ಯಂತ್ರಗಳನ್ನು ಮತ್ತು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನು ಬಳಸಿ ಬೃಹತ್ಪ್ರಮಾಣದಲ್ಲಿ ಕೃಷಿ ಮಾಡುತ್ತಿರುವುದರ ಹಲವು ದುಷ್ಪರಿಣಾಮಗಳು ಈಗಾಗಲೇ ಸಾಕಷ್ಟು ಗೋಚರವಾಗಿದೆ. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ, ಪ್ರಕೃತಿ ಸ್ನೇಹಿ ಕೃಷಿ ಪದ್ಧತಿಯತ್ತ ಕೆಲವರಾದರೂ ಮರಳುತ್ತಿದ್ದಾರೆ.
ಹಾಗಿದ್ದರೂ ಸಮಾಜದಲ್ಲಿ ಮತ್ತೆ ಗೋಸಂರಕ್ಷಣೆ, ಪಶು ಸಂಪತ್ತಿನ ಸದ್ಬಳಕೆಯ ಜಾಗೃತಿ ಮೂಡುತ್ತಿರುವುದು ಆಶಾದಾಯಕ ಸಂಗತಿಯಾಗಿದೆ. ಹೀಗೆ ಸಾಮಾಜಿಕ ಜಾಲತಾಣದ ಮೂಲಕ ಬಂದ ಸಾಂಪ್ರದಾಯಿಕ ಗದ್ದೆ ಉಳುಮೆ ದೃಶ್ಯವೊಂದು ಇಲ್ಲಿದೆ.
ನಮ್ಮೆಲ್ಲರ ಬಾಲ್ಯದಲ್ಲಿ ಇಂತಹ ದೃಶ್ಯಗಳನ್ನು ನೋಡಿ, ಪಾಲ್ಗೊಂಡು ಸಂಭ್ರಮಿಸಿದ್ದರೂ ಈಗ ಮತ್ತೊಮ್ಮೆ ನೆನಪಿಸಿಕೊಳ್ಳುವ ಪ್ರಯತ್ನವಾಗಿ ಹಾಗೂ ನವಪೀಳಿಗೆಯ ಓದುಗರಿಗೆ ಹೀಗೊಂದು ಪದ್ಧತಿ ಇತ್ತು ಎಂಬುದನ್ನು ತೋರಿಸಿಕೊಡುವುದಕ್ಕಾಗಿ ಉಪಯುಕ್ತ ನ್ಯೂಸ್ ಈ ವೀಡಿಯೋವನ್ನು ಇಲ್ಲಿ ಬಿತ್ತರಿಸುತ್ತಿದೆ.
ಕಾಮೆಂಟ್ ಪೋಸ್ಟ್ ಮಾಡಿ