ಆಲಿಸಿ: ಭಕ್ತಿಗೀತೆ- ತಾಯಿ ಚಾಮುಂಡಿಗೆ ನಮೋ ನಮೋ...
ರಚನೆ: ಎಸ್.ಎಲ್. ವರಲಕ್ಷ್ಮೀ ಮಂಜುನಾಥ್ ನಂಜನಗೂಡು.
ಗಾಯನ: ಶೈಲಜಾ ನಾಗರಾಜ್, ಮೈಸೂರು.
ತಾಯಿ ಚಾಮುಂಡಿಗೆ ನಮೋ ನಮೋ...
ತಾಯಿ ವರದೆ ನಿಗಮ ವಂದಿತೆ
ಚಾಮುಂಡಿ ದೇವಿಗೆ ನಮೋ ನಮೋl
ಕಾಯೆ ಎಮ್ಮನು ದಿವ್ಯತೇಜಳೆ
ದೇವಿ ಭಗವತಿ ನಮೋ ನಮೋll
ಶುಂಭ ನಿಶುಂಭ ಮರ್ದಿನಿ
ಶಕ್ತಿರೂಪಿಣಿಯೇ ನಮೋ ನಮೋl
ಹುಂಬರೆಲ್ಲರ ಹುಂಕಾರ ಮಾತ್ರದಿ
ಅಡಗಿಸಿದ ದೇವಿಗೆ ನಮೋನಮೋll
ರಕ್ತ ಬೀಜಾಸುರನ ನೆತ್ತರ ಹೀರಿ
ಭಕ್ತರ ಪೊರೆದವಳೆ ನಮೋ ನಮೋl
ಮುಕ್ತಿದಾತಳೆ ಶಂಭು ಮೋಹಿನಿ
ದುರಿತ ನಿವಾರಿಣಿ ನಮೋ ನಮೋll
ರಣಚಂಡಿರೂಪ ಧರಿಸಿದ ಚಂಡಮುಂಡ
ವಿನಾಶಿನಿ ದೇವಿಗೆ ನಮೋ ನಮೋl
ಕಣಕಣದಿ ವ್ಯಾಪ್ತ ಮಂಗಳಾಂಗಿ
ಕಲ್ಯಾಣಿ ದೇವಿಗೆ ನಮೋನಮೋll
ರೇವತಿ ತಾರೆಯೊಳುದಿಸಿದ ಮಾತೆ
ತಾರಿಣಿ ಧಾರಿಣಿ ನಮೋ ನಮೋl
ಸೇವಿಪ ಜನಕೆ ಅಭಯವ ನೀಡುವ
ದೇವಿ ಜಗದಂಬೆ ನಮೋ ನಮೋll
ಮಹಿಷಮರ್ಧಿನಿ ತ್ರಿಶೂಲಧಾರಿಣಿ
ನಾರಾಯಣಿ ಅಗಜಾತೆ ನಮೋ ನಮೋ l
ಮಹಿಮೆ ತೋರುತಾ ಅರಿಗಳ ತರಿದ ಚಾಮುಂಡಾಂಬೆಗೆ ನಮೋ ನಮೋll
ಪರಮಪಾವನ ಜನ್ಮೋತ್ಸವದ ಶುಭ ಘಳಿಗೆಯಲಿ ನಿನ್ನಯ ಪಾದಕೆ ನಮೋ ನಮೋl
ಪರಿಮಳಪುಷ್ಪದಿ ಶೋಭಿಸಿಹ ಶಂಕರಿ
ಪರತರರೂಪೆಗೆ ನಮೋ ನಮೋll
- ಎಸ್.ಎಲ್.ವರಲಕ್ಷ್ಮೀಮಂಜುನಾಥ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق