ಕವನ: ತಾಳ್ಮೆ
ರಚನೆ: ಡಾ.ಕಲಾಧರ, ಮಂಡ್ಯ..
ರಾಗ-ಸಂಗೀತ- ಗಾಯನ: ಕಲಾಶ್ರೀ ವಿದ್ಯಾಶಂಕರ್, ಮಂಡ್ಯ.
ತಾಳ್ಮೆ
ಮನದ ಕೊಳದೊಳಗೆ ಭಾವಗಳು ಕದಡಿರಲು
ತಿಳಿಗೊಳದ ತಳವ ಇಣುಕಿ ನೋಡು/
ಬಗ್ಗಡವು ಘನವಾಗಿ ತಳವ ಸೇರುವ ಹಾಗೆ
ಮನವು ತಿಳಿಯಾಗುವುದು ಕಾದು ನೋಡು//
ಮನದೊಳಗೆ ಆವರಿಸೆ ಶೂನ್ಯ ಭಾವದ ನಿಶೆಯು
ರಾತ್ರಿಯಾ ನಭದತ್ತ ಒಮ್ಮೆನೋಡು/
ಚಂದ್ರಮನ ಹುಡುಕುತ್ತ ತಾರೆ ಮಿನುಗುವ ಹಾಗೆ
ಮನದ ಮೂಲೆಯ ಬೆಳಕ ಹುಡುಕಿ ನೋಡು//
ಕಹಿ ನೆನಪುಗಳ ನೆನಪು ಮನದಿ ವಿಪ್ಲವ ಮಾಡೆ,
ಹೂದೋಟದಲ್ಲೊಮ್ಮೆ ಕುಳಿತು ನೋಡು/
ಮುಳ್ಳ ಗಿಡದಲಿ ಬಿರಿವ ಚೆಂಗುಲಾಬಿಯ ಹಾಗೆ
ಸವಿ ನೆನಪುಗಳ ಅರಸಿ ಸವಿದು ನೋಡು //
- ಕಲಾಧರ
ತುಂಬ ಚೆನ್ನಾಗಿ ಹಾಡಿರುವಿರಿ
ಪ್ರತ್ಯುತ್ತರಅಳಿಸಿಕಾಮೆಂಟ್ ಪೋಸ್ಟ್ ಮಾಡಿ