ಅಲೋಪಥಿ ವೈದ್ಯಪದ್ಧತಿಯ ಕುರುಡು ಸಮರ್ಥನೆಗೆ ಯೋಗ ಗುರುವಿನ ವಾಗ್ಬಾಣ
ಹೊಸದಿಲ್ಲಿ: ಅಲೋಪಥಿ ಔಷಧ ಪದ್ಧತಿಯನ್ನು ' ಸ್ಟುಪಿಡ್ ಸೈನ್ಸ್' ಎಂದು ವಿವಾದ ಸೃಷ್ಟಿಸಿದ್ದ ಯೋಗಗುರು ಬಾಬಾ ರಾಮ್‌ದೇವ್ ಅವರು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರ ಪತ್ರದ ಮೇರೆಗೆ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದರು. ಆದರೀಗ ಕ್ಷಮೆ ಕೇಳಿದ 24 ಗಂಟೆಯೊಳಗೇ ಬಾಬಾ ರಾಮ್‌ದೇವ್ ಸೋಮವಾರ ಅಲೋಪಥಿ ವೈದ್ಯಪದ್ಧತಿಯ ಕುರುಡು ಸಮರ್ಥನೆಯ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಈ ಬಾರಿ ಅವರು ಫಾರ್ಮಾ ಉದ್ಯಮವನ್ನೂ ಝಾಡಿಸಿದ್ದು, ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.
ಈ ಬಾರಿ ಬಾಬಾ ರಾಮ್‌ದೇವ್ ಅವರು, ಫಾರ್ಮಾಸುಟಿಕಲ್ ಕಂಪನಿಗೆ, IMAನತ್ತ 25 ಪ್ರಶ್ನೆಗಳನ್ನು ಎಸೆದಿದ್ದಾರೆ. ಪತಂಜಲಿ ಯೋಗಪೀಠ ಟ್ರಸ್ಟ್‌ನ ಅಧಿಕೃತ ಲೆಟರ್‌ಹೆಡ್‌ನಲ್ಲಿ 25 ಪ್ರಶ್ನೆಗಳನ್ನು ಮುದ್ರಿಸಿ ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಓಪನ್ ಲೆಟರ್ ಒಂದನ್ನು ಪೋಸ್ಟ್ ಮಾಡಿದ್ದಾರೆ.
ಐಎಂಎ ಅಧ್ಯಕ್ಷ ಡಾ. ಜಯಲಾಲ್ ಕೊರೊನಾವನ್ನು ಗುಣಪಡಿಸಲು ಏಸುಕ್ರಿಸ್ತನಿಂದ ಮಾತ್ರ ಸಾಧ್ಯ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ವೈದ್ಯಕೀಯ ಸಂಸ್ಥೆಯನ್ನು ಮತಪ್ರಚಾರಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪಗಳ ಬೆನ್ನಿಗೇ ಬಾಬಾ ರಾಮ್‌ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಅವರು ಈ ವಿಚಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ.
ಪ್ರಶ್ನೆಗಳು ಹೀಗಿವೆ ನೋಡಿ:
1) ಅಲೋಪತಿಯಲ್ಲಿ ಅಧಿಕ ರಕ್ತದೊತ್ತಡ (ಬಿಪಿ) ಮತ್ತು ಅದರಿಂದ ಉಂಟಾಗುವ ತೊಂದರೆಗಳಿಗೆ ಶಾಶ್ವತ ಚಿಕಿತ್ಸೆ ಇದೆಯೇ?
2) ಅಲೋಪತಿಯಲ್ಲಿ ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್‌ಗೆ ಶಾಶ್ವತ ಪರಿಹಾರವಿದೆಯೇ?
3) ಫಾರ್ಮಾ ಇಂಡಸ್ಟ್ರಿಯ ಸಂಧಿವಾತ, ಕೊಲೈಟಿಸ್, ಥೈರಾಯ್ಡ್ ಮತ್ತು ಆಸ್ತಮಾಗೆ ಶಾಶ್ವತ ಚಿಕಿತ್ಸೆಯನ್ನು ಹೊಂದಿದೆಯೇ?
4) ಫ್ಯಾಟಿ ಲಿವರ್ ಹಾಗೂ ಪಿತ್ತಜನಕಾಂಗದ ಸಿರೋಸಿಸ್ ಮತ್ತು ಹೆಪಟೈಟಿಸ್ ಗುಣಪಡಿಸುವ ಔಷಧಿ ಅಲೋಪಥಿಯಲ್ಲಿವೆಯೇ?
5) ಬೈಪಾಸ್ ಸರ್ಜರಿ ಅಥವಾ ಆಂಜಿಯೋಪ್ಲ್ಯಾಸ್ಟಿ ಇಲ್ಲದೆ ಹೃದಯದಲ್ಲಿರುವ ಬ್ಲಾಕೇಜ್ ಸರಿಪಡಿಸುವ ಬೇರೆ ಚಿಕಿತ್ಸೆ ಫಾರ್ಮಾ ಉದ್ಯಮದಲ್ಲಿದೆಯೇ?
6) ಪೇಸ್‌ಮೇಕರ್ ಇನ್ಸ್ಟಾಲ್ ಮಾಡದೇ ವ್ಯಕ್ತಿಯ ಹೃದಯವು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಫಾರ್ಮಾ ಇಂಡಸ್ಟ್ರಿ ಖಚಿತಪಡಿಸಲು ಸಾಧ್ಯವೇ?\
7) ಯಕೃತ್ತಿನ ಮೇಲೆ ಅಡ್ಡಪರಿಣಾಮ ಬೀರದೇ ಕೊಲೆಸ್ಟ್ರಾಲ್ ರೋಗಿಗಳಲ್ಲಿ ಕೊಲೆಸ್ಟ್ರಾಲ್ ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುವ ಚಿಕಿತ್ಸೆ ಅಲೋಪತಿಯಲ್ಲಿ ಇದೆಯೇ?
मैं इंडियन मेडिकल एसोसिएशन व फार्मा कंपनियों से विनम्रता के साथ सीधे 25 सवाल पूछता हूँ- pic.twitter.com/ATVKlDc9tl
— स्वामी रामदेव (@yogrishiramdev) May 24, 2021
8) ತಲೆನೋವು ಮತ್ತು ಮೈಗ್ರೇನ್‌ಗೆ ಶಾಶ್ವತ ಪರಿಹಾರ ಫಾರ್ಮಾ ಇಂಡಸ್ಟ್ರಿ ಹೊಂದಿದೆಯೇ?
9) ಕನ್ನಡಕ ಮತ್ತು ಶ್ರವಣ ಸಾಧನಗಳ ಬಳಕೆ ಇಲ್ಲದಂತೆ ಮಾಡುವ ಶಾಶ್ವತ ಪರಿಹಾರ ನೀಡುವ ಚಿಕಿತ್ಸೆ ಫಾರ್ಮಾ ಇಂಡಸ್ಟ್ರಿಯಲ್ಲಿದೆಯೇ?
10) ಕೋಟ್ಯಂತರ ಜನರನ್ನು ಬಾಧಿಸುತ್ತಿರುವ ಪೈರೋಹಿಯಾ ಸಮಸ್ಯೆಗೆ ಉತ್ತಮ ಹಾಗೂ ಸುರಕ್ಷಿತ ಚಿಕಿತ್ಸೆ ಇದೆಯೇ?
11) ಬಾರಿಯಾಟ್ರಿಕ್ ಅಥವಾ ಲಿಪೊಸಕ್ಷನ್ ಶಸ್ತ್ರಚಿಕಿತ್ಸೆಗಳಿಲ್ಲದೆ ವ್ಯಕ್ತಿಯ ತೂಕವನ್ನು ದಿನಕ್ಕೆ ಕನಿಷ್ಠ ಒಂದು ಕಿಲೋಗ್ರಾಂ ಕಡಿಮೆ ಮಾಡುವ ಔಷಧವನ್ನು ಫಾರ್ಮಾ ಇಂಡಸ್ಟ್ರಿ ಹೊಂದಿದೆಯೇ?
12) ಸೋರಿಯಾಸಿಸ್ ಮತ್ತು ಸೋರಿಯಾಟಿಕ್ ಸಂಧಿವಾತಕ್ಕೆ ಸುರಕ್ಷಿತ ಶಾಶ್ವತ ಚಿಕಿತ್ಸೆ ಇದೆಯೇ?
13) ಆಧುನಿಕ ವೈದ್ಯಕೀಯ ವಿಜ್ಞಾನವು ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್‌ಗೆ ಸುರಕ್ಷಿತ ಶಾಶ್ವತ ಚಿಕಿತ್ಸೆಯನ್ನು ಹೊಂದಿದೆಯೇ? ಅಥವಾ ಪಾಸಿಟಿವ್ ರುಮಟಾಯ್ಡ್ ಅಂಶವನ್ನು ನೆಗೆಟಿವ್ ಆಗಿ ಪರಿವರ್ತಿಸುವ ಮಾರ್ಗವಿದೆಯೇ?
14) ಪಾರ್ಕಿನ್ಸನ್ ಕಾಯಿಲೆಗೆ ಅಲೋಪತಿಯಲ್ಲಿ ಶಾಶ್ವತ ಚಿಕಿತ್ಸೆ ಇದೆಯೇ?
15) ಮಲಬದ್ಧತೆ, ಅನಿಲ ಮತ್ತು ಗ್ಯಾಸ್ ಹಾಗೂ ಅಸಿಡಿಟಿ ಸಮಸ್ಯೆಗೆ ಅಡ್ಡಪರಿಣಾಮಗಳಿಲ್ಲದೆ ಶಾಶ್ವತ ಚಿಕಿತ್ಸೆ ಫಾರ್ಮಾ ಇಂಡಸ್ಟ್ರಿಯಲ್ಲಿದೆಯೇ?
16) ಅಲೋಪತಿಯಲ್ಲಿ ನಿದ್ರಾಹೀನತೆಗೆ ಶಾಶ್ವತ ಪರಿಹಾರವಿದೆಯೇ? 4-6 ಗಂಟೆಗೆ ನೀಡುವ ಈ ಔಷಧಿಯಲ್ಲಿ ಅಡ್ಡಪರಿಣಾಮವಿರುತ್ತದೆ.
17) ದೇಹದಲ್ಲಿನ ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡಲು ಫಾರ್ಮಾ ಇಂಡಸ್ಟ್ರಿಯಲ್ಲಿ ಔಷಧವಿದೆಯೇ?
18) ಅಲೋಪತಿಗೆ ಬಂಜೆತನಕ್ಕೆ ಪರಿಹಾರವಿದೆಯೇ? ಐವಿಎಫ್ ವಿಧಾನಗಳನ್ನು ಆಶ್ರಯಿಸುವುದರಿಂದ ಸ್ವಾಭಾವಿಕವಾಗಿ ಗರ್ಭಧಾರಣೆಯಾಗುತ್ತದೆಯೇ?
19) ವಯಸ್ಸಾದ ಪ್ರಕ್ರಿಯೆಯನ್ನು ಹಿಮ್ಮುಖಗೊಳಿಸುವ ಅಡ್ಡಪರಿಣಾಮವಿಲ್ಲದ ಔಷಧ ಫಾರ್ಮಾ ಇಂಡಸ್ಟ್ರಿಯಲ್ಲಿದೆಯೇ?
20) ಅಡ್ಡಪರಿಣಾಮಗಳಿಲ್ಲದೆ ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಅಲೋಪತಿಯಲ್ಲಿ ಚಿಕಿತ್ಸೆ ಇದೆಯೇ?
21) ಒಬ್ಬ ವ್ಯಕ್ತಿಯಲ್ಲಿ ಆಕ್ರಮಣಕಾರಿ ಅಥವಾ ಹಿಂಸಾತ್ಮಕ ಪ್ರವೃತ್ತಿಯನ್ನು ನಿಗ್ರಹಿಸಲು ಅಲೋಪತಿಯಲ್ಲಿ ಔಷಧಿ ಇದೆಯೇ?
22) ಡ್ರಗ್ಸ್ ಬಿಡಿಸಲು ಬೇಕಾದ ಚಿಕಿತ್ಸೆ ಅಲೋಪಥಿಯಲ್ಲಿ ಇದೆಯೇ?
23) ಅಲೋಪತಿ ಮತ್ತು ಆಯುರ್ವೇದದ ನಡುವಿನ ಜಿದ್ದಾಜಿದ್ದು ಅನ್ನು ಕೊನೆಗೊಳಿಸಲು ಬೇಕಾದ ಪರಿಹಾರ ಫಾರ್ಮಾ ಇಂಡಸ್ಟ್ರಿಯಲ್ಲಿದೆಯೇ?
24) ಸಿಲಿಂಡರ್ ಬಳಸದೆ ಕೊರೊನಾವೈರಸ್ ರೋಗಿಯ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುವ ಬೇರೆ ಉಪಾಯ ಫಾರ್ಮಾ ಇಂಡಸ್ಟ್ರಿಯಲ್ಲಿದೆಯೇ?
25) ಅಲೋಪತಿ ಶಕ್ತಿಯುತ ಮತ್ತು ಪರಿಣಾಮಕಾರಿಯಾಗಿದ್ದರೆ ವೈದ್ಯರು ಏಕೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ?
ಕಾಮೆಂಟ್ ಪೋಸ್ಟ್ ಮಾಡಿ