ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಭಕ್ತಿಗೀತೆ- ಪುರಂದರ ದಾಸರ ದೇವರನಾಮ- ತೋಳು ತೋಳು ತೋಳು ರಂಗ ತೋಳನ್ನಾಡೈ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad




 ತೋಳನ್ನಾಡೈ ಸ್ವಾಮಿ

ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ

                                     ||ತೋಳು||


ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ 

ತೋಳನ್ನಾಡೈ 

ಸ್ವಾಮಿ, ಘಲಿರು ಘಲಿರೆಂಬ 

ಗೆಜ್ಜೆಲಿ ನಲಿವುತ್ತ ತೋಳನ್ನಾಡೈ

                        ||ಹುಲಿಯುಗುರರಳೆಲೆ||

ನಿಲುವಿಗೆ ನಿಲುಕದೆ ಒರಳ ತಂದಿಟ್ಟ 

ತೋಳನ್ನಾಡೈ ಸ್ವಾಮಿ

ಚೆಲುವ ಮಕ್ಕಳ ಮುದ್ದು ಮಾಣಿಕವೆ 

ತೋಳನ್ನಾಡೈ 

                                             ||ತೋಳು||


ಪೂತನಿಯೆಂಬವಳಸುವನೆ ಹೀರಿದ 

ತೋಳನ್ನಾಡೈ 

ಸ್ವಾಮಿ ಮಾತೆಯ ಪಿತನ ಅನುಜನ 

ಮಡುಹಿದ ತೋಳನ್ನಾಡೈ||ಪೂತನಿ||

ಮಾತಿಗೆ ಶಿಶುಪಾಲನ ಶಿರತರಿದ 

ತೋಳನ್ನಾಡೈ ಸ್ವಾಮಿ

ಶ್ರೀ ತುಳಸಿಯ ಪ್ರಿಯ ನಿತ್ಯವಿನೋದಿ 

ತೋಳನ್ನಾಡೈ 

                                                   ||ತೋಳು||


ಸತ್ಯಕೆ ಧರ್ಮವ ನಡೆಸಿದ 

ತೋಳನ್ನಾಡೈ 

ಸ್ವಾಮಿ ಅರ್ಜುನನಾ ರಥ ಸಾರಥ್ಯ ಮಾಡಿದ 

ತೋಳನ್ನಾಡೈ                    ||ಸಜ್ಜನ||

ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ 

ಸ್ವಾಮಿ ,ವಜ್ರಪಂಜರ ಪಾಂಡವಪ್ರಿಯ 

ತೋಳನ್ನಾಡೈ  

                                        ||ತೋಳು||


ನಖದಿಂದ ಹಿರಣ್ಯಕನುದರವ ಸೀಳಿದ 

ತೋಳನ್ನಾಡೈ

ಸ್ವಾಮಿ,ಸುಖವನಿತ್ತು ಪ್ರಹ್ಲಾದನ ಕಾಯ್ದ 

ತೋಳನ್ನಾಡೈ                   ||ನಖದಿಂದ||

ವಿಖಳಿತಗೆಡಿಸಿದ ಗೋಪಸ್ತ್ರೀಯರ 

ತೋಳನ್ನಾಡೈ

ಸ್ವಾಮಿ ಸುಖತೀರ್ಥರ ಪತಿ ಪುರಂದರವಿಠಲ 

ತೋಳನ್ನಾಡೈ                       ||ತೋಳು|

Post a Comment

ನವೀನ ಹಳೆಯದು