ಕರಾವಳಿ, ಮಲೆನಾಡು ಮತ್ತು ಕೇರಳದ ಹಲವು ಭಾಗಗಳಲ್ಲಿ ಗೋಡಂಬಿ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಕರಾವಳಿಯ ಗೇರು ಕೃಷಿಕರು ಮನೆ ಬಳಕೆಗೆ ಸಾಂಪ್ರದಾಯಿಕ ರೀತಿಯಲ್ಲಿ ಗೇರುಬೀಜದಿಂದ ಗೋಡಂಬಿ ಬಿಡಿಸುವ ವಿಧಾನವನ್ನು ಅನುಸರಿಸುತ್ತಾರೆ. ಈ ಕೆಲಸ ಸ್ವಲ್ಪ ಕಷ್ಟ ಅನಿಸಿದರೂ ಸಾಂಪ್ರದಾಯಿಕ ರೀತಿಯಲ್ಲಿ ಗೇರುಬೀಜವನ್ನು ಸುಟ್ಟು ಅದರ ತಿರುಳನ್ನು ಹೊರತೆಗೆದು ಬಳಸಿದರೆ ಅದರ ರುಚಿಯೇ ಬೇರೆ.
ಗೇರುಬೀಜವನ್ದನು ಸುಡುವಾಗ ಅದರ ಸಿಪ್ಪೆಯಿಂದ ಹೊರಬರುವ ಎಣ್ಣೆ ಬಲು ಖಾರವಾಗಿದ್ದು, ಚರ್ಮದ ಮೇಲೆ ಸಿಡಿದರೆ ಗುಳ್ಳೆಗಳು ಏಳುವುದಷ್ಟೇ ಅಲ್ಲ, ಚರ್ಮವೇ ಕಿತ್ತುಹೋಗುವ ಅಪಾಯವಿದೆ. ಹೀಗಾಗಿ ಬಲು ಜಾಗ್ರತೆವಹಿಸಬೇಕಾಗುತ್ತದೆ.
ಹೋಮ್ ಆಫ್ ಟೇಸ್ಟ್‌ನ ದೀಪ್ತಿ ಅವರು ಈ ಬಾರಿ, ನಮಗೆಲ್ಲ ಮರೆತೇ ಹೋಗಿರುವ ಈ ಒಂದು ವಿಧಾನವನ್ನು ಮತ್ತೆ ನೆನಪಿಸಿ ಕೊಟ್ಟಿದ್ದಾರೆ. ನೀವೂ ನೋಡಿ...
إرسال تعليق