ಆಲಿಸಿ: ಭಕ್ತಿಗೀತೆ- ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೆ
ತುಳನಾಡ ಗಾನ ಗಂಧರ್ವ ಸಂಗೀತ ಸೇವಾ ಪ್ರತಿಷ್ಟಾನ ರಿ. ಅರ್ಪಿಸುವ
ನಿರ್ಮಾಣ :
*ಶ್ರೀ ನವೀನ್ ಮಾವಜಿ ಮತ್ತು ಕಾವ್ಯ ಶ್ರೀ ನವೀನ್
ಬೇಬಿ ಸಾನ್ವಿ ಮಾವಜಿ. ಮಾವಜಿ ಮನೆ. ಬಹರೈನ್
ಸಂಗೀತ ನಿರ್ದೇಶನ: ಜಗದೀಶ್ ಪುತ್ತೂರು
ಗಾಯನ: ಜಗದೀಶ್ ಪುತ್ತೂರು
ಗಾಯಕಿ ಪಲ್ಲವಿ ಪ್ರಭು ಮಂಗಳೂರು
ಗಾಯಕಿ ಸಮನ್ವಿ ರೈ ಪುತ್ತೂರು
ಗಾಯಕಿ ಜನ್ಯ ಪ್ರಸಾದ್ ಅನಂತಾಡಿ
ಗಾಯಕಿ ದಿವ್ಯ ನಿಧಿ ರೈ
ಗಾಯಕಿ ಸಾಹಿತ್ಯ ಆಚಾರ್ಯ
ಸಾಹಿತ್ಯ:
ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೆ
ಕೃಷ್ಣಾ ನ ನೆನೆದರೆ ಕಷ್ಟ ಒಂದಿಸ್ಟಿಲ್ಲ ಕೃಷ್ಣಾ ಎನಬಾರದೆ
ಮಲಗಿದ್ದು ಮೈಮುರಿದೇಳುತ್ತಲೊಮ್ಮೆ ಶ್ರೀಕೃಷ್ಣಾ ಎನಬಾರದೆ
ನಿತ್ಯ ಸುಳಿದಾಡುತ ಮನೆಯೊಳಗಾದರು ಕೃಷ್ಣಾ ಎನಬಾರದೆ
ಸ್ನಾನ ಪಾನ ಜಪ ತಪಗಳ ಮಾಡುತ ಕೃಷ್ಣಾ ಎನಬಾರದೆ
ಶಾಲ್ಯಾನ್ನ ಶಡರಸ ತಿಂದು ತೃಪ್ತನಾಗಿ ಕೃಷ್ಣಾ ಎನಬಾರದೆ
ಗಂಧವ ಪೂಸಿ ತಾಂಬೂಲವ ಮೆಲುವಾಗ ಕೃಷ್ಣಾ ಎನಬಾರದೆ
ಚೆಂದುಳ್ಳ ಹಾಸಿಗೆ ಮೆಲೆ ಕುಳಿತೊಮ್ಮೆ ಶ್ರೀಕೃಷ್ಣಾ ಎನಬಾರದೆ
ಕಂದನ್ನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣಾ ಎನಬಾರದೆ
ಮಂದಗಮನೆ ಕೂಡ ಸರಸವಾಡುತಲೊಮ್ಮೆ ಕೃಷ್ಣಾ ಎನಬಾರದೆ
ಮೇರೆ ತಪ್ಪಿ ಮಾತನಾಡುವಾಗ ಲೊಮ್ಮೆ ಕೃಷ್ಣಾ ಎನಬಾರದೆ
ದಾರಿಯ ನಡೆವಾಗ ಭಾರವಹೊರುವಾಗ ಕೃಷ್ಣಾ ಎನಬಾರದೆ
ಪರಿಹಾಸ್ಯದ ಮಾತನಾಡುತಲೊಮ್ಮೆ ಶ್ರೀಕೃಷ್ಣಾ ಎನಬಾರದೆ
ಪರಿ ಪರಿ ಕೆಲಸದೊಳೊಂದು ಕೆಲಸವೆಂದು ಕೃಷ್ಣಾ ಎನಬಾರದೆ
ದುರಿತ ರಾಶಿ ಗಳನು ತರಿದು ಬಿಸಾಡುವ ಕೃಷ್ಣಾ ಎನಬಾರದೆ
ಗರುಡ ವಾಹನ ನಮ್ಮ ಪುರಂದರ ವಿಠಲನ ಕೃಷ್ಣಾ ಎನಬಾರದೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ