ಆಲಿಸಿ: ಭಕ್ತಿಗೀತೆ- ಅಷ್ಟ ಗಣಪತಿಯ ಆರಾಧನೆ
ಗಾಯಕರು: ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ
ಅಷ್ಠ ಗಣಪತಿಯ ಆರಾಧನೆ
ವಿಶಿಷ್ಟ ರೀತಿಯಲಿ ಔಪಾಸನೆ
||ಅಷ್ಠ||
ಶಿಷ್ಟ ರಕ್ಷಕನೇ ದುಷ್ಟ ಶಿಕ್ಷಕನೇ
ಅಭೀಷ್ಟ ನೀಡೆಂದು ನಾ ಬೇಡುವೆ
||ಅಷ್ಠ||
ನವರಾತ್ರಿಯಲಿ ವಿವಿಧ ಪೂಜೆಯ
ಸ್ವೀಕರಿಸುವನೆ ಸಿದ್ಧಿ ಗಣಪತಿ||ನವ||
ಕಾರ್ಯಾರಂಭದಿ ಭಕ್ತರು ನೀಡೋ
ಪೂಜೆಯ ಪಡೆವ ಪ್ರಸನ್ನ ಗಣಪತಿ
|| ಕಾರ್ಯ||
||ಅಷ್ಠ ||
ಲಕ್ಷ್ಮೀದೇವಿ ವರಪಡೆದ ಶುಭ
ಲಕ್ಷಣಮೂರ್ತಿ ಲಕ್ಷ್ಮೀಗಣಪತಿ
||ಲಕ್ಷ್ಮೀ||
ಕೃಷ್ಣ ನೀಡಿದ ಹಾರವ ಧರಿಸಿ||೨||
ಶೋಭಿಸುವಂತ ಚಿಂತಾಮಣಿ ಗಣಪತಿ
||ಅಷ್ಠ||
ಅಕ್ಷರ ಬರೆದನು ಆನಂದ ಗಣಪತಿ
ಮುಕ್ತಿಯ ಕೊಡುವ ಶಕ್ತಿ ಗಣಪತಿ
||ಅಕ್ಷರ||
ಕಷ್ಟ ನಿವಾರಕ ಉಚ್ಚಿಷ್ಟ ಗಣಪತಿ||೨||
ಬುದ್ಧಿ ದಾಯಕ ಕುಮಾರ ಗಣಪತಿ
||ಅಷ್ಠ ||
ಕಾಮೆಂಟ್ ಪೋಸ್ಟ್ ಮಾಡಿ