಮಂಜುನಾಥ
ಗಾಯಕರು: ಡಾ. ಎಸ್.ಪಿ ಬಾಲಸುಬ್ರಹ್ಮಣ್ಯಂ
ಮನಸ್ಸಿನಲ್ಲಿ ನಿಂತಿರಲು ಮಂಜುನಾಥ
ಮಂಜಿನೊಲು ಮರೆಯುವುದು ಎಲ್ಲ ಕ್ಲೇಶ
||ಮನಸ್ಸಿನಲಿ||
ಮನೆಯೆ ಒಂದು ಪುಣ್ಯದ ಧರ್ಮಸ್ಥಳ||2||
ಮುದದಿಂದ ಒಲಿದಿರಲು ಮಂಜೇಶ
||ಮನಸ್ಸಿನಲಿ||
ಸತ್ಯ ಧರ್ಮ ನಿಷ್ಠೆಯಿಂದ ಪಾಲಿಸುವಾಗ
ಭಕ್ತಿಯಿಂದ ದೈವ ಪೂಜೆ ಮಾಡಿದಂತೆ
||ಸತ್ಯ||
ಅನ್ನದಾನ ವಸ್ತ್ರದಾನ ಮಾಡುವಾಗ||2||
ಧರ್ಮಸ್ಥಳ ಪ್ರಭು ದರ್ಶನ ಆದಂತೆ
||ಮನಸ್ಸಿನಲಿ||
ಶುಭ್ರವಾದ ಮನಸನು ಪಡೆದಿರುವಾಗ
ನೇತ್ರಾವತಿ ನೀರಸ್ನಾನ ಮಾಡಿದಂತೆ
||ಮನಸ್ಸಿನಲಿ||
ಆತ್ಮಸಾಕ್ಷಿ ಗಂಜಿಬಾಳ ಕಲೆಯುವಾಗ||2||
ಧರ್ಮಸ್ಥಳ ಯಾತ್ರೆಯ ಮಾಡಿದಂತೆ
||ಮನಸ್ಸಿನಲಿ||
ನೊಂದವರಿಗೆ ಸೇವೆಯನು ಮಾಡಿದಾಗ
ಮಂಜುನಾಥ ಸೇವೆಯನು ಮಾಡಿದಂತೆ
||ನೊಂದವರಿಗೆ||
ತ್ಯಾಗವೆಂಬ ರಾಗವನ್ನು ಹಾಡಿದಾಗ||2||
ಮಂಜುನಾಥ ನಿಮಗೆ ಒಲಿವನಂತೆ
||ಮನಸ್ಸಿನಲಿ||
إرسال تعليق