ಒತ್ತು ಶ್ಯಾವಿಗೆ (Ottu Shyavige)
: 3:1 ಪ್ರಮಾಣದಲ್ಲಿ ಕುಚ್ಚಲಕ್ಕಿ ಹಾಗೂ ದೋಸೆ ಅಕ್ಕಿಯನ್ನು ನೆನೆಸಿ ಇಡಿ
: ನುಣ್ಣಗೆ ರುಬ್ಬಿಕೊಳ್ಳಬೇಕು
: ಒಂದು ಬಾಣಲೆಯಲ್ಲಿ 2-3tbsp ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ
: ಚೆನ್ನಾಗಿ ಕಲಸಿ ಕಾಯಿಸಬೇಕು
: ಬಾಣಲೆಯ ತಳ ಬಿಡುವಷ್ಟು ಕಾಯಿಸಿ, ಹಿಟ್ಟು ಸ್ವಲ್ಪ ಗಟ್ಟಿಯಾಗುತ್ತದೆ
: ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಬೇಕು.
: ನಂತರ ಸಣ್ಣ ಉಂಡೆಗಳನ್ನು ಮಾಡಿ
: ಕೈಗೆ ಸ್ವಲ್ಪ ನೀರು ಸವರಿ ಉಂಡೆಗಳನ್ನು ಮಾಡಿ. ಹಿಟ್ಟು ಅಂಟಿಕೊಳ್ಳುವುದಿಲ್ಲ.
: ನಂತರ ಸುಮಾರು ಒಂದು ಗಂಟೆಯ ಕಾಲ ಬೇಯಿಸಿ.
: ಶ್ಯಾವಿಗೆ ಮಣೆಯಲ್ಲಿ ಹಾಕಿ ಒತ್ತಬೇಕು
: ಬೇಯಿಸಿದ ಉಂಡೆಗಳು ತಣ್ಣಗಾಗುವ ಮೊದಲು ಶ್ಯಾವಿಗೆ ಒತ್ತಬೇಕು. ತಣ್ಣಗಾದರೆ ಒತ್ತಲು ಕಷ್ಟ
: ಕಾಯಿ ಹಾಲು, ಬಾಳೆ ಹಣ್ಣಿನ ರಸಾಯನ, ಮೆಂತೆ ಸಾರು, ಸಾಂಬಾರ್‌ನೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.
- ದೀಪ್ತಿ ಗಣಪತಿ
إرسال تعليق