ಮುಂಜಾನೆಯ
ಹೂ ಬಿಸಿಲಲಿ
ಹಾಲು ಬಿಳುಪಿನ
ಚೆಲುವೆ ಬುಟ್ಟಿ
ತುಂಬ ಹೂವ
ಮಾರಲು ಬಂದಿಹಳು
ಹೂರಣದ ಅರಸಿ
ಮಾತಿನ ಸರಸಿ
ಹೆಸರು ವಿಲಾಸಿ
ಇವಳೇ ಹೂವಾಡಗಿತ್ತಿ
ಪ್ರೀತಿಯಲ್ಲಿ ಕರೆಯುವರು
ವಸಂತಿ.... ವಸಂತಿ...
ಅವಳ ಮನಸಿರಿಯ ಕರೆಗೆ
ಬುಟ್ಟಿಯಲಿ ನಗುವ ಮಲ್ಲಿಗೆ
ಮುಡಿಯಲ್ಲಿ ಮೆಲ್ಲಗೆ
ಬಿರಿವ ನಗುವ ಚೆಲ್ಲಿ
ಘಮಘಮಿಸುವ ಹೂವೇ
ಆ ಮಲ್ಲಿಗೆ ನಾನೆಂದಿತು
ಹಸಿರೆಲೆ ಮರೆಯಲಿ
ಹೂ ಮನದ ಕನ್ನಿಕೆ
ಗುಡಿಯಲಿ ಮುಡಿಯಲಿ
ನೀನಿಲ್ಲದೆ ಏನಿದೆ
ತನುವರಳಿಸಿ ಮನದ
ಮೂಲೆ ಮೂಲೆಯಲೂ
ಘಮದ ಪಿಸುಮಾತನಾಡಿ
ನಲಿವ ನೀನು ನೀನೆ..!
• ಚಂದ್ರಹಾಸ ಕೋಟೆಕಾರ್
(ಕನ್ನಡ ಸಾಪ್ತಾಹಿಕ ಪತ್ರಿಕೆಗಳ ಪೈಕಿ ಬಹಳ ಜನಪ್ರಿಯತೆ ಪಡೆದಿದ್ದು, ಈಗ ಕಾಲದ ಹೊಡೆತಕ್ಕೆ ಸಿಲುಕಿ ಪ್ರಕಟಣೆ ನಿಲ್ಲಿಸಿರುವ ಮಂಗಳ ವಾರಪತ್ರಿಕೆಯಲ್ಲಿ ಹಿಂದೊಮ್ಮೆ ಪ್ರಕಟವಾಗಿದ್ದ ಕವನವಿದು)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ