ಆಲಿಸಿ: ದೇಶಭಕ್ತಿಗೀತೆ- ಏಳಿ ವೀರ ಯೋಧರೇ ದೇಶಸೇವೆಗೆ
74ನೇ ಗಣರಾಜ್ಯೋತ್ಸವದ ಅಂಗವಾಗಿ ವಿಶೇಷ ದೇಶಭಕ್ತಿ ಗೀತೆ ಗಾಯನ.
ರಚನೆ ಸಂಗೀತ, ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ
ರಾಗ- ಹಿಂದೋಳ
ಏಳಿ ವೀರ ಯೋಧರೆ ದೇಶದ ಸೇವೆಗೆ
ಕ್ರಾಂತಿ ಪುರುಷರಾಳಿದ ಭರತ ನಾಡಿಗೆ! (ಪಲ್ಲವಿ)
ಒಂದೆ ಮತ ಒಂದೆ ಕುಲ ಎಂದು ತಿಳಿಯಿರಿ
ಸ್ವಾತಂತ್ರ್ಯಕೆ ಗತಿಸಿದವರ ಚರಿತೆ ಸ್ಮರಿಸಿರಿ.
ಗಾಂಧಿ ಬುದಗದ ಏಸು ಬಸವ ನುಡಿಯ ಕೇಳಿರಿ
ದೇಶಕಾಗಿ ಶ್ರಮಿಸ ಬನ್ನಿ ತ್ಯಾಗ ವೀರರೇ. (ಏಳಿವೀರ)
ಭಾಷೆ ಯಾವುದಾದರೇನು ದೇಶ ಒಂದೆ ಅಲ್ಲವೆ
ಶಾಂತಿ, ಸಹನೆ ಪ್ರೀತಿಯು ಆದರ್ಶವಲ್ಲವೆ
ನಾಡು ನುಡಿಗೆ ಫಣವ ತೊಡಿ ದೇಶಕಾಗಿ ಇಂದೆ ಮಡಿ
ಐಕ್ಯತೆಯ ಮಂತ್ರದಡಿ ನುಗ್ಗಿ ನಡಿ ಬೇಗ ನಡಿ (ಏಳಿ ವೀರ ಯೋಧರೆ)
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق