ಕರಾವಳಿ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಪತ್ರೊಡೆ, ವಿಶೇಷವಾಗಿ ಮಳೆಗಾಲದಲ್ಲಿ ಮಾಡುವ ತಿಂಡಿ. ಮಳೆಗಾಲದಲ್ಲಿ ಯಾಕೆ ವಿಶೇಷ ಎಂದರೆ ಕೆಸುವಿನ ಎಲೆ ಚೆನ್ನಾಗಿ ಬೆಳೆಯುವ ಕಾಲವಾದ್ದರಿಂದ ಲಭ್ಯತೆ ಸಾಕಷ್ಟಿರುತ್ತದೆ. ಈ ಪತ್ರೊಡೆ ಮಾಡುವ ವಿಧಾನವನ್ನು ಹೋಮ್ ಆಫ್ ಟೇಸ್ಟ್ ಯೂಟ್ಯೂಬ್ ಚಾನೆಲ್‌ನ ದೀಪ್ತಿ ಗಣಪತಿ ಅವರು ಇಲ್ಲಿ ಉಪಯುಕ್ತ ನ್ಯೂಸ್ ಜತೆ ಹಂಚಿಕೊಂಡಿದ್ದಾರೆ.
ಪತ್ರೊಡೆ ಮಾಡುವ ವಿಧಾನ:
🖤: ಒಂದು ಪಾತ್ರೆಯಲ್ಲಿ ಎಣ್ಣೆ, ಉದ್ದಿನ ಬೇಳೆ, ಮೆಂತೆ, ಜೀರಿಗೆ, ಒಣ ಮೆಣಸು, ಕೊತ್ತಂಬರಿ, ಹಿಂಗು, ಕರಿಬೇವು ಹಾಕಿ ಹುರಿಯಿರಿ.
🖤: ನಂತರ ಮಿಕ್ಸಿಯಲ್ಲಿ ಹಾಕಿ ನೆನೆಸಿ ಇಟ್ಟ ಅಕ್ಕಿ, ಹುಣಸೆ ಹುಳಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ರುಬ್ಬಿ.
🖤: ರುಬ್ಬಿಕೊಂಡ ಮಿಶ್ರಣವನ್ನು ಎಲೆಯ ಮೇಲೆ ಸವರಿ.
🖤: 4-5 ಎಲೆಗಳನ್ನು ಒಂದರಮೇಲೊಂದು ಹಾಕಿ ಚೆನ್ನಾಗಿ ಮಡಚಿ.
🖤: ನಂತರ 1/2 ಗಂಟೆ ಕಾಲ ಹಬೆಯಲ್ಲಿ ಬೇಯಿಸಿ.
🖤: ಬೆಂದ ನಂತರ ತುಂಡು ಮಾಡಿ ತವಾದಲ್ಲಿ ಎಣ್ಣೆ ಹಾಕಿ ಎರಡೂ ಕಡೆ ಫ್ರೈ ಮಾಡಿ.
-ದೀಪ್ತಿ ಗಣಪತಿ
إرسال تعليق