ಪಣಂಬೂರು: ಪಣಂಬೂರು ಬೈಕಂಪಾಡಿ ಹೆದ್ದಾರಿಯಲ್ಲಿ ಘನ ವಾಹನಗಳು ಅಪಾಯಕಾರಿ ರೀತಿಯಲ್ಲಿ ಓಡಾಟ ನಡೆಸುತ್ತಿದ್ದು ಈ ಬಗ್ಗೆ ಹೊಸ ಯೋಜನೆಯೊಂದರ ಅನುಷ್ಠಾನ ಕುರಿತಂತೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಡಾ.ಭರತ್ ಶೆಟ್ಟಿ ವೈ, ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಶನಿವಾರ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿದರು.
ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ಅಪಾಯಕಾರಿ ರೀತಿ ವಾಹನ ತಿರುವು,ಸರ್ವಿಸ್ ರಸ್ತೆ ಸಂಪೂರ್ಣ ಹಾಳಾಗಿ ಅನುಪಯುಕ್ತವಾಗಿರುವುದು ಹಳೆ ಹೆದ್ದಾರಿಯಲ್ಲಿ ಅಂಡರ್ ಪಾಸ್ ನಿರ್ಮಾಣ ಮತ್ತಿತರ ಸ್ಥಿತಿಗತಿಯನ್ನು ಹೆದ್ದಾರಿ ಯೋಜನಾ ಅಧಿಕಾರಿ ಶಿಶುಮೋಹನ್, ಎನ್ ಎಂಪಿಟಿ ಎಂಜಿನಿಯರ್ ಅವರೊಂದಿಗೆ ಚರ್ಚಿಸಿದರು. ಶೀಘ್ರ ಹೆದ್ದಾರಿ ಅಧಿಕಾರಿಗಳು, ಎನ್ ಎಂಪಿಟಿ ಜತೆ ಚರ್ಚಿಸಿ ಯಾವ ರೀತಿ ಹೆದ್ದಾರಿ ಅಭಿವೃದ್ಧಿ,ಯೋಜನಾ ವೆಚ್ಚ ಮತ್ತಿತರ ವಿಷಯಗಳ ಬಗ್ಗೆ ತೀರ್ಮಾನಿಸಲಾಗುವುದು. ಎಂದು ನಳಿನ್ ಕುಮಾರ್ ಕಟೀಲ್ ನುಡಿದರು.
ಕೈಗಾರಿಕಾ ಪ್ರದೇಶ,ಪಣಂಬೂರು ಪ್ರದೇಶದಲ್ಲಿ ಸಾವಿರಾರು ಘನ ವಾಹನ ಓಡಾಟವಿದ್ದು ಸೂಕ್ತ ಯೋಜನೆಯೊಂದರ ಅವಶ್ಯಕತೆಯಿದೆ. ಅದನ್ನು ಅನುಷ್ಠನ ಮಾಡಲೇ ಬೇಕಾದ ಅನಿವಾರ್ಯ ಸ್ಥಿತಿಯಿದೆ. ಎನ್ ಎಂಪಿಟಿಯಿಂದ ಗರಿಷ್ಟ ಆರ್ಥಿಕ ಸಹಕಾರ ಪಡೆಯುವ ಬಗ್ಗೆ ಚರ್ಚಿಸುವುದಾಗಿ ಶಾಸಕ ಡಾ.ಭರತ್ ಶೆಟ್ಟಿ ನುಡಿದರು.
ಪಾಲಿಕೆ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಕಸ್ತೂರಿ ಪಂಜ ಮತ್ತಿತರರು ಉಪಸ್ಥಿತರಿದ್ದರು.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق