ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಆದಿತ್ಯ ಹೃದಯ ಸ್ತೋತ್ರ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಆದಿತ್ಯ ಹೃದಯ ಸ್ತೋತ್ರ (9:30 ನಿಮಿಷ)




ಆದಿತ್ಯ ಹೃದಯ ಸ್ತೋತ್ರ ಸೂರ್ಯನ ಸ್ತೋತ್ರ. ಈ ಸ್ತೋತ್ರವು ರಾಮಾಯಣದ ಯುದ್ಧ ಕಾಂಡದಲ್ಲಿ ಬರುತ್ತದೆ. ಶ್ರೀ ರಾಮನು ರಾವಣನ ಮೇಲೆ ಯುದ್ಧ ಮಾಡುವ ಮುನ್ನ ಋಷಿ ಅಗಸ್ತ್ಯರು ರಾಮನಿಗೆ ಈ ಸ್ತೋತ್ರವನ್ನು ಪಠಿಸುತ್ತಾರೆ. ಈ ಸ್ತೋತ್ರದಿಂದ ಸೂರ್ಯನನ್ನು ಪ್ರಾರ್ಥನೆ ಮಾಡಿ, ಅವನಿಂದ ಅಪಾರ ಶಕ್ತಿ, ಬಲ ಪಡೆದು ಶತ್ರುವನ್ನು ಸೋಲಿಸುತ್ತಾರೆ.



|| ಪ್ರಾರ್ಥನಾ ||

ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ |

ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ||


|| ಧ್ಯಾನಮ್ ||

ಧೈಯಃ ಸದಾ ಸವಿತೃ ಮಂಡಲ ಮಧ್ಯವರ್ತಿ ನಾರಾಯಣಃ ಸರಸಿಜಾಸನ್ನಿವಿಷ್ಟಃ | ಕೇಯೂರವಾನ್ ಮಕರಕುಂಡಲವಾನ್ ಕಿರೀಟೀ ಹಾರೀ ಹಿರಣ್ಮಯವಪುಃ ಧೃತಶಂಖಚಕ್ರ: ||


ಆದಿತ್ಯ ಹೃದಯ ಸ್ತೋತ್ರ (3:40 ನಿಮಿಷ)







|| ಆದಿತ್ಯ ಹೃದಯ ಸ್ತೋತ್ರಮ್ ||


ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್ |

ರಾವಣಂ ಚಾಗ್ರತೋ ದೃಷ್ಟಾ ಯುದ್ಧಾಯ ಸಮುಪಸ್ಥಿತಮ್ || 1 ||


ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |

ಉಪಗಮ್ಯಾ ಬ್ರವೀದ್ ರಾಮಮ್ ಅಗಸ್ತ್ಯೋ ಭಗವಾನ್ ಋಷಿಃ || 2 ||


ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ |

ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ || 3 ||


ಆದಿತ್ಯ ಹೃದಯಂ ಪುಣ್ಯಂ ಸರ್ವಶತ್ರು ವಿನಾಶನಮ್ |

ಜಯಾವಹಂ ಜಪೇನ್ನಿತ್ಯಮ್ ಅಕ್ಷಯ್ಯಂ ಪರಮಂ ಶಿವಮ್ || 4 ||


ಸರ್ವಮಂಗಲ ಮಾಂಗಲ್ಯಂ ಸರ್ವ ಪಾಪ ಪ್ರಣಾಶನಮ್ |

ಚಿಂತಾಶೋಕ ಪ್ರಶಮನಮ್ ಆಯುರ್ವರ್ಧನಮುತ್ತಮಮ್ || 5 ||


ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಮ್ |

ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್ || 6 ||



ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ |

ಏಷ ದೇವಾಸುರ ಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ || 7 ||


ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ |

ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ || 8 ||


ಪಿತರೋ ವಸವಃ ಸಾಧ್ಯಾ: ಅಶ್ವಿನೌ ಮರುತೋ ಮನುಃ |

ವಾಯುರ್ವಹ್ನಿ: ಪ್ರಜಾಪ್ರಾಣ: ಋತುಕರ್ತಾ ಪ್ರಭಾಕರಃ ||9 ||


ಆದಿತ್ಯ: ಸವಿತಾ ಸೂರ್ಯ: ಖಗಃ ಪೂಷಾ ಗಭಸ್ತಿಮಾನ್ |

ಸುವರ್ಣಸದೃಶೋ ಭಾನುಃ ಸ್ವರ್ಣರೇತಾ ದಿವಾಕರಃ || 10 ||


ಹರಿದಶ್ವಃ ಸಹಸ್ರಾರ್ಚಿ ಸಪ್ತಸತ್ತಿರ್ಮರೀಚಿಮಾನ್ |

ತಿಮಿರೋನ್ಮಥನ: ಶಂಭುಃ ತ್ವಷ್ಟಾ ಮಾರ್ತಾಂಡ ಅಂಶುಮಾನ್ || 11 ||


ಹಿರಣ್ಯಗರ್ಭ: ಶಿಶಿರಃ ತಪನೋ ಭಾಸ್ಕರೋ ರವಿಃ |

ಅಗ್ನಿಗರ್ಭೋsದಿತೇಃ ಪುತ್ರಃ ಶಂಖಃ ಶಿಶಿರನಾಶನಃ ||12 ||


ವ್ಯೋಮನಾಥ ಸ್ತಮೋಭೇದೀ ಋಗ್ಯಜುಸ್ಸಾಮಪಾರಗಃ |

ಘನವೃಷ್ಟಿರಪಾಂ ಮಿತ್ರೋ ವಿಂಧ್ಯವೀಥೀ ಪ್ಲವಂಗಮಃ ||13 ||


ಆತಪೀ ಮಂಡಲೀ ಮೃತ್ಯು: ಪಿಂಗಲ: ಸರ್ವತಾಪನಃ |

ಕವಿರ್ವಿಷ್ಟೋ ಮಹಾತೇಜಾಃ ರಕ್ತಸ್ಸರ್ವಭವೋದ್ಭವಃ ||14 ||


ನಕ್ಷತ್ರ ಗ್ರಹ ತಾರಾಣಾಮ್ ಅಧಿಪೋ ವಿಶ್ವಭಾವನಃ |

ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್-ನಮೋsಸ್ತು ತೇ || 15 ||


ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |

ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ || 16 ||


ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |

ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ || 17 ||


ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ |

ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ ||18 ||


ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ-ವರ್ಚಸೇ |

ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ || 19 ||


ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾ ಮಿತಾತ್ಮನೇ |

ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ ||20 ||


ತಪ್ತ ಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ |

ನಮಸ್ತಮೋಭಿ ನಿಘ್ನಾಯ ರವಯೇ ಲೋಕಸಾಕ್ಷಿಣೇ ||21 ||


ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ |

ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ ||22 ||


ಏಷ ಸುತ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |

ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಮ್ ||23 ||


ವೇದಾಶ್ಚ ಕ್ರತವಶೈವ ಕ್ರತೂನಾಂ ಫಲಮೇವ ಚ |

ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ ||24 ||


ಏನ ಮಾಪತ್ಸು ಕೃಚ್ಛೇಷು ಕಾಂತಾರೇಷು ಭಯೇಷು ಚ |

ಕೀರ್ತಯನ್ ಪುರುಷಃ ಕಶ್ಚಿತ್ ನಾವಸೀದತಿ ರಾಘವ ||25 ||


ಪೂಜಯಸ್ಟೈನ ಮೇಕಾಗ್ರೋ ದೇವದೇವಂ ಜಗತ್ಪತಿಮ್ |

ಏತತ್ ತ್ರಿಗುಣಿತಂ ಜಪ್ತ್ವಾ ಯುದ್ದೇಷು ವಿಜಯಿಷ್ಯಸಿ ||26 ||



ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ |

ಏವಮುಕ್ತ್ವಾ ತದಾಗಸ್ತೋ ಜಗಾಮ ಚ ಯಥಾಗತಮ್ || 27 ||


ಏತಚ್ಛುತ್ವಾ ಮಹಾತೇಜಾ: ನಷ್ಟ ಶೋಕೋsಭವತ್-ತದಾ |

ಧಾರಯಾಮಾಸ ಸುಪ್ರೀತೋ ರಾಘವ: ಪ್ರಯತಾತ್ಮವಾನ್ || 28 ||


ಆದಿತ್ಯಂ ಪ್ರೇಕ್ಷ್ಯ ಜಪ್ತ್ಯಾತು ಪರಂ ಹರ್ಷಮವಾಪ್ತವಾನ್ |

ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ || 29 ||


ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ |

ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋಽಭವತ್ || 30 ||


ಅಥ ರವಿರವದನ್-ನಿರೀಕ್ಷ ರಾಮಂ ಮುದಿತಮನಾ: ಪರಮಂ ಪ್ರಹೃಷ್ಯಮಾಣಃ |

ನಿಶಿಚರಪತಿ ಸಂಕ್ಷಯಂ ವಿಧಿತ್ವಾ ಸುರಗಣ ಮಧ್ಯಗತೋ ವಚಸ್ತ್ವರೇತಿ || 31 ||


ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯ ಚತುರ್ವಿಂಶತಿ ಸಹಸ್ರಕಾಯಾಂ ಸಂಹಿತಾಯಾಂ ಯುದ್ಧಕಾಂಡೇ ಆದಿತ್ಯಹೃದಯಂ ಸಂಪೂರ್ಣಮ್ ||



ಸ್ತೋತ್ರಮ್


ತತೋ ಯುದ್ಧಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್ |

ರಾವಣಂ ಚಾಗ್ರತೋ ದೃಷ್ಟಾ ಯುದ್ಧಾಯ ಸಮುಪಸ್ಥಿತಮ್ ॥ 1 ॥


ಯುದ್ಧಶ್ರಮದಿಂದ ಬಳಲಿದ ಶ್ರೀರಾಮನು ಯುದ್ಧಾಭಿಮುಖವಾಗಿ ಎದುರಿಗೆ ಬರುತ್ತಿದ್ದ ರಾವಣನು ನೋಡುತ್ತಾ ಜಯೋಪಾಯದ ಬಗ್ಗೆ ಯೋಚಿಸುತ್ತಾ ಯುದ್ಧಭೂಮಿಯಲ್ಲಿ ನಿಂತಿದ್ದನು.


ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |

ಉಪಾಗಮ್ಯಾಬ್ರವೀದ್ರಾಮಮ್ ಅಗಸ್ತೋ ಭಗವಾನೃಷಿಃ || 2 ||


ಯುದ್ಧವನ್ನು ನೋಡಲು ದೇವತೆಗಳೊಂದಿಗೆ ಬಂದು ನಿಂತಿದ್ದ ಭಗವಾನ್ ಅಗಸ್ಯಮಹರ್ಷಿಗಳು ಇದನ್ನು ವೀಕ್ಷಿಸಿ ಶ್ರೀರಾಮನ ಬಳಿಗೆ ಬಂದು ಹೀಗೆಂದರು:

ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ |

ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ ॥ 3 ॥


ರಾಮ! ಮಹಾಬಾಹು! ವೇದದಂತೆ ನಿತ್ಯವಾದ ರಹಸ್ಯವಾದ ಸ್ತೋತ್ರವನ್ನು ಕೇಳು. ವತ್ಸ! ಇದನ್ನು ಜಪಿಸುವುದರಿಂದ ನೀನು ಸಮಸ್ತ ಶತ್ರುಗಳನ್ನೂ ಗೆಲ್ಲಬಹುದು.


ಆದಿತ್ಯಹೃದಯಂ ಪುಣ್ಯಂ ಸರ್ವಶತ್ರುವಿನಾಶನಮ್ |

ಜಯಾವಹಂ ಜಪೇನ್ನಿತ್ಯಮ್ ಅಕ್ಷಯ್ಯಂ ಪರಮಂ ಶಿವಮ್ ॥ 4 ॥


ಸರ್ವಶತ್ರುವಿನಾಶಕವೂ ಪುಣ್ಯಕರವೂ ಆದ ಈ ಸ್ತೋತ್ರಕ್ಕೆ ಆದಿತ್ಯಹೃದಯವೆಂದು ಹೆಸರು. ಜಯವನ್ನು ಮತ್ತು ಅಕ್ಷಯವಾದ ಫಲವನ್ನು ತಂದುಕೊಡತಕ್ಕದ್ದಾದ ಇದನ್ನು ನಿತ್ಯವೂ ಜಪಿಸಬೇಕು.


ಸರ್ವಮಂಗಲಮಾಂಗಲ್ಯಂ ಸರ್ವಪಾಪಪ್ರಣಾಶನಮ್ |

ಚಿಂತಾಶೋಕಪ್ರಶಮನಮ್ ಆಯುರ್ವರ್ಧನಮುತ್ತಮಮ್ || 5 |


ಇದು ಸರ್ವಮಂಗಲಮಾಂಗಲ್ಯವೂ ಸರ್ವಪಾಪಪ್ರಣಾಶನವೂ ಆಗಿದೆ. ಚಿಂತಾಶೋಕಗಳನ್ನು ನೀಗಿಸುತ್ತದೆ. ಆರೋಗ್ಯಸಹಿತ ಆಯುಸ್ಸನ್ನು ಹೆಚ್ಚಿಸುವುದಕ್ಕೆ ಉತ್ತಮವಾದುದಾಗಿದೆ.


ರಶ್ಮಿಮಂತಂ ಸಮುದ್ಯಂತಂ ದೇವಾಸುರನಮಸ್ಕೃತಮ್ |

ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್ ॥ 6 ॥

ಪ್ರತಿದಿನವೂ ರಶ್ಮಿಯುಕ್ತನಾಗಿ ಉದಯಿಸುವ ದೇವಾಸುರವಂದಿತನೂ ಭಾಸ್ಕರನೂ ಮತ್ತು ಆದ ಭುವನೇಶ್ವರನೂ ಸೂರ್ಯದೇವನನ್ನು ನೀನು ಪೂಜಿಸು.

 

ಸರ್ವದೇವಾತ್ಮಕೋ ಹೈಷಃ ತೇಜಸ್ವೀ ರಶ್ಮಿಭಾವನಃ |

ಏಷ ದೇವಾಸುರಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ ॥ 7 ॥


ಇವನು ಸರ್ವದೇವಾತ್ಮಕನೂ ತೇಜಸ್ವಿಯೂ ಆಗಿ ತನ್ನ ರಶ್ಮಿಗಳಿಂದ ಜನರಿಗೆ ದೇವಾಸುರರನ್ನೂ ಸಮಸ್ತಲೋಕಗಳನ್ನೂ ರಕ್ಷಿಸುತ್ತಾನೆ. ತನ್ನ ಕಿರಣಗಳಿಂದ ಶ್ರೇಯಸ್ಸನ್ನುಂಟುಮಾಡುತ್ತಾನೆ. 


ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ |

ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂಪತಿಃ || 8 |


ಬ್ರಹ್ಮ, ವಿಷ್ಣು, ಶಿವ, ಸ್ಕಂದ, ಪ್ರಜಾಪತಿ, ಇಂದ್ರ, ಕುಬೇರ, ಕಾಲ, ಯಮ, ಚಂದ್ರ, ವರುಣ ಇವರೆಲ್ಲರೂ ಈತನೇ.


ಪಿತರೋ ವಸವಃ ಸಾಧ್ಯಾಃ ಹ್ಯಶ್ವಿನೌ ಮರುತೋ ಮನುಃ |

ವಾಯುರ್ವ: ಪ್ರಜಾಪ್ರಾಣಃ ಋತುಕರ್ತಾ ಪ್ರಭಾಕರಃ ॥ 9 ॥


ಪಿತೃದೇವತೆಗಳು, ವಸುಗಳು, ಸಾಧ್ಯರು, ಅಶ್ವಿನೀದೇವತೆಗಳು, ಮರುತ್ತುಗಳು, ಮನು, ವಾಯು, ವಹಿ, ಪ್ರಜೆಗಳ ಪ್ರಾಣವಾಯು, ಋತುನಿಯಾಮಕನಾದ ಸೂರ್ಯ ಇವರೆಲ್ಲರೂ ಈತನೇ.


ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್ |

ಸುವರ್ಣಸದೃಶೋ ಭಾನುಃ ಸ್ವರ್ಣರೇತಾ ದಿವಾಕರಃ ॥ 10 ॥


ದೇವ! ನೀನು ಸರ್ವ ವಿಷಯಗಳನ್ನು ಭೋಗಿಸತಕ್ಕವನು (ಅದತ್ತೇ ಸರ್ವಂ), ಅದಿತಿಯ ಪುತ್ರನಾಗಿ ಅವತರಿಸಿದವನು. ಭೂಮಿಗೆ ಒಡೆಯನು (ಅದಿತೇಃ ಭೂಮೇಃ ಈಶ್ವರಃ). ಜಗತ್ತನ್ನು ಸೃಷ್ಟಿಸಿದವನು. ಜನರನ್ನು ಕರ್ತವ್ಯದಲ್ಲಿ ಪ್ರೇರಿಸುವವನು. ಆಕಾಶದಲ್ಲಿ ಸಂಚರಿಸತಕ್ಕವನು. ವೃಷ್ಟಿಯಿಂದ ಲೋಕವನ್ನು ಪೋಷಿಸತಕ್ಕವನು. ಪ್ರಶಸ್ತವಾದ ಕಿರಣವುಳ್ಳವನು. ಚಿನ್ನದಂತೆ ಹೊಳೆಯುವವನು. ಸರ್ವ ಪ್ರಕಾಶಕನು. ಹಿರಣ್ಮಯವಾದ ಬ್ರಹ್ಮಾಂಡವನ್ನು ಸೃಜಿಸಿದವನು. ಪ್ರಕಾಶಮಯವಾದ ಹಗಲನ್ನು ಉಂಟುಮಾಡತಕ್ಕವನು. ನಿನಗೆ ನಮಸ್ಕಾರ.


ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿರ್ಮರೀಚಿಮಾನ್ |

ತಿಮಿರೋನ್ಮಥನಃ ಶಂಭುಃ ತ್ವಷ್ಟಾ ಮಾರ್ತಾಂಡ ಅಂಶುಮಾನ್ ॥ 11 ॥


ಹಸಿರು ಬಣ್ಣದ ಅಶ್ವಗಳುಳ್ಳವನು, ದಿಕ್ಕುಗಳನ್ನು ವ್ಯಾಪಿಸುವವನು  (ಹರಿತಃ ದಿಶಃ ಅಶೋತಿ ವ್ಯಾಪ್ಪೋತಿ). ಸಾವಿರಾರು ಕಿರಣಗಳುಳ್ಳವನು. ಏಳು ಅಶ್ವಗಳುಳ್ಳವನು. ಏಳು ಬಗೆಯ ಕಿರಣಗಳುಳ್ಳವನು (ಏಕೋ ಅಕ್ಟೋ ವಹತಿ ಸಪ್ತನಾಮಾ), ಪ್ರಕಾಶಮಯವಾದ ಕಿರಣವುಳ್ಳವನು. ಕತ್ತಲೆಯನ್ನು ನಾಶಮಾಡತಕ್ಕವನು. ಸುಖಕ್ಕೆ ಕಾರಣನಾದವನು. ದುಃಖ ನಾಶಕನು, ಬ್ರಹ್ಮಾಂಡವು ಲಯವಾದಾಗ ಅದನ್ನು ಸೃಜಿಸುವುದಕ್ಕಾಗಿ ಉದ್ಭವಿಸಿದವನು (ಮೃತೇ ಅಂಡೇ ಜಾತಃ) ಸರ್ವವ್ಯಾಪಿಯಾದ ಕಿರಣಗಳುಳ್ಳವನು. ನಿನಗೆ ನಮಸ್ಕಾರ.


ಹಿರಣ್ಯಗರ್ಭ: ಶಿಶಿರಃ ತಪನೋ ಭಾಸ್ಕರೋ ರವಿಃ |

ಅಗ್ನಿಗರ್ಭೋsದಿತೇಃ ಪುತ್ರಃ ಶಂಖಃ ಶಿಶಿರನಾಶನಃ ॥ 12 ॥


ಹಿರಣ್ಮಯವಾದ ಬ್ರಹ್ಮಾಂಡಕ್ಕೆ ಗರ್ಭಭೂತನಾದವನು, ಹಿತರಮಣೀಯವಾದ ಅಂತಃಕರಣವುಳ್ಳವನು (ಹಿತರಮಣೀಯ =ಹಿರಣ್ಮಯ, ಗರ್ಭ=ಅಂತಃಕರಣ). ಶೀತಲವಾಗಿರುವವನು -ಸುಖಸ್ವರೂಪ. ಬಿಸಿಲಿನಿಂದ ತಾಪಗೊಳಿಸುವವನು (ತಪ ಸಂತಾಪೇ). ಸರ್ವೆಶ್ವರ್ಯಸಂಪನ್ನ (ತಪ ಐಶ್ವರ್ಯೇ). ಪ್ರಕಾಶವನ್ನು ಕೊಡತಕ್ಕವನು. ಸ್ತುತಿಸಲ್ಪಡತಕ್ಕವನು (ರೂಯತೇ ಇತಿ ರವಿಃ) ಹಿರಣ್ಯಗರ್ಭಾದಿಗಳಿಗೆ ಉಪದೇಶಕ (ರೌತಿ= ಉಪದಿಶತಿ). ಅಗ್ನಿಯನ್ನು ಗರ್ಭದಲ್ಲಿ ಧರಿಸಿದವನು (ಉದ್ಯಂತಂ ವಾವಾದಿತ್ಯಮಗ್ನಿರನು ಸಮಾರೋಹತಿ). ಅದಿತಿಯ ಪುತ್ರ, ಬ್ರಹ್ಮವಿದ್ಯೆಯಿಂದ ಲಭ್ಯನಾದ್ದರಿಂದ ಅದಿತಿಪುತ್ರ. (ಅದಿತಿ=ಬ್ರಹ್ಮವಿದ್ಯೆ). ಸಾಯಂಕಾಲದಲ್ಲಿ ತಾನಾಗಿ ಶಾಂತನಾಗುವನು (ಶಮೇಃ ಖಃ). ಆನಂದ ಮತ್ತು ಆಕಾಶಸ್ವರೂಪ (ಶಂ ಚ ಖಂ ಚ). ಹಿಮವನ್ನು ಮತ್ತು ಜಾಡ್ಯವನ್ನು ನಾಶಮಾಡತಕ್ಕವನು. ನಿನಗೆ ನಮಸ್ಕಾರ.



ವೋಮನಾಥಸ್ತಮೋಭೇದೀ ಋಗ್ಯಜುಸ್ಸಾಮಪಾರಗಃ |

ಘನವೃಷ್ಟಿರಪಾಂ ಮಿತ್ರಃ ವಿಂಧ್ಯವೀಥೀಪ್ಲವಂಗಮಃ ॥ 13 ॥


ಪಾರವನ್ನು ಹೇ ದೇವ! ನೀನು ಗಗನದ ಒಡೆಯ. ಕತ್ತಲೆಯನ್ನು ನಾಶಮಾಡುವವನು. ಋಗ್ಯಜುಃಸಾಮವೇದಗಳ ಕಂಡವನು. (ವೇದೈರಶೂನ್ಯಸ್ತ್ರಿಭಿರೇತಿ ಸೂರ್ಯಃ). ದೊಡ್ಡ ಮಳೆಯನ್ನು ಸುರಿಸಲು ಕಾರಣನು. (ಆದಿತ್ಯಾಜ್ಜಾಯತೇ ವೃಷ್ಟಿಃ). ನೀರಿಗೆ ಮಿತ್ರನಾದವನು. ನೀರನ್ನು ಉತ್ಪಾದಿಸುವವನು. ವಿಂಧ್ಯವೀಥಿಯೆಂಬ ಸೂರ್ಯಮಾರ್ಗದಲ್ಲಿ ಶೀಘ್ರವಾಗಿ ಸಂಚರಿಸುವವನು. ವಿಂಧ್ಯ=ಗಹನವಾದ, ವೀಥೀ=ಸುಷುಮ್ಮಾ-ನಾಡೀಮಾರ್ಗದಲ್ಲಿ ಶೀಘ್ರವಾಗಿ ಸಂಚರಿಸುವವನು. ನಿನಗೆ ನಮಸ್ಕಾರ.


ಆತಪೀ ಮಂಡಲೀ ಮೃತ್ಯುಃ ಪಿಂಗಲಸ್ಸರ್ವತಾಪನಃ |

ಕವಿರ್ವಿಷ್ಟೋ ಮಹಾತೇಜಾಃ ರಕ್ತಸ್ಸರ್ವಭವೋದ್ಭವಃ ॥ 14 ॥


ನೀನು ಆತಪವುಳ್ಳವನು. ವೃತ್ತಾಕಾರದ ಬಿಂಬವುಳ್ಳವನು. ಸರ್ವಸಂಹಾರಕರ್ತ. ಪಿಂಗಳವರ್ಣನಾದವನು. ಪಿಂಗಳನಾಡೀ ಪ್ರವರ್ತಕ. ಸರ್ವರನ್ನೂ ತಾಪಗೊಳಿಸುವವನು. ಸರ್ವಜ್ಞ, ವಿಶ್ವರೂಪ. ವಿಶ್ವನಿರ್ವಾಹಕ. ತೇಜೋರೂಪ, ಸರ್ವರಲ್ಲಿಯೂ ಅನುರಕ್ತ. ರಕ್ತವರ್ಣದಿಂದ ಕೂಡಿದವನು. ಸರ್ವವಸ್ತುಗಳ ನಿರ್ಮಾತ. ನಿನಗೆ ನಮಸ್ಕಾರ.


ನಕ್ಷತ್ರಗ್ರಹತಾರಾಣಾಮ್ ಅಧಿಪೋ ವಿಶ್ವಭಾವನಃ |

ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್ನಮೋsಸ್ತು ತೇ || 15 |



ದೇವ! ನೀನು ನಕ್ಷತ್ರತಾರಾಗ್ರಹಗಳಿಗೆ ಅಧಿಪತಿ. ವಿಶ್ವಸ್ಥಾಪಕ. ಅಗ್ನಾದಿ ತೇಜಸ್ಸುಗಳಿಗೂ ತೇಜಸ್ಸನ್ನು ಕೊಡತಕ್ಕವನು. (ಯೇನ ಸೂರ್ಯಸ್ತಪತಿ ತೇಜಸೇ ಃ ) ದ್ವಾದಶಮಾಸಗಳಿಂದ ದ್ವಾದಶಮೂರ್ತಿ ಸ್ವರೂಪನು. ನಿನಗೆ ನಮಸ್ಕಾರ.


ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |

ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ ॥ 16 ॥


ಪೂರ್ವದಿಕ್ಕಿನ ಉದಯಗಿರಿಸ್ವರೂಪನಾದ ನಿನಗೆ ನಮಸ್ಕಾರ. ಪಶ್ಚಿಮದ ಅಸ್ತಗಿರಿಸ್ವರೂಪನಾದ ನಿನಗೆ ನಮಸ್ಕಾರ. ಜ್ಯೋತಿಶ್ಚಕ್ರದ ಸ್ವಾಮಿಯಾದ ನಿನಗೆ ನಮಸ್ಕಾರ. ದಿನಾಧಿಪತಿಯಾದ ನಿನಗೆ ನಮಸ್ಕಾರ.


ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |

ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ ॥ 17 ॥


ಜಯದಾತನೂ ಜಯಕ್ಷೇಮಪ್ರದಾತನೂ ಹರಿದಶ್ವನೂ ಆದ ನಿನಗೆ ನಮಸ್ಕಾರ.


ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ |

ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ || 18 |


ಉಗ್ರನೂ ವೀರನೂ ಸಾರವಾದ ಪ್ರಣವದಿಂದ ಪ್ರತಿಪಾದ್ಯನೂ ಆದ ನಿನಗೆ ನಮೋ ನಮಃ. ಹೃದಯಪದ್ಮವನ್ನು ಅರಳಿಸುವವನೂ ಮಾರ್ತಾಂಡನೂ ಆದ ನಿನಗೆ ನಮೋ ನಮಃ.


ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯವರ್ಚಸೇ |

ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ ॥ 19 ॥


ಬ್ರಹ್ಮಾದಿತ್ರಿಮೂರ್ತಿಗಳಿಗೆ ಸ್ವಾಮಿಯೂ ಸೂರ್ಯನೂ ಆದಿತ್ಯಸ್ವರೂಪನೂ ಆದ ನಿನಗೆ ನಮಸ್ಕಾರ. ಭಾಸ್ವಂತನೂ ಸರ್ವಸಂಹಾರಕನೂ ರುದ್ರದೇವನೂ ಆದ ನಿನಗೆ ನಮಸ್ಕಾರ.


ತಮೋಘ್ರಾಯ ಹಿಮಘ್ನಾಯ ಶತ್ರುಘ್ನಾಯಾಮಿತಾತ್ಮನೇ |

ಕೃತಘ್ನಫ್ರಾಯ ದೇವಾಯ ಜ್ಯೋತಿಷಾಂ ಪತಯೇ ನಮಃ ॥ 20 ॥


ತಮೋಹಂತೃವೂ ಅಜೇಯಸ್ವರೂಪನೂ ಆದ ಹಿಮಹಂತೃವೂ ಶತ್ರುಹಂತೃವೂ ಕೃತಘ್ನಸಂಹಾರಕನೂ ದೇವನೂ ಜ್ಯೋತಿಗಳಿಗೆ ಅಧಿಪತಿಯೂ ಆದ ನಿನಗೆ ನಮಸ್ಕಾರ.


ತಪ್ತಚಾಮೀಕರಾಭಾಯ ವಕ್ಷಯೇ ವಿಶ್ವಕರ್ಮಣೇ |

ನಮಸ್ತಮೋಭಿನಿಘ್ನಾಯ ರವಯೇ ಲೋಕಸಾಕ್ಷಿಣೇ || 21 |


ಚೆನ್ನಾಗಿ ಕಾಯಿಸಿದ ಚಿನ್ನದಂತೆ ಬೆಳಗುತ್ತಿರುವವನೂ ಅಗ್ನಿ ಸ್ವರೂಪನೂ ಸಮಗ್ರಪ್ರಪಂಚವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿದವನೂ ತನ್ನ ಗುಣಗಳ ಮೂಲಕ ಜನರ ಅಜ್ಞಾನವನ್ನು ದೂರಮಾಡತಕ್ಕವನೂ ರವಿಯೂ ಜನರ ಪಾಪಪುಣ್ಯಕರ್ಮಗಳಿಗೆ ಸಾಕ್ಷೀಭೂತನೂ ಆದ ನಿನಗೆ ನಮಸ್ಕಾರ.


ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ |

ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ ॥ 22 ॥


ಶ್ರೀರಾಮ, ಸರ್ವಶಕ್ತನಾದ ಆದಿತ್ಯನು ಪಂಚಭೂತಗಳನ್ನೂ ನಾಶಮಾಡಿ ಮತ್ತೆ ಸೃಜಿಸುವನು. ಎಲ್ಲವನ್ನೂ ಪಾಲಿಸುತ್ತಾನೆ. ಅವನೇ ತನ್ನ ಕಿರಣಗಳ ಮೂಲಕ ನೀರನ್ನು ಸೆಳೆದುಕೊಂಡು ಅದನ್ನು ಬಿಸಿಮಾಡಿ ಮಳೆಸುರಿಸುವನು.



ಏಷ ಸುತ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |

ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿಹೋತ್ರಿಣಾಮ್ || 23 ||


ಪ್ರಾಣಿಗಳು ನಿದ್ರಿಸುವಾಗಲೂ ಈತನು ಎಚ್ಚರಗೊಂಡಿರುತ್ತಾನೆ. ಸಕಲ ಜೀವಿಗಳಲ್ಲಿಯೂ ಅಂತರ್ಯಾಮಿಯಾಗಿದ್ದಾನೆ. ಈತನೇ ಅಗ್ನಿಹೋತ್ರ, ಅಗ್ನಿಗಳಲ್ಲಿ ಹೋಮ ಮಾಡಿದಾಗ ಹವಿಸ್ಸನ್ನು ಸ್ವೀಕರಿಸುತ್ತಾನೆ. ಇದು ಬಾಹ್ಯವಾದ ಹೋಮ. ಅಂತರ್ಯಾಮಿಯಾಗಿ ಪಂಚಜ್ಞಾನೇಂದ್ರಿಯಗಳಿಂದ ವಿಷಯವನ್ನು ಅನುಭವಿಸುತ್ತಾನೆ. ಇದು ಆಂತರ ಹೋಮ. ಹೋಮ ಮಾಡುವವರಿಗೆ ಫಲಕೊಡತಕ್ಕವನೂ ಈತನೇ. ಬಾಹ್ಯಹೋಮಕ್ಕೆ ಸ್ವರ್ಗವೂ ಆಂತರಹೋಮಕ್ಕೆ ಮುಕ್ತಿಯೂ ಫಲ.


ವೇದಾಶ್ಚ ಕ್ರತವಶೈವ ಕ್ರತೂನಾಂ ಫಲಮೇವ ಚ |

ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ ॥ 24 ॥


ವೇದ, ಕ್ರತು, ಕ್ರತುಫಲ, ಅಲ್ಲದೆ ಜಗತ್ತಿನಲ್ಲಿ ಜನರು ಮಾಡುವ ಸಕಲ ಕರ್ಮಗಳು ಇವೆಲ್ಲವುಗಳಿಗೂ ಆದಿತ್ಯನೇ ಪ್ರಭು.


ಏನಮಾಪತ್ಸು ಕೃಚ್ಛೇಷು ಕಾಂತಾರೇಷು ಭಯೇಷು ಚ |

ಕೀರ್ತಯನ್ ಪುರುಷಃ ಕಶ್ಚಿತ್ ನಾವಸೀದತಿ ರಾಘವ ॥ 25 ॥


ಶ್ರೀರಾಮ, ಸಕಲವಿಪತ್ತುಗಳಲ್ಲಿಯೂ ಕಷ್ಟಕಾಲದಲ್ಲಿಯೂ ದುರ್ಗಮ ಸ್ಥಳಗಳಲ್ಲಿಯೂ ಭಯಸಂದರ್ಭಗಳಲ್ಲಿಯೂ ಈ ಆದಿತ್ಯ ಹೃದಯವನ್ನು ಪಠಿಸುವ ಮನುಷ್ಯನು ವಿಪತ್ತಿನಿಂದ ಪಾರಾಗುತ್ತಾನೆ.


ಪೂಜಯನಮೇಕಾಗ್ರೋ ದೇವದೇವಂ ಜಗತ್ಪತಿಮ್ |

ಏತಗುಣಿತಂ ಜಪ್ಪಾ ಯುದ್ದೇಷು ವಿಜಯಿಷ್ಯಸಿ ॥ 26 |


ರಾಘವ! ದೇವದೇವನೂ ಜಗತ್ಪತಿಯೂ ಆದ ಆದಿತ್ಯನನ್ನು ಏಕಾಗ್ರತೆಯಿಂದ ಅರ್ಚಿಸು. ಈ ಆದಿತ್ಯಹೃದಯವನ್ನು ಮೂರು ಸಲ ಜಪಿಸಿದರೆ ನಿನಗೆ ಯುದ್ಧದಲ್ಲಿ ಜಯ ಲಭಿಸುವುದು.


ಅಸ್ಮಿನ್‌ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ |

ಏವಮುಕ್ತಾ ತದಾಗಸ್ತೋ ಜಗಾಮ ಚ ಯಥಾಗತಮ್ ॥ 27 ॥


ಮಹಾಬಾಹು, ಶ್ರೀರಾಮ, ಈಗಲೇ ಇದನ್ನು ಜಪಿಸು. ರಾವಣನನ್ನು ನೀನು ಸಂಹರಿಸುತ್ತೀಯೆ ಎಂದು ಹೇಳಿ ಅಗಸ್ತಮಹರ್ಷಿಗಳು ಹೊರಟು ಹೋದರು.


ಏತಚ್ಛುತ್ವಾ ಮಹಾತೇಜಾಃ ನಷ್ಟಶೋಕೋsಭವತ್ತದಾ |

ಧಾರಯಾಮಾಸ ಸುಪ್ರೀತಃ ರಾಘವಃ ಪ್ರಯತಾತ್ಮವಾನ್ | 28 |


ಆಗ ತೇಜೋರಾಶಿಯಾದ ಶ್ರೀರಾಮನ ಚಿಂತೆಯು ದೂರವಾಯಿತು. ಅವನು ಸಂತುಷ್ಟನಾಗಿ ಪರಿಶುದ್ಧಚಿತ್ತದಿಂದ ಅಗಸ್ತರ ಉಪದೇಶವನ್ನು ಸ್ವೀಕರಿಸಿದನು.


ಆದಿತ್ಯಂ ಪ್ರೇಕ್ಷ್ಯ ಜಪ್ತ್ಯಾತು ಪರಂ ಹರ್ಷಮವಾಪ್ತವಾನ್ |

ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ | 29 |


ಅನಂತರ ಸೂರ್ಯನನ್ನು ನೋಡುತ್ತ ಮೂರುಸಲ ಆದಿತ್ಯ ಹೃದಯವನ್ನು ಪಠಿಸಿ ಉತ್ಸಾಹಗೊಂಡನು. ಮತ್ತೆ ಶುಚಿಯಾಗಿಯೇ ಆಚಮನ ಮಾಡಿ ಕೋದಂಡವನ್ನು ಕೈಯಲ್ಲಿ ಹಿಡಿದನು.


ರಾವಣಂ ಪ್ರೇಕ್ಷ್ಯ ಹೃಷ್ಣಾತ್ಮಾ ಯುದ್ಧಾಯ ಸಮುಪಾಗಮತ್ |

ಸರ್ವಯತೇನ ಮಹತಾ ವಧೇ ತಸ್ಯ ಧೃತೋಭವತ್ ॥ 30 ॥


ಅಷ್ಟರಲ್ಲಿ ರಾವಣನು ಎದುರಾಗಿ ಬರಲು ಶ್ರೀರಾಮನು ಹರ್ಷದಿಂದ ಯುದ್ಧಸನ್ನದ್ಧನಾದನು. ಸರ್ವಪ್ರಯತ್ನದಿಂದಲೂ ರಾವಣನನ್ನು ವಧಿಸಬೇಕೆಂದು ನಿರ್ಧರಿಸಿದನು.


ಅಥ ರವಿರವದನ್ನಿರೀಕ್ಷ್ಯ ರಾಮಂ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |

ನಿಶಿಚರಪತಿಸಂಕ್ಷಯಂ ವಿದಿತ್ವಾ ಸುರಗಣಮಧ್ಯಗತೋ ವಚಸ್ವರೇತಿ ॥ 31 ॥


ಆಗ ಸೂರ್ಯದೇವನು ಶ್ರೀರಾಮನ ಜಪದಿಂದ ಸಂಪ್ರೀತನಾಗಿ ರಾಕ್ಷಸೇಂದ್ರನ ಸಂಹಾರವು ಸಮೀಪಿಸಿತೆಂದು ತಿಳಿದು ದೇವತೆಗಳ ಮಧ್ಯದಲ್ಲಿ ಕಾಣಿಸಿಕೊಂಡು "ರಾಘವ ತ್ವರೆ ಮಾಡು" ಎಂದು ಹೇಳಿದನು.


ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯ ಚತುರ್ವಿಂಶತಿಸಹಸ್ರಕಾಯಾಂ ಸಂಹಿತಾಯಾಂ ಯುದ್ಧಕಾಂಡೇ ಆದಿತ್ಯಹೃದಯಂ ಸಂಪೂರ್ಣಮ್ |

Post a Comment

ನವೀನ ಹಳೆಯದು