ಆಲಿಸಿ: ನವರಾತ್ರಿ ವಿಶೇಷ- ಬ್ರಹ್ಮಚಾರಿಣಿ- ಭಕ್ತಿಗೀತೆ
ರಚನೆ: ಅಶ್ವತ್ಥನಾರಾಯಣ, ಮೈಸೂರು
ಸಂಗೀತ, ಗಾಯನ. ಕಲಾಶ್ರೀ ವಿದ್ಯಾಶಂಕರ್ ಮಂಡ್ಯ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಬ್ರಹ್ಮಚಾರಿಣಿ
ಜ್ಞಾನದೇವತೆ ಬ್ರಹ್ಮಚಾರಿಣಿ
ದುರ್ಗೆ ಎನಿಸಿಹ ಮಾತೆಯು|
ಭಾನುಕಾಶಳು ಶಿವನ ವರಿಸಲು
ತಪವ ಮಾಡಿದ ದೇವಿಯು||
ಬಲದ ಕೈಯಲಿ ಜಪದ ಮಾಲೆಯು
ಹಿಡಿದು ತಪವನು ಗೈದಳು|
ಜಲದ ಪಾತ್ರೆಯ ಎಡದ ಕೈಯಲಿ
ಭದ್ರವಾಗಿಯೆ ಹಿಡಿದಳು||
ಶಿವನ ಮನಸನು ಗೆಲ್ಲಲೆಂದೇ
ಹಿಮದ ಗಿರಿಯಲಿ ಇದ್ದಳು|
ಅವಳ ತಪವದು ಹರನ ವರಿಸಲು
ಶ್ರದ್ಧೆಯಿಂದಲೆ ಗೆದ್ದಳು||
ಮಾತೆಯಿವಳನು ಭಕ್ತಿಯಿಂದಲಿ
ಪೂಜೆ ಮಾಡುವ ಎಲ್ಲರು|
ಪ್ರೀತಿ ತೋರುತ ಹರಸಿಬಿಡುವಳು
ಬಾಗಿ ನಮಿಸುವ ಸರ್ವರು||
ದೇಶದೆಲ್ಲೆಡೆ ಪೂಜೆ ನಡೆದಿದೆ
ಬ್ರಹ್ಮಚಾರಿಣಿ ತಾಯಿಗೆ|
ದೋಷರಹಿತಳು ಸರ್ವಶಕ್ತಳು
ಹರಸುತಿರುವಳು ಜನರಿಗೆ||
- ಅಶ್ವತ್ಥನಾರಾಯಣ, ಮೈಸೂರು
إرسال تعليق