ಉಡುಪಿ ಪೇಜಾವರ ಮಠಾಧೀಶರು ಹಾಗೂ ಅಯೋಧ್ಯೆ ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯರೂ ಆಗಿರುವ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಇಂದು ಸೋಮವಾರ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿ ಅಲ್ಲಿನ ಮೇಲ್ವಿಚಾರಕರಿಂದ ಮಾಹಿತಿ ಪಡೆದರು.
ಬಳಿಕ ಅಯೋಧ್ಯೆ ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಕಾರ್ಯಾಲಯಕ್ಕೂ ಶ್ರೀಗಳು ಭೇಟಿ ನೀಡಿದರು. ರಾಮಲಲ್ಲಾನ ದರ್ಶನವನ್ನೂ ಮಾಡಿದರು.

إرسال تعليق