ಈ ಬಾರಿ ದೀಪಾವಳಿಯನ್ನು ಗೋಮಯದಿಂದ ತಯಾರಿಸಿದ ಹಣತೆಗಳೊಂದಿಗೆ ಆಚರಿಸಲು ವ್ಯಾಪಕ ಸಿದ್ಧತೆ ನಡೆದಿದೆ. ರಾಷ್ಟ್ರೀಯ ಕಾಮಧೇನು ಆಯೋಗದ ವತಿಯಿಂದ ಗೋಮಯ ಹಣತೆಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುತ್ತಿದ್ದು, ಒಟ್ಟಾರೆ 11 ಕೋಟಿಗೂ ಅಧಿಕ ಗೋಮಯ ಹಣತೆಗಳನ್ನು ಬೆಳಗಿಸಲು ಯೋಜನೆ ರೂಪಿಸಲಾಗಿದೆ.
ಗಣೇಶನ ಹಬ್ಬವನ್ನೂ ಪರಿಸರ ಸ್ನೇಹಿ ಗೋಮಯ ಗಣೇಶ ಮೂರ್ತಿಯಿಂದ ಆಚರಿಸುವ ಕಲ್ಪನೆಯನ್ನು ಪರಿಚಯಿಸಿ ಯಶಸ್ವಿಯಾದ ಹಿನ್ನೆಲೆಯಲ್ಲಿ ದೀಪಾವಳಿಯನ್ನು ಗೋಮಯ ಹಣತೆಗಳಿಂದ ಆಚರಿಸುವ ಚಿಂತನೆಗೆ ಬಲ ದೊರೆತಿದೆ.
ಗೋಶಾಲೆಗಳಲ್ಲಿ ಗೋಮಯದಿಂದ ಹಣತೆಗಳನ್ನು ತಯಾರಿಸುವ ತರಬೇತಿ ನೀಡಲಾಗುತ್ತಿದ್ದು, ಅಗತ್ಯ ಯಂತ್ರೋಪಕರಣಗಳನ್ನು ಗೋಶಾಲೆಗಳಿಗೆ ಒದಗಿಸಲಾಗುತ್ತಿದೆ.
ಗೋಮಯದಿಂದ ಬರೀ ಗಣೇಶನ ಮೂರ್ತಿ ಮತ್ತು ಹಣತೆಗಳಷ್ಟೇ ಅಲ್ಲ, ಇನ್ನೂ ಹಲವಾರು ಆಲಂಕಾರಿಕ ವಸ್ತುಗಳನ್ನು ತಯಾರಿಸುವ ತರಬೇತಿ, ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಗೋಮಯ ಬಳಸಿ ತಯಾರಿಸಿದ ಆಲಂಕಾರಿಕ ಕಲಾಕೃತಿಗಳು, ಗೋಮಯ ಧೂಪ- ಇನ್ನೂ ಹಲವು ವಸ್ತುಗಳ ಒಂದು ಝಲಕ್ ಇಲ್ಲಿದೆ. ರಾಷ್ಟ್ರೀಯ ಕಾಮಧೇನು ಆಯೋಗದ ವತಿಯಿಂದ ಒದಗಿಸಲಾದ ಈ ಚಿತ್ರಗಳನ್ನು ಉಪಯುಕ್ತ ನ್ಯೂಸ್ ಓದುಗರಿಗಾಗಿ ಇಲ್ಲಿ ಹಂಚಿಕೊಳ್ಳಲಾಗುತ್ತಿದೆ.
إرسال تعليق