ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಶ್ರೀಕೃಷ್ಣ ಜನ್ಮಾಷ್ಟಮಿ (ಕಿರಿಯರ ಕವನ) ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ದೇವಕಿ ಕಂದನು ಜನಿಸಿದನಿಂದು 

ಮಾವ ಕಂಸನ ವಧಿಸಲಿಕೆ |

ದುಷ್ಟರ ಮರ್ದನ ಮಾಡುತಲವನು  

ಶಿಷ್ಟರ ಬಿಡದೇ ಸಲಹುವನು || 


ಅಷ್ಟಮಿ ರೋಹಿಣಿ ಪರ್ವದ ಕಾಲದಿ 

ಕೃಷ್ಣನು ಧರೆಗವತರಿಸಿದನು | 

ವೃಷ್ಟಿಯು ಸುರಿಯಿತು ದೇವರು ಜನಿಸಲು 

ಕಷ್ಟಗಳೆಲ್ಲವ ಪರಿಹರಿಸೆ ||


ಎಂಟನೆ ವಸುವು ಜನಿಸಿದ ತಾಣವು 

ಶುಂಠ ಕಂಸನ ಸೆರೆಮನೆಯು | 

ನೆಂಟನು ತಾನೆಂಬುದ ನೋಡದೆ 

ಕಂಠೀರವನನು ವಧಿಸಲು ಹೊರಟ || 


ಲೋಕದ ಗುರುವನು ಕೊಲ್ಲುವುದುಂಟೆ 

ಧೂರ್ತಕಂಸನು ತಿಳಿಗೇಡಿ |

ನಾಕವ ನರಕವನೊಂದೂ ಬಿಡದೆ  

ಮೂರಡಿ ಮಾಡಿದ ವೀರನನು||

   


ಇಂದಿದೊ ಬಂದಿದೆ ಕೃಷ್ಣಾಷ್ಟಮಿಯು 

ದೇವರು ಜನಿಸಿದ ಶುಭದಿನವು |

ಬಯಸುವೆ ನಾನಿದೊ ಬಳಗದ ನಿಮಗೆ 

ಹಬ್ಬದ ಸಂಭ್ರಮ ಶುಭವನ್ನು|| 



ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು 


ವಸುದೇವ ಸುತಂ ದೇವಂ 

ಕಂಸ ಚಾಣೂರ ಮರ್ದನಂ 

ದೇವಕೀ ಪರಮಾನಂದಂ 

ಕೃಷ್ಣಂ ವಂದೇ ಜಗದ್ಗುರುಂ 


ಆಶುಕವನ ರಚನೆ:- ವಿ.ಬಿ.ಕುಳಮರ್ವ, ಕುಂಬ್ಳೆ


ಹಾಡಿದವರು :- ಕು| ಅವನಿಶ್ರೀ ಕುಳಮರ್ವ


Post a Comment

ನವೀನ ಹಳೆಯದು