ಹಸುವಿನ ಎಳೆಯ ಕರುಗಳನ್ನು ಕೈಕಾಲು ಕಟ್ಟಿ ಗೋಣಿಚೀಲದಲ್ಲಿ ಅಮಾನುಷವಾಗಿ ತುಂಬಿ ದ್ವಿಚಕ್ರ ವಾಹನದಲ್ಲಿರಿಸಿಕೊಂಡು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಜರಂಗದಳ ಕಾರ್ಯಕರ್ತರು ತಡೆದು ಕರುಗಳನ್ನು ರಕ್ಷಿಸಿದ ಘಟನೆ ನೆಲಮಂಗಲ ಬಳಿ ನಡೆದಿದೆ.
ಈ ಘಟನೆಯ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದು, ಬಜರಂಗದಳದ ನೆಲಮಂಗಲ ಕಾರ್ಯಕರ್ತರು ಈ ಕರುಗಳನ್ನು ರಕ್ಷಿಸಿದ್ದಾರೆ.
ಮುಸ್ಲಿಂ ವ್ಯಕ್ತಿಯೊಬ್ಬ ಮುಗ್ದಕರುಗಳನ್ನು ಕೈಕಾಲು ಕಟ್ಟಿ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಆತನನ್ನು ತಡೆದು ನಿಲ್ಲಿಸಿದರು.
ಸ್ಕೂಟರ್ ಒಂದರಲ್ಲಿ ಮೂರು ಗೋಣಿಚೀಲಗಳನ್ನು ಇರಿಸಿ ಆತ ಒಯ್ಯುತ್ತಿರುವುದು ಕಂಡುಬಂತು. ಆತನನ್ನು ತಡೆದು ನಿಲ್ಲಿಸಿ ಚೀಲಗಳನ್ನು ಬಿಡಿಸಿ ನೋಡಿದಾಗ ಮೂರು ಕರುಗಳು ಅದರೊಳಗಿದ್ದವು.
ಈ ದೃಶ್ಯದ ವೀಡಿಯೋ ಇಲ್ಲಿದೆ ನೋಡಿ:
إرسال تعليق