ಆಲಿಸಿ: ಭಕ್ತಿಗೀತೆ- ಹರಿವರಾಸನ ಕೇಳಿ ಮಲಗಿದ ಹರಿಹರಪುತ್ರ ಕಣ್ತೆರೆ
ಹರಿವರಾಸನ ಕೇಳಿ ಮಲಗಿದ
ಹರಿಹರಪುತ್ರ ಕಣ್ತೆರೆ||ಹರಿವರಾಸನ||
ದಾಸನ ಕಣ್ಣೀರು ಪನ್ನೀರಾಗಿಸಿ
ಅಭಿಷೇಕದಲ್ಲಿಡಲು
ನಿನ್ನಯ ದಾಸನು ಬಂದಿರುವೆ
||ಹರಿವರಾಸನ||
ಬ್ರಾಹ್ಮ ಮುಹೂರ್ತದಲಿ ಶರಣಮಂತ್ರಗಳ
ಬ್ರಹ್ಮೋಪಾಸನೆ ಮಾಡಿ
ತಾರಕ ಬ್ರಹ್ಮೋಪಾಸನೆ ಮಾಡಿ
||ಬ್ರಾಹ್ಮ ||
ಒರುಕುಳಿ ತೀರ್ಥದಿ ಮಿಂದು ಶ್ರೀನಾಮಗಳ
ಬಿಡದೆಲೆ ಸ್ಮರಿಸುತ ಮಿಂದೆ
ಕಣ್ತೆರೇ... ಭಗವಾನ್, ಕಣ್ತೆರೆ ಬೇಗ
ಉದಯದಿ ಪ್ರಭೆಯಾಗಿ
ನನ್ನ ಹ್ರದಯದ ಪ್ರಭೆಯಾಗಿ
||ಹರಿವರಾಸನ||
ಸರಸ್ವತಿ ಯಾಮದಲಿ, ಸನ್ನಿಧಿಗೆ ಬಂದು
ಸಗುಣೋಪಾಸನೆ ಮಾಡಿ
ದಾಸನು ಸಗುಣೋಪಾಸನೆ ಮಾಡಿ ||ಸರಸ್ವತಿ||
ಸಹಸ್ರ ಕಿರಣಗಳು ಒಳಬರುವ ಮುನ್ನ
ಸಹಸ್ರಾರ್ಚನೆಗೆ ಬಂದಿಹೆನು
ಕಣ್ತೆರೇ ಭಗವಾನ್, ಕಣ್ತೆರೆ ಬೇಗ
ಉದಯದ ಪ್ರಭೆಯಾಗಿ
ನನ್ನ ಹೃದಯದ ಪ್ರಭೆಯಾಗಿ
||ಹರಿವರಾಸನ||
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
إرسال تعليق