ಆ ವಿಷಯದಲ್ಲಿ ಪ್ರಾಜ್ಞರು ಕೊಟ್ಟ ಪಾರಮಾರ್ಥಿಕ ಸಂದೇಶ ಯಾವುದು?
ಅದರ ಬಗ್ಗೆ ರುಕ್ಮಾಂಗದ ಹೇಳಿದ್ದೇನು!?
ರುಕ್ಮಾಂಗದ: "ಕೈ ತೊಳೆದರೆ... ಅಲ್ಲ,
ಮುಖ ಮುಚ್ಚಿಕೊಂಡರೆ ರೋಗ ಹೋದೀತಾ?
ಭ್ರಮೆ ಅಲ್ವಾ ಅದು?
ಮತ್ತೆ ಮತ್ತೆ ಕೈ ತೊಳೆಯುತ್ತ, ಬೇರೆ ಯಾವುದೂ ಒಳ ಪ್ರವೇಶಿಸಬಾರದು ಅಂತ ನಮ್ಮನ್ನೇ ನಾವು ನಿರ್ಬಂಧಿಸಿದಾಕ್ಷಣಕ್ಕೆ ರೋಗ ನಮ್ಮನ್ನು ಸೋಕದು ಎಂಬುದು ಭ್ರಮೆ ಅಲ್ವಾ?
ಶರೀರೇ ಜರ್ಜರಿ ಭೂತೇ ವ್ಯಾಧಿಗ್ರಸ್ತೆ ಕಳೇವರೇ...
ಶರೀರವು ವ್ಯಾಧಿಯನ್ನು ಹೊಂದಬಹುದಾದಂತಹ ಒಂದು ಪುರ. ಶರೀರಕ್ಕೆ ರೋಗವೇ ಬಾರದ ಹಾಗೆ, ರೋಗ ವಿವರ್ಜಿತವಾದ ಶರೀರವನ್ನೂ, ಶರೀರ ಸೌಖ್ಯವನ್ನು ಹೊಂದಬೇಕು ಅಂತಾದರೆ ಇರುವ ನೆಲೆ ಯಾವುದು?
ಪ್ರಾಜ್ಞರು ಕೊಟ್ಟ ಪಾರಮಾರ್ಥಿಕ ಸಂದೇಶ ಯಾವುದು?
ಕೇವಲ ಮೈ ತೊಳೆಯುವುದಲ್ಲ, ಕೈ ತೊಳೆಯುವುದಲ್ಲ, ಮುಖ ತೊಳೆಯುವುದಲ್ಲ, ಬಾಯಿ ತೊಳೆಯುವುದಲ್ಲ...."
**
ಮನಸ್ಸನ್ನು ಶುದ್ದೀಕರಣ ಮಾಡುವ ಮತ್ತು ಆ ಮೂಲಕ ಶರೀರವನ್ನು ಬಾಹ್ಯ ಆಕ್ರಮಣದಿಂದ ಕಾಪಾಡಿಕೊಳ್ಳಬೇಕು.
ಹೇಗೆ ಅನ್ನುವ ಚಿಂತನೆಗೆ ಪ್ರಚೋದನೆ ಕೊಡುವ ಈ ತಾಳಮದ್ದಳೆ ಪ್ರಸಂಗ ಕೇಳಿಬಿಡಿ.
**
ದಿನಾಂಕ.04.04.2021ರಂದು ಸಿಗದಾಳ್‌ನಲ್ಲಿ ನಡೆದ ತಾಳಮದ್ದಳೆ ರುಕ್ಮಾಂಗದ ಚರಿತ್ರೆ ಧ್ವನಿ ಮುದ್ರಣ ಈಗ ಯೂಟೂಬಿನ ತಿಜೋರಿಯಲ್ಲಿಟ್ಟು ಕೀಯನ್ನು (ಲಿಂಕ್) ಇಲ್ಲಿ ಕೆಳಗಿಡಲಾಗಿದೆ!!
ಐಸೋಲೇಟ್ ಆಗಿ ಕುಳಿತು ಅಮೂಲ್ಯವಾದ 5 ಗಂಟೆ 36 ನಿಮಿಷಗಳಿಗೆ ನಿಮ್ಮ ಎರಡೂ ಕಿವಿಗಳನ್ನು ಕೊಡುವ ಒಂದು ಮನಸ್ಸು ಮಾಡಿ ನೋಡಿ.
ಇಲ್ಲಿ ಹಾಸ್ಯ ಇದೆ, ಭಕ್ತಿ ಇದೆ, ವೀರ ರಸ ಇದೆ, ಐದೂವರೆ ಗಂಟೆ ಯವುದೇ ರಿಹರ್ಸಲ್ ಇಲ್ಲದೆ ಆಶು ಸಂಭಾಷಣೆ ಇದೆ, ಒಂದೇ ಒಂದು ಇಂಗ್ಲೀಷ್ ಅಕ್ಷರವೂ ಇಲ್ಲದ ಶುದ್ಧ ಕನ್ನಡವಿದೆ.
ದುರಂತವಿದೆ, ಸುಖಾಂತವಿದೆ!!
'ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ' ಅಂತಾರೆ!!
'ಉಂಡು ಮಲಗುವ ವಿಚಾರದಲ್ಲೇ' ಸ್ವಾರಸ್ಯಕರ ಗಂಡ ಹೆಂಡಿರ ಜಗಳ ಇಲ್ಲಿದೆ.
ವರ್ತಮಾನದ ಹನಿಟ್ರ್ಯಾಪ್‌ನ ನೆರಳಿದೆ!!
ಕಿವಿ ಅಗಲ ಮಾಡಿ ಕೇಳಬೇಕಾದ ಗಾನ ಮಾಧುರಿ ಇದೆ, ಕಣ್ಣರಳುವಂತೆ ಮಾಡುವ ಚಂಡೆ, ಕಣ್ಮುಚ್ಚಿ ಕೇಳುವಂತೆ ಮದ್ದಲೆ ನಿನಾದ ತಿಜೋರಿಯ ಎಲ್ಲ ಅರೆಗಳಲ್ಲೂ ಇದೆ. ಕೀ ಇಲ್ಲಿದೆ!:
ಪೂರ್ಣ ಕೇಳಿ ಒಂದು ಅಭಿಪ್ರಾಯ ಹೇಳಿ.
ಪಾತ್ರ ಪರಿಚಯ:
ಭಾಗವತರು: ಪ್ರಸನ್ನ ಭಟ್, ಬಾಳಕಲ್ ಮತ್ತು ಶಿವಾನಂದ ಭಟ್ ಹೇರೂರು
ಮದ್ದಲೆ: ರಾಘವೇಂದ್ರ ಹೆಗ್ಗಡೆ, ಯಲ್ಲಾಪುರ ಮತ್ತು ವೆಂಕಟೇಶ್, ಭಾಗವತರಮನೆ.
ಚಂಡೆ: ಹೆಚ್.ಎಸ್.ಗಣೇಶ್‌ಮೂರ್ತಿ
ಮೋಹಿನಿ: ಗಣಪತಿ ಭಟ್, ಸಂಕದಗುಂಡಿ,
ರುಕ್ಮಾಂಗದ: ಪವನ್, ಕಿರಣ್‌ಕೆರೆ
ಭರತ: ಸೀತಾರಾಮಚಂದು ಹೆಗಡೆ, ಶಿರಸಿ
ಧರ್ಮಾಂಗದ: ಪ್ರಸಾದ್, ಭಟ್ಕಳ,
ಬಲಿ: ಎಂ.ಎಸ್.ಜನಾರ್ದನ, ಮಂಡಗಾರು
ಕಂಬಲಾಶ್ವ: ರಮೇಶ್ ಭಟ್, ಅಡ್ಡಗದ್ದೆ,
ನಾರದ: ಅರವಿಂದ ಸಿಗದಾಳ್, ಮೇಲುಕೊಪ್ಪ
ಸಂದ್ಯಾವಳಿ: ಜಿ.ಆರ್.ಅಶೋಕ, ಕುಮರಿಗದ್ದೆ
ವಿಷ್ಣು: ವಿದ್ಯಾಧರ, ಮೇಲುಕೊಪ್ಪ
ವಿಷ್ಣು: ಅಭಿರಾಮ್, ಸಿಗದಾಳ್
-ಅರವಿಂದ ಸಿಗದಾಳ್, ಮೇಲುಕೊಪ್ಪ
Tags: Yakshagana, ಯಕ್ಷಗಾನ, ತಾಳಮದ್ದಳೆ
إرسال تعليق