ಕುರುಕ್ಷೇತ್ರ ಯುದ್ಧದಲ್ಲಿ ಭಗವಂತನಾದ ಕೃಷ್ಣನೇ ಅರ್ಜುನನಿಗೆ ಸಾರಥಿ. ಸಾರಥಿ ಹೇಳಿದಂತೆ ರಥಿಕ, ರಥಿಕ ಹೇಳಿದಂತೆ ಸಾರಥಿ. ಈ ಸಮನ್ವಯದಲ್ಲಿ ಕೃಷ್ಣಾರ್ಜುನರು ಒಂದೇ ರಥದಲ್ಲಿ. ರಥದಲ್ಲಿ ಕೃಷ್ಣ ಸಾರಥಿಯಾಗಿರುವಷ್ಟು ಕಾಲ ಅರ್ಜುನನನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ.
ಇಂತಹದೇ ಒಂದು ಸಮನ್ವಯದಲ್ಲಿ ಕರ್ಣ ಶಲ್ಯರು ಒಂದೇ ರಥದಲ್ಲಿ ಇದ್ದರೆ? ಹೌದು, ಹಾಗಿದ್ದಾಗ ಕರ್ಣನನ್ನೂ ಕೂಡ ಯಾರೂ ಸೋಲಿಸಲು ಸಾಧ್ಯವಿಲ್ಲ. ಅರ್ಜುನನಿಗೂ ಕರ್ಣನನ್ನು ಸೋಲಿಸಲು ಸಾಧ್ಯವಿಲ್ಲ. ಅಂತಹ ಒಂದು ವರ ಪರಶುರಾಮರಿಂದ ಕರ್ಣನಿಗೆ ಸಿಕ್ಕಿರುತ್ತದೆ.
ಆ ರಹಸ್ಯವನ್ನು ಹೇಳಿ, ಕೌರವನು ಮದ್ರದೇಶಾಧಿಪತಿ ಶಲ್ಯನನ್ನು ಒಂದು ದಿನಕ್ಕೆ ಕರ್ಣನ ಸಾರಥಿಯಾಗುವಂತೆ ಸಂಧಾನ ಮಾಡುವ ಪ್ರಸಂಗ. ಕುಮಾರವ್ಯಾಸ ಕವಿಯ ಕರ್ಣಾಟ ಭಾರತ ಕಥಾ ಮಂಜರಿಯ ಒಂದು ಪುಟ್ಟ ಕಥಾ ಭಾಗ.
**
ಗಮಕಾರ್ಥಗಾರಿಕೆ
ಪ್ರಸಂಗ: ಶಲ್ಯ ಸಾರಥ್ಯ ಸಂಧಾನ
ವಾಚನ: ಶ್ರೀಮತಿ ಗಾಯತ್ರಿ ನಾಗರಾಜ್, ಉಂಟುವಳ್ಳಿ.
ಶಲ್ಯ: ಅಶೋಕ ಸಿಗದಾಳ್.
ದುರ್ಯೋಧನ: ಅರವಿಂದ ಸಿಗದಾಳ್. ಮೇಲುಕೊಪ್ಪ.
**
ವಾಚನ ಮತ್ತು ಮಾತು ಕೇಳಲು ಶಲ್ಯನ ರಾಜ ಮಂದಿರಕ್ಕೆ ದಾರಿ:
**
- ಅರವಿಂದ ಸಿಗದಾಳ್, ಮೇಲುಕೊಪ್ಪ.
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ