ಅಲ್ಲಿ ನೋಡಲು ರಾಮ
ಶ್ರೀರಾಮ ಇಲ್ಲಿ ನೋಡಲು ರಾಮ
||ಅಲ್ಲಿ||
ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ||ಅಲ್ಲಿ||
ಎಲ್ಲೆಲ್ಲಿ ನೋಡಿದರಲ್ಲಿ ಶ್ರೀರಾಮ
||ಅಲ್ಲಿ||
ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೆ ಬೆದರಿ ಓಡಿದವೂ
||ರಾವಣನ||
ಈ ವೇಳೆ ನರನಾಗಿ ಇರಬಾರದೆಂದೆಣಿಸಿ||2||
ದೇವ ರಾಮಚಂದ್ರ ಜಗವೆಲ್ಲ ತಾನಾದ
||ಅಲ್ಲಿ||
ಅವನಿಗೆ ಇವ ರಾಮ, ಇವನಿಗೆ ಅವ ರಾಮ
ಅವನಿಯೊಳೀಪರಿ ರೂಪವುಂಟೆ
||ಅವನಿಗೆ||
ಲವಮಾತ್ರದಿ ಅಸುರ ದುರುಳರೆಲ್ಲರು||2||
ಅವರವರೆ ಹೊಡೆದಾಡಿ ಹತರಾಗಿ ಹೋದರು
||ಅಲ್ಲಿ||
ಹನುಮಾದಿ ಸಾಧುಜನರು ಅಪ್ಪಿಕೊಂಡು
ಕುಣಿಕುಣಿದಾಡಿದರು ಹರುಷದಿಂದ
||ಹನುಮಾದಿ||
ಕ್ಷಣದಲ್ಲಿ ಪುರಂದರ ವಿಠಲರಾಯನು||2||
ಕೊನೆಗೊಡೆಯನು ತಾನೊಬ್ಬನಾಗಿ ನಿಂತ
||ಅಲ್ಲಿ||
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ