ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಮಧುರಗಾನ- ಚಿತ್ರಗೀತೆ- ನಗುವ ನಯನ ಮಧುರ ಮೌನ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


 

ಚಿತ್ರ: ಪಲ್ಲವಿ ಅನುಪಲ್ಲವಿ

ಸಾಹಿತ್ಯ: ಆರ್.ಎನ್. ಜಯಗೋಪಾಲ್

ಸಂಗೀತ: ಇಳಯರಾಜ

ಗಾಯನ: ಎಸ್.ಪಿ.ಬಿ ಮತ್ತು ಎಸ್.ಜಾನಕಿ


ನಗುವ ನಯನ ಮಧುರ ಮೌನ

ಮಿಡಿವ ಹೃದಯ ಇರೆ ಮಾತೇಕೆ

ಹೊಸ ಭಾಷೆ ಇದು ... ರಸ ಕಾವ್ಯವಿದು

ಇದ ಹಾಡಲು ಕವಿ ಬೇಕೆ?


ನಗುವ ನಯನ ಮಧುರ ಮೌನ

ಮಿಡಿವ ಹೃದಯ ಇರೆ ಮಾತೇಕೆ


ನಿಂಗಾಗಿ ಹೇಳುವೆ ಕಥೆ ನೂರನು

ನಾನಿಂದು ನಗಿಸುವೆ ಈ ನಿನ್ನನು

ಇರುಳಲ್ಲು ಕಾಣುವೆ ಕಿರು ನಗೆಯನು

ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು


ಜೊತೆಯಾಗಿ ನಡೆವೆ ನಾ ಮಳೆಯಲು

ಬಿಡದಂತೆ ಹಿಡಿವೆ ಈ ಕೈಯನು

ಗೆಳೆಯಾ ಜೊತೆಗೆ ಹಾರಿ ಬರುವೆ

ಬಾನಾ ಎಲ್ಲೆ ದಾಟಿ ನಲಿವೆ


ನಗುವ ನಯನ ಮಧುರ ಮೌನ


ಮಿಡಿವ ಹೃದಯ ಇರೆ ಮಾತೇಕೆ?


ಈ ರಾತ್ರಿ ಹಾಡು ಪಿಸು ಮಾತಲಿ

ನಾ ತಂದೆ ಇನಿದಾದ ಸವಿ ರಾಗವ


ನೀನಲ್ಲಿ ನಾನಿಲ್ಲಿ ಏಕಾಂತವೆ

ನಾ ಕಂಡೆ ನನ್ನದೆ ಹೊಸ ಲೋಕವ


ಈ ಸ್ನೇಹ ತಂದಿದೆ ಎದೆಯಲ್ಲಿ

ಎಂದೆಂದೂ ಅಳಿಸದ ರಂಗೋಲಿ


ಆಸೆ ಹೂವ ಹಾಸಿ ಕಾದೆ

ನಡೆ ನೀ ಕನಸಾ ಹೊಸಕಿ ಬಿಡದೆ


ನಗುವ ನಯನ ಮಧುರ ಮೌನ


ಮಿಡಿವ ಹೃದಯ ಇರೆ ಮಾತೇಕೆ


ಹೊಸ ಭಾಷೆ ಇದು...ರಸ ಕಾವ್ಯವಿದು...

ಇದ ಹಾಡಲು ಕವಿ ಬೇಕೇ?


ಲ ಲ ಲ ಲ ಲ ಲ ಲ ಲ ಲ ಲ ಲಾಆಆಆ


Post a Comment

ನವೀನ ಹಳೆಯದು