ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಈಗ ಕನ್ನಡದಲ್ಲೇ ನಿಮ್ಮ ಮಿಂಚಂಚೆ ರಚಿಸಿಕೊಳ್ಳಿ; ಭಾರತೀಯ ಭಾಷೆಗಳಲ್ಲಿ ಇ-ಮೇಲ್‌, ಡೊಮೈನ್ ನೋಂದಣಿಗೆ ಅವಕಾಶ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಮಂಗಳೂರು: ಅಂತರ್ಜಾಲ ಪ್ರಪಂಚದಲ್ಲೊಂದು ಹೊಸ ಬೆಳವಣಿಗೆಯಾಗಿದೆ. ಇನ್ನುಮುಂದೆ ನಾವು ನಮ್ಮ ಇ-ಮೇಲ್ ವಿಳಾಸ, ಜಾಲತಾಣದ ಡೊಮೈನ್ ಹೆಸರುಗಳನ್ನು ಕನ್ನಡದಲ್ಲೇ ರಚಿಸಿಕೊಳ್ಳಬಹುದು.

ಗ್ರಾಮೀಣ ಭಾರತದಲ್ಲೂ ಇಂಟರ್ನೆಟ್‌ನ ಸಮರ್ಥ ಬಳಕೆಗೆ ಅನುಕೂಲವಾಗುವಂತೆ ಭಾರತ ಸರಕಾರ ಎಲ್ಲ ಭಾರತೀಯ ಭಾಷೆಗಳಲ್ಲಿ ಇ-ಮೇಲ್ ಐಡಿ ಮತ್ತು ಡೊಮೈನ್ ನೇಮ್ ರಚಿಸಲು ಅವಕಾಶ ಮಾಡಿಕೊಟ್ಟಿದೆ. ಇನ್ನು ಮುಂದೆ ಗೂಗಲ್‌ ಅಥವಾ ಇತರ ವಿದೇಶಿ ಸಂಸ್ಥೆಗಳಿಂದ ಇಮೇಲ್‌ ಮತ್ತು ಡೊಮೈನ್‌ ಹೆಸರು ಪಡೆಯುವ ಅನಿವಾರ್ಯತೆ ಇಲ್ಲ. ನಮಗೆ ಬೇಕಾದಂತೆ ನಮ್ಮ ಇಷ್ಟದ ಭಾಷೆಗಳಲ್ಲೇ ಅವುಗಳನ್ನು ರಚಿಸಿಕೊಳ್ಳಬಹುದು.

ಇಂಗ್ಲಿಷೇತರ ಭಾಷೆಗಳಲ್ಲೂ ಜಾಲತಾಣ ವಿಳಾಸ ಇರಬೇಕು ಎಂಬುದು ಭಾರತೀಯರ ಕನಸಾಗಿತ್ತು. ಅದೇ ರೀತಿ ಕನ್ನಡದಲ್ಲೂ ಈ ಸೌಲಭ್ಯ ಬರಬೇಕೆಂಬುದು ಬಹುಪಾಲು ಕನ್ನಡ ಪ್ರೇಮಿಗಳ ಆಸೆಯಾಗಿತ್ತು. 

ಇದೀಗ ಕನ್ನಡಲಿಪಿಯ ಜಾಲತಾಣಗಳೂ ಸಿಗುತ್ತವೆ. ಸದ್ಯಕ್ಕೆ ಡಾಟ್ ಭಾರತ (.ಭಾರತ) ಎಂಬ ಮೊದಲ ಹಂತದ ಡೊಮೈನ್ ಲಬ್ಯವಿದೆ. ಮುಂದಕ್ಕೆ ಡಾಟ್ ಕರ್ನಾಟಕ (.ಕರ್ನಾಟಕ) ಕೂಡ ಸಿಗಲಿದೆ ಎಂದು ಮುಖ್ಯಮಂತ್ರಿಗಳ ತಂತ್ರಜ್ಞಾನ ಸಲಹೆಗಾರ ಬೇಳೂರು ಸುದರ್ಶನ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈಗಾಗಲೇ ಕೆಲವರು ತಮ್ಮ ಮಿಂಚಂಚೆ (ಇ-ಮೇಲ್‌)ಗಳನ್ನು ಕನ್ನಡದಲ್ಲಿ ರಚಿಸಿಕೊಂಡಿದ್ದಾರೆ.

ಕನ್ನಡದಲ್ಲಿ ಡೊಮೈನ್ ನೇಮ್ ಕೂಡ ರಚಿಸಿಕೊಳ್ಳುವ ಪ್ರಕ್ರಿಯೆಗಳು ಆರಂಭವಾಗಿವೆ.


Key Words: Kannada email, Kannada Domain name, Technology, ಕನ್ನಡ ಡೊಮೈನ್ ಹೆಸರು, ಕನ್ನಡದಲ್ಲಿ ಇ-ಮೇಲ್, ಟೆಕ್‌ ಮಾಹಿತಿ, ತಂತ್ರಜ್ಞಾನ

Post a Comment

ನವೀನ ಹಳೆಯದು