ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಿಜಯದಶಮಿ ವಿಶೇಷ ಭಕ್ತಿಗೀತೆ- ವಿಜಯದ ಕಡೆಗೆ ಒಂದು ಹೆಜ್ಜೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ಆಲಿಸಿ: ವಿಜಯದಶಮಿ ವಿಶೆಷ ಭಕ್ತಿಗೀತೆ- ವಿಜಯದ ಕಡೆಗೆ ಒಂದು ಹೆಜ್ಜೆ




ಆಶ್ವಯುಜದ ಶುದ್ಧ ದಶಮಿ
ವಿಜಯಕಿದುವೆ ಹಬ್ಬವೆಂದು 
ಹೊನ್ನಿನಂತೆ ಶಮಿಯನಿತ್ತು
ಮುನ್ನ ಬಾಗುವ /
ಒಳಿತನೊಂದೆ ಮನದೊಳಿಟ್ಟು ಮುಂದೆ ಸಾಗುವ //1//

ಅಸುರಶಕ್ತಿ ಕೆಡುಕಿನೆಡೆಗೆ 
ತಡೆಯಲೆಂತು ಇದರ ನಡಿಗೆ
ಹೊಡೆದು ಬಡಿದು ಮೆರೆಯುವಾಗ
ದಡವೆ ಕಾಣದು /
ವರವ ಪಡೆದ ಆಟವೆಲ್ಲ ಇಲ್ಲಿ ನಡೆಯದು //2//

ಹಾಗೆ ಹೀಗೆ ಪಡೆಯಬೇಕು
ಸಗ್ಗವನ್ನೆ ಸೇರಬೇಕು
ನುಗ್ಗಿ ನಡೆವ ವೇಗದಲ್ಲಿ
ಎಡವಿ ಬಿದ್ದರೆ /
ಎದ್ದು ಮೇಲೆ ಬರದ ಹಾಗೆ, ನೂರು ತೊಂದರೆ //3//

ತೆರೆದ ದಾರಿ ಗೆಲುವಿಗಲ್ಲ
ಮರೆತ ಜನರ ಪಾಡು ನೋಡಿ!
ಅವರ ಇವರ ತರಿದ ಮೇಲೆ
ಕತ್ತಿ ತಲೆಯಲಿ /
ನೆತ್ತಿಗಿಲ್ಲಿ ಅಭಯವಚನ ಇರದು ಜೊತೆಯಲಿ //4//

ಹೊತ್ತು ತಂದ ಬುತ್ತಿಯೊಂದೆ
ಹಸಿದ ಒಡಲ ತಣಿಸಲೆಂದು!
ನಮ್ಮ ಬುತ್ತಿಯೊಳಗೆ ಸುಧೆಯ
ನಾವೆ ತುಂಬುವ /
ನಂಬಿದವರ ಕಾಯಲೆಂದು, ಹೆಜ್ಜೆ ಹಾಕುವ //5//

ರಚನೆ: ರಾರಾ
(ಡಾ. ರಾಘವೇಂದ್ರ ರಾವ್)
ರಾಗ, ಸಂಗೀತ, ಗಾಯನ:  ಕಲಾಶ್ರೀ ವಿದ್ಯಾಶಂಕರ್ ಮಂಡ್ಯ

Post a Comment

ನವೀನ ಹಳೆಯದು