ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಕನ್ನಡ ಕುವರಿಯ ಓಣಂ ಹಾಡು ಪೊನ್ ಚಿಙ್ಙ ಪ್ಪುಲರಿ- ಸೂಪರ್ ಹಿಟ್ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Adಕಾಸರಗೋಡು: ನಮ್ಮ ಕನ್ನಡದ ಕುವರಿ ಪುಟಾಣಿ ಸಂವೃತಾ ಪೇರಿಯ ಹಾಡಿರುವ ಓಣಂ ಹಬ್ಬದ ಹಾಡು ಇದು.


ಈ ಹಾಡಿನ ವೀಡಿಯೋ ಚಿತ್ರೀಕರಣಕ್ಕೆ ಬಹಳ ಪೂರ್ವ ತಯಾರಿ ಏನೂ ಇರಲಿಲ್ಲ. ಕೇರಳದ ಪ್ರಧಾನ ಹಬ್ಬವಾದ ಓಣಂ ಬರುತ್ತಿದ್ದಂತೆ, ಸಂಗೀತದಲ್ಲಿ ಅಪಾರ ಆಸಕ್ತಿ ಇರುವ ಪುಟಾಣಿ ಸಂವೃತಾಳಿಂದ ಇಂತಹದೊಂದು ಹಾಡು ಹಾಡಿಸಿ ರೆಕಾರ್ಡ್ ಮಾಡಿ ಯೂಟ್ಯೂಬ್ ಚಾನೆಲ್‌ನಲ್ಲಿ ಬಿತ್ತರಿಸಿದರೆ ಹೇಗೆ ಎಂಬ ಯೋಚನೆ ಆಕೆಯ ಹೆತ್ತವರಲ್ಲಿ ಮೊಳೆತದ್ದೇ ತಡ, ತಕ್ಷಣವೇ ಕಾರ್ಯಪ್ರವೃತ್ತರಾದರು.


ಸಂವೃತಾಳ ತಂದೆ ಗಣೇಶ್ ಭಟ್ ಪೇರಿಯ ತಮ್ಮ ಸ್ನೇಹಿತ ಬಳಗದವರ ಬಳಿ ವಿಚಾರಿಸಿದಾಗ ಬಹಳ ಉತ್ತಮವಾದ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಬೆಂಬಲ, ಸಹಕಾರ ದೊರಕಿತು. ಸಂವೃತಾಳ ಅಮ್ಮ ಸ್ವಾತಿ ಭಟ್ ಪೇರಿಯ ಕೂಡ ಸಂಗೀತಗಾರ್ತಿಯಾಗಿರುವುದರಿಂದ ಸಂವೃತಾಗೆ ಸಹಜವಾಗಿಯೇ ಉತ್ತಮ ಶಾರೀರ ಮತ್ತು ಗಾಯನ ಪ್ರತಿಭೆ ಹುಟ್ಟಿನಿಂದಲೇ ಬಂದಿದೆ.ರಾಧಾ ಬೇಡಕಂ ಎಂಬವರು ಬರೆದ ಸಾಹಿತ್ಯಕ್ಕೆ ವೃತ್ತಿಪರ ಗಾಯಕರಾದ ರಾಗೇಶ್ ಪರಯಂಪಳ್ಳಂ ಸಂಗೀತ ಸಂಯೋಜನೆ ಮಾಡಿದ್ದಾರೆ. ವೀಡಿಯೋ ಚಿತ್ರೀಕರಣ ಮತ್ತು ಸಂಕಲನ ಅಶ್ವಥ್‌ ಕಾಸರಗೋಡು. ಆರ್ಕೆಸ್ಟ್ರಾ ಫಿರೋಜ್ ಕಾಸರಗೋಡು.

ಹಾಡಿನ ಪೂರ್ಣ ಸಾಹಿತ್ಯ ಇಲ್ಲಿದೆ:

ಪೊನ್‍ಚಿಙ್ಙ ಪುಲರಿಯೊರುಙ್ಙಿ 

ಕಿರಣಙ್ಙಳ್‍ ಪೂಕ್ಕಳಮಿಟ್ಟು

ಮೞವಿಲ್ಲಿನ್‍ ವರ್ಣತ್ತಾಲೊರು

ಪೊನ್ನೂಞ್ಞಾಲ್‍ ತೀರ್ಕುನ್ನುಣ್ಡೇ

ಪೂವೇ ಪೊನ್‍ ಪುಲರಿ ಪೂವೇ..

ಪೂವೇ ಪೊನ್‍ ಪುಲರಿ ಪೂವೇ.. || ಪ ||


ನಿಱಪಱ ಪ್ಪೂತ್ತಾಲವುಮಾಯಿ,

ಆವಣಿ ಪೆಣ್ಣ್ ವರುಮ್ಪೋಳ್‍,

ತಿರುವೋಣಪ್ಪಾಟ್ಟುಕಳ್‍ ಮೂಳಿ 

ವನ್ನಲ್ಲೋ ಪೊನ್‍ಕುಯಿಲಮ್ಮ

ಪೂವೇ ಪೊನ್‍ ಪುಲರಿ ಪೂವೇ..

ಪೂವೇ ಪೊನ್‍ ಪುಲರಿ ಪೂವೇ.. || ೧ ||


ಕುಡವಯಱಿಲ್‍ ಕಸವಾಡಯುಮಾಯ್ 

ಮಾವೇಲಿ ಎತ್ತುಂನ್ನೇರಂ

ತಿರುವೋಣಕ್ಕಳಿಯುಂ ಮೇಳಂ

ಪೋನ್ನೋಣಸದ್ಯಯುಮುಣ್ಟೇ

ಪೂವೇ ಪೊನ್‍ ಪುಲರಿ ಪೂವೇ..

ಪೂವೇ ಪೊನ್‍ ಪುಲರಿ ಪೂವೇ.. || ೨ ||


* * *


5ನೇ ತರಗತಿಯಲ್ಲಿ ಓದುತ್ತಿರುವ ಸಂವೃತಾಳ ಶಾಲೆ- ಕಾಸರಗೋಡಿನ ಚಿನ್ಮಯಾ ವಿದ್ಯಾಲಯದ ಆವರಣದಲ್ಲೇ ಹಾಡಿನ ಚಿತ್ರೀಕರಣ ನಡೆದಿದೆ. ಶಾಲೆಯ ಶಿಕ್ಷಕಿಯರು ತಿರುವಾದಿರ ನೃತ್ಯವನ್ನು ಪ್ರಸ್ತುತಪಡಿಸಿದ್ದಾರೆ.


ಕೇವಲ ಒಂದು ವಾರದ ಅವಧಿಯಲ್ಲಿ ಸಂಪೂರ್ಣ ಸಿದ್ಧಗೊಂಡಿರುವ ವೀಡಿಯೋ ಆಲ್ಬಂ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಆದ ಕೇವಲ 11 ಗಂಟೆಗಳಲ್ಲಿ ಯಾವುದೇ ಪ್ರಚಾರವಿಲ್ಲದೆ 2.500ಕ್ಕೂ ಅಧಿಕ ವೀಕ್ಷಣೆ ಕಂಡಿದೆ.ಸಂವೃತಾ ಹಾಡಿರುವ ಕನ್ನಡದ ಭಾವಗೀತೆಯನ್ನೂ ಆಲಿಸಿ. ಎರಡೂ ಭಾಷೆಗಳಲ್ಲಿ ಅವಳಿಗಿರುವ ಸ್ಪಷ್ಟ ಉಚ್ಚಾರ, ಭಾಷಾ ಶುದ್ಧಿ ಇರುವುದು ಶ್ಲಾಘನೀಯ. ಎಲ್ಲರ ಪ್ರೋತ್ಸಾಹ, ಶುಭಹಾರೈಕೆಗಳು ಅವಳಿಗಿರಲಿ.
- ಟೀಂ ಉಪಯುಕ್ತ ನ್ಯೂಸ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

ನವೀನ ಹಳೆಯದು