ಬಾಲ ಶಂಕರರು ಭಿಕ್ಷೆಗೆಂದು ಮನೆಯೊಂದರ ಮುಂದೆ ನಿಂತು 'ಭವತಿ ಭಿಕ್ಷಾಂದೇಹಿ' ಎಂದಿದ್ದಾರೆ. ಬಡತನವೇ ಮೈವೆತ್ತ ಆ ಮನೆಯ ಒಡತಿಗೆ ಬಾಲಬ್ರಹ್ಮಚಾರಿಗೆ ಕೊಡಲೇನೂ ಇಲ್ಲದ ಸಂಕಟ. ಮನೆಯೆಲ್ಲ ಹುಡುಕಿ ಆಕೆ ಕೊನೆಗೊಂದು ಒಣಗಿದ ನೆಲ್ಲಿಕಾಯಿಯನ್ನು ಭಿಕ್ಷೆಯಾಗಿ ನೀಡುತ್ತಾಳೆ. ಅವಳ ದಾರಿದ್ರ್ಯ ಮತ್ತು ಔದಾರ್ಯವನ್ನು ಕಂಡು ಕರುಣೆಗೊಂಡು ಶಂಕರರು ಶ್ರೀಲಕ್ಷ್ಮಿಯನ್ನು ಕನಕಧಾರೆಗಾಗಿ ಪ್ರಾರ್ಥಿಸತೊಡಗುತ್ತಾರೆ.
ಆ ಸ್ತೋತ್ರವೇ ಕನಕಧಾರಾ ಸ್ತೋತ್ರವೆಂದು ಪ್ರಸಿದ್ಧವಾಗಿದೆ. ಈ ಸ್ತೋತ್ರದ ನಿತ್ಯಪಠಣದಿಂದ ಕುಟುಂಬದಲ್ಲಿ ಸುಖ-ಸಮೃದ್ಧಿಗಳು ನೆಲೆಸುತ್ತವೆ.
ಶ್ರೀರಾಮಚಂದ್ರಾಪುರ ಮಠದ ಪ್ರಸ್ತುತಿಯನ್ನು ಉಪಯುಕ್ತ ನ್ಯೂಸ್ ಓದುಗರಿಗಾಗಿ ಇಲ್ಲಿ ನೀಡಲಾಗುತ್ತಿದೆ.
ಕಾಮೆಂಟ್ ಪೋಸ್ಟ್ ಮಾಡಿ