ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಗೋಮಯ ಗಣಪನ ಪೂಜಿಸಿ, ಪರಿಸರ ಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಅಷ್ಟಮಿ ಮುಗಿಯಿತು.  ಅದಾಗಿ ಎಂಟನೆ ದಿನಕ್ಕೆ ಅಮಾವಾಸ್ಯೆ, ನಂತರ ನಾಲ್ಕನೇ ದಿನವೇ ಚೌತಿ. ಪ್ರಥಮ ಪೂಜಿತ ಗಣಪನ ಹಬ್ಬ ಗಣೇಶ ಚತುರ್ಥಿ. ಪರಿಸರ ಸ್ನೇಹಿ ಗಣಪನ ಮೂರ್ತಿಗಳನ್ನು ಪೂಜಿಸಿ ಮಾಲಿನ್ಯ ತಡೆಗಟ್ಟಿ. ಅದಕ್ಕಾಗಿ ಬಂದಿವೆ, ಹಸುವಿನ ಸೆಗಣಿಯಿಂದ ತಯಾರಿಸಿದ 100% ಪರಿಸರ ಸ್ನೇಹಿ ಗೋಮಯ ಗಣೇಶನ ಮೂರ್ತಿಗಳು. ಈ ಮೂರ್ತಿಗಳನ್ನು ಪೂಜಿಸಿ ವಿಸರ್ಜಿಸಿದ ಬಳಿಕ ಇವು ಗೊಬ್ಬರವಾಗಿ ಪರಿವರ್ತನೆ ಹೊಂದಿ ಪ್ರಕೃತಿಯಲ್ಲಿ ಲೀನವಾಗಿ ಬಿಡುತ್ತವೆ.

ಕೇಂದ್ರ ಸರಕಾರದ ರಾಷ್ಟ್ರೀಯ ಕಾಮಧೇನು ಆಯೋಗದಿಂದ ಮಾನ್ಯತೆ ಪಡೆದ, ಗ್ರಾಮೀಣ ಉದ್ಯಮಿಗಳ ನೆರವಿಗಾಗಿ ಸ್ಥಾಪನೆಯಾದ ಬೆಂಗಳೂರು ಮೂಲದ ಜಾಗೃತಿ ಟ್ರಸ್ಟ್ ಈ ಗೋಮಯ ಗಣಪತಿ ಮೂರ್ತಿಗಳನ್ನು ಬೇರೆ ಬೇರೆ ಗಾತ್ರದಲ್ಲಿ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

15 ಸೆಂಟಿ ಮೀಟರ್‌ ಎತ್ತರದ ಮೊದಲ 150 ಮೂರ್ತಿಗಳು ಬೆಂಗಳೂರಿನ ಗೋಶಾಲೆಗಳಲ್ಲಿ ಲಭ್ಯವಾಗಲಿವೆ. ಮೂರ್ತಿಗಳ ಬೆಲೆಯೂ ಅತ್ಯಂತ ಕಡಿಮೆಯಿದ್ದು ಕೇವಲ 150 ರೂ.ಗಳಿಗೆ ಲಭ್ಯವಿರುತ್ತವೆ.

ಗೋಮಯ ಗಣಪನ ಪೂಜಿಸಿ ಪರಿಸರ ಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳಲು ಸದವಕಾಶ ಬಂದಿದೆ. ಆಸಕ್ತರು ಬೆಂಗಳೂರಿನ ಜಾಗೃತಿ ಟ್ರಸ್ಟ್‌ನ ಮಾಧವ ಹೆಬ್ಬಾರ್ ಅವರನ್ನು (99005 11170) ಸಂಪರ್ಕಿಸಬಹುದಾಗಿದೆ.




Post a Comment

ನವೀನ ಹಳೆಯದು