ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ಜೈ ಜೈ ರಾಮ್ ಹರೇ ಜೈ ಜೈ ಕೃಷ್ಣಾ ಹರೇ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ಭಕ್ತಿಗೀತೆ- ಜೈ ಜೈ ರಾಮ್ ಹರೇ ಜೈ ಜೈ ಕೃಷ್ಣಾ ಹರೇ

ಗಾಯಕರು: ಶ್ರೀ ವಿದ್ಯಾಭೂಷಣ


ಜೈ ಜೈ ರಾಮ್ ಹರೇ
ಜೈ ಜೈ ಕ್ರಷ್ಣಾ ಹರೇ||ಜೈ ಜೈ ರಾಮ್||
ರಾಮ್ ಹರೇ ಹರೇ ರಾಮ್ ಹರೇ ||2||
ಕ್ರಷ್ಣಾ ಹರೇ ಹರೇ ಕ್ರಷ್ಣಾ ಹರೇ||2||
                          ||ಜೈ ಜೈ ರಾಮ್||

ಕೌಶಲ್ಯಜವರ ವಂಶೋಧ್ಭವ ಸುರ
ಸಂಸೇವಿತ ಪದ ರಾಮ ಹರೇ
ಕಂಸಾದ್ಯಸುರರ ಧ್ವಂಸಗೈದ
ಯದುವಂಶೋಧ್ಭವ ಶ್ರೀ ಕ್ರಷ್ಣಾ ಹರೇ
                          ||ಜೈ ಜೈ ರಾಮ್||

ಮುನಿಮಖ ರಕ್ಷಕ ಧನುಜರ ಶಿಕ್ಷಕ
ಫಣಿಧರ ಸನ್ನುತ ರಾಮ ಹರೇ
ಘನವರ್ಣಾಂಗ ಸುಮನಸರೊಡೆಯ
ಶ್ರೀವನಜಾಸನ ಪಿತ ಕ್ರಷ್ಣಾ ಹರೇ
                         ||ಜೈ ಜೈ ರಾಮ್||

ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ
ಸುಲಲಿತ ಗುಣನಿಧಿ ರಾಮ ಹರೇ
ಬಲು ವಕ್ರಾಗಿದ್ದ ಅಬಲೆಯ ಕ್ಷಣದಲಿ
ಚೆಲುವೆಯ ಮಾಡಿದ ಕ್ರಷ್ಣಾ ಹರೇ
                         ||ಜೈ ಜೈ ರಾಮ್||

ಹರಧನು ಭಂಗಿಸೆ ಹರುಷದಿ ಜಾನಕಿ
ಕರವ ಪಿಡಿದ ಶ್ರೀ ರಾಮ ಹರೇ
ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ
ಶರಣರ ಪಾಲಕ ಕ್ರಷ್ಣಾ ಹರೇ
                        ||ಜೈ ಜೈ ರಾಮ್ ||

ಜನಕ ಪೇಳೆ ಲಕ್ಷ್ಮಣಸೀತಾ ಸಹ
ವನಕೆ  ತೆರಳಿದ ರಾಮ್ ಹರೇ
ವನಕೆ ಪೋಗಿ ತನ್ನರುಹರೊಡನೆ
ಗೋವನು ಪಾಲಿಪ ಶ್ರೀಕ್ರಷ್ಣಾ ಹರೇ
                       ||ಜೈ ಜೈ ರಾಮ್||

ತಾಟಕಿ ಖರಮಧು ಕೈಟಾಭಾರಿ
ಪಾಪಾಟವಿ ಸುರಮುಖ ರಾಮ ಹರೇ
ಆಟದಿ ಫಣಿಮೇಲ್ ನಾಟ್ಯವನಾಡಿದ
ಖೇಟವಾಹ ಶ್ರೀ ಕ್ರಷ್ಣಾ ಹರೇ
                      || ಜೈ ಜೈ ರಾಮ್||

ಚದುರೆ ಶಬರಿ ಇತ್ತ ಬದರಿಯ ಫಲವನು
ಮುದದಿ ಸೇವಿಸಿದ ರಾಮ ಹರೇ
ವಿದುರನ ಕ್ಷೀರಕೆ ಒದಗಿ ಪೋದ
ಶ್ರೀ ಪದುಮನಾಭ ಜಯ ಕ್ರಷ್ಣಾ ಹರೇ
                      ||ಜೈ ಜೈ ರಾಮ್||

ಸೇವಿತ ಹನುಮ ಸುಗ್ರೀವನಸಖ
ಜಗತ್ಪಾವನ ಪರತರ ರಾಮ್ ಹರೇ
ದೇವಕಿ ವಸುದೇವರ ಸೆರೆಬಿಡಿಸಿದ
ದೇವದೇವಾ ಶ್ರೀ ಕ್ರಷ್ಣಾ ಹರೇ
                     ||ಜೈ ಜೈ ರಾಮ್||

ಗಿರಿಗಳಿಂದ ವರ ಶರಧಿ ಬಂಧಿಸಿದ
ಪರಮ ಸಮರ್ಥ ಶ್ರೀ ರಾಮ ಹರೇ
ಗಿರಿಯ ತನ್ನ ಕಿರಿಬೆರಳಲೆತ್ತಿ
ಗೋವಳರ ಕಾಯ್ದ ಶ್ರೀ ಕ್ರಷ್ಣಾ ಹರೇ
                     ||ಜೈ ಜೈ ರಾಮ್||

ಖಂಡಿಸಿ ದಶಶಿರ ಚೆಂಡಾಡಿದ
ಕೋದಂಡಪಾಣಿ ಶ್ರೀ ರಾಮ ಹರೇ
ಪಾಂಡುತನಯರಿಂದ ಚಂಡ ಕೌರವರ
ದಿಂಡು ಗೆಡಹಿಸಿದ ಕ್ರಷ್ಣಾ ಹರೇ
                      ||ಜೈ ಜೈ ರಾಮ್||

ತವಕದಿ ಆಯೋಧ್ಯ ಪುರಕೈದಿದ
ತನ್ನ ಯುವತಿಯೊಡನೆ ಶ್ರೀ ರಾಮ ಹರೇ
ರವಿಸುತ ತನಯಗೆ ತನ್ನ ಪಟ್ಟ ಕಟ್ಟಿದ
ಭವತಾರಕ ಶ್ರೀ ಕ್ರಷ್ಣಾ ಹರೇ
                      ||ಜೈ ಜೈ ರಾಮ್ ಹರೇ||

ಭರತನು ಪ್ರಾರ್ಥಿಸಲರಸತ್ವವ
ಸ್ವೀಕರಿಸಿದ ತ್ವರದಲಿ ರಾಮ ಹರೇ
ವರ ಧರ್ಮಾದ್ಯರ ಧರೆಯೊಲು ಮೆರೆಸಿದ
ಪರಮ ಕ್ರಪಾಕರ ಕ್ರಷ್ಣಾ ಹರೇ
                    ||ಜೈ ಜೈ ರಾಮ್ ಹರೇ||

ಧರೆಯೊಳಜ್ಞಜನರನು ಮೋಹಿಪುದಕೆ
ಹರನ ಪೂಜಿಸಿದ ರಾಮ ಹರೇ
ಹರನ ಪ್ರಾರ್ಥಿಸಿ ವರವನು ಪಡೆದ
ಚರಿತೆ ಆಗಾಧವು ಕ್ರಷ್ಣಾ ಹರೇ
                   ||ಜೈ ಜೈ ರಾಮ್ ಹರೇ||

ಅತುಳ ಮಹಿಮ ಸದ್ಯತಿಗಳ ಹ್ರದಯದಿ
ಸತತ ವಿರಾಜಿಪ ರಾಮ್ ಹರೇ
ಸಿತವಾಹನ ಸಾರಥಿ ಎನಿಸಿದ
ಸುರತತಿ ಪೂಜಿತಪದ ಕ್ರಷ್ಣಾ ಹರೇ 
                   ||ಜೈ ಜೈ ರಾಮ್ ಹರೇ||

ರಾಮ ರಾಮ ಎಂದು ನೇಮದಿ ಭಜಿಪರ
ಕಾಮಿತ ಫಲದ ಶ್ರೀ ರಾಮ ಹರೇ
ಪ್ರೇಮದಿ ಭಕ್ತರ ಪಾಲಿಪ 
ಶ್ರೀ ವರದೇಶವಿಠ್ಠಲ ಶ್ರೀ ಕ್ರಷ್ಣಾ ಹರೇ
                     ||ಜೈ ಜೈ ರಾಮ್ ಹರೇ||

Post a Comment

أحدث أقدم