ನಿನ್ನೆ ನಿಧನರಾದ ಡಾ| ಕೃಷ್ಣ ಮೂರ್ತಿ ಅಮೈ ಅವರಿಗೆ ಅರ್ಪಿತ
ತನ್ನ ತಾನರಿಯುತ ಅರಿದುದರಲಿ ಮನವು ಸ್ಥಿರತೆಯಲಿರ್ಪ ಕೌಶಲ್ಯಂಗಳನೆತ್ತರಿಸುವ ಕಲೆಯಕಲಿಕೆಯೇ ವಿದ್ಯೆ.
ತನ್ನ ತಾನರಿತರೂ ಕೌಶಲ್ಯಂಗಳ ಕೊರತೆಯಿಂ ಮನವು ಅಸ್ತಿರತೆಯಲಿರ್ಪುದಾದರದೇ ಪಾಂಡಿತ್ಯ-
ತನ್ನ ತಾನರಿತು ಅದರ ಕೌಶಲ್ಯಗಳಿಂದಳವಡಿಪ ಧೀರ............
ತನ್ನಂತೆ ಪರರ ಕಾಣ್ಪುದು ದಿಟ.......
ಇಂತಿರ್ದೊಡೆ ಅವ ಇಹಪರ ಭೇದವೆಣಿಸದೇ......
ಮನದ ಅಧಿಪತಿಯಾದ ಜಗದೀಶನ ಕೈಲಾಸದೊಳಗಿರ್ದಂತೆ-
ತನ್ನ ತಾನರಿತ ಧೀರನೆದೆಯಾಗುವುದು ಜಗದಗಲ........
ತಾನೇ ಎಲ್ಲರೊಳು ಎಲ್ಲರೂ ತನ್ನೊಳಗೆಂಬಂತಾಗಿ...
ಕರ್ಮಯೋಗಿಯಾಗುವನಾಗಿ ದುಡಿವನವ.........
ಲೋಕದುರಿತಂಗಳ ಕಳೆಯುವ ಕಾರ್ಯಂಗಳಲಿ
- ಶ್ಯಾಮ ಪ್ರಸಾದ್ ಮುದ್ರಜೆ
ಮೇಲಿನ ಹಾಡು ಹಾಡಿದವರು - ವಿದೂಷಿ ಮನೋರಮ ಬೆಂಗಳೂರು.
ಮೋಹನ ಕಲ್ಯಾಣಿ ರಾಗ, ಆದಿ ತಾಳ
إرسال تعليق