ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಭತ್ತದ ನಾಡಿನ ಕೃಷಿ ಮಾಂತ್ರಿಕ: ವೀರನಗೌಡ ಕುಲಕರ್ಣಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಗಂಗಾವತಿಯಿಂದ ಅನತಿ ದೂರದಲ್ಲಿರುವ ಚಿಕ್ಕ ಗ್ರಾಮ ಮಲಕನಮರಡಿ. ಕಣ್ಣು ಹಾಯಿಸಿದರೆ ಸುತ್ತಾ ಕಾಣುವುದು ಹಸಿರು ಹಾಸಿನಂತಿರುವ ಭತ್ತದ ಬೆಳೆ. ಅವುಗಳ ನಡುವೆ ಸುಂದರ ತೆಂಗಿನ ತೋಟ ಕಂಡುಬರುವುದು. ಅಚ್ಚರಿಯಿಂದ ಒಳ ನಡೆದರೆ ಕಂಡುಬರುವುದು ಕಾಯಕ ಜೀವಿ ವೀರನಗೌಡರ ಸಾಧನೆಯ ಫಲ. ಶ್ರೀ ವೀರನಗೌಡರು ಕೃಷಿ ಕಾರ್ಯಕ್ಕೆ ಬಂದು ಸುಮಾರು 35 ವರ್ಷಗಳಾದವು. ಅಲ್ಲಿಂದ ಅನೇಕ ಏಳು ಬೀಳುಗಳನ್ನು ಎದುರಿಸಿ ಈ ನಂದನವನವನ್ನು ನಿರ್ಮಿಸಿದ್ದಾರೆ. “ಸಮಗ್ರ ಕೃಷಿ”ಯೇ ಮಣ್ಣಿಗೆ ಜೀವನಾಧಾರವೆಂದು ಅರಿತು ಅದರಂತೆ ತೋಟವನ್ನು ನಿರ್ಮಿಸಿದ್ದಾರೆ.

ಬೇಸಗೆಯ ಬಿಸಿಲ ಝಳವನ್ನು ಎದುರಿಸಿ ಒಮ್ಮೆ ತೋಟದ ಒಳಹೊಕ್ಕರೆ ಮಲೆನಾಡಿನ ಸುಂದರ ಅನುಭವ ಉಂಟಾಗುತ್ತದೆ. ಭಾನೆತ್ತರಕ್ಕೆ ಬೆಳೆದ ತೆಂಗು, ಅಡಿಕೆ ನಡುವೆ ಅಲ್ಲಲ್ಲಿ ಬಾಳೆ, ಸಪೋಟ, ನಿಂಬೆ, ಕರಿಬೇವು, ದಾಳಿಂಬೆ ಇನ್ನು ಏನುಂಟು ಏನಿಲ್ಲ ಎಂಬ ಭಾವವನ್ನೀಯುತ್ತವೆ. ಹೆಬ್ಬೇವು, ಸಾಗುವಾನಿ ಆಕಾಶದೆತ್ತರ ಬೆಳೆದು ದಟ್ಟಾರಣ್ಯದ ಅನುಭವ ನೀಡುತ್ತವೆ. ಮಾವು, ಪೇರಲ ಹಾಗು ನಿಂಬೆ ಫಲದಿಂದ ಮೈದುಂಬಿ ನೋಡುಗರಿಗೆ ನಾಮ್ಮಿಂದ ಈ ರೀತಿ ಕೃಷಿ ಏಕೆ ಸಾಧ್ಯವಿಲ್ಲ ಎಂಬ ಭಾವ ಮೂಡಿಸುವುದು ಸುಳ್ಳಲ್ಲ. ಆಕಳ ಕರುಗಳ ಮಧುರ ಧ್ವನಿ, ತಲೆ ತಗ್ಗಿಸಿ ಹಸಿರು ಕಡಿಯುವ ಕುರಿ ಮರಿಗಳು, ಮರದ ನೆರಳಿನಲ್ಲಿ ಹೂವರಸುತ್ತಿರುವ ಜೇನುದುಂಬಿಗಳು, ಸಹಸ್ರಾರು ಪಕ್ಷಿಗಳಿಗೆ ಆಸರೆಯಾಗಿ ಅವಗಳನ್ನು ಪೊರೆಯುತ್ತಿರುವ ಕಾಡುಮರಗಳು ತೋಟದ ಸೊಬಗನ್ನು ಹೆಚ್ಚಿಸಿವೆ.

ಸಾವಯವ ಕೃಷಿಗೆ ಪೂರಕವಾಗಿ ನಿರ್ಮಿಸಿರುವ ಎರೆಹುಳು ತೊಟ್ಟಿಗಳು, ಜೀವಸಾರ ಘಟಕ ಮುಂತಾದವು ವೀರನಗೌಡರ ಶ್ರಮವನ್ನು ನಿರೂಪಿಸುತ್ತವೆ. ಜೀವ ವೈವಿಧ್ಯತೆಯನ್ನು ನೋಡಬೇಕಾದರೆ ಒಮ್ಮೆಯಾದರೂ ಈ ತೋಟಕ್ಕೆ ಭೇಟಿ ನೀಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ತಮ್ಮ ಜೀವಿತವನ್ನೆಲ್ಲ ಈ ಸಸ್ಯರಾಶಿ ಬೆಳೆಸಲು ಕಳೆದಿರುವ ವೀರನಗೌಡರು ಹೇಳುವುದು ಹೀಗೆ “ಮನುಷ್ಯನಾಗಿ ಹುಟ್ಟಿದ ಮೇಲೆ ನಾಲ್ಕು ಜನಕ್ಕೆ ಉಪಕಾರವಾಗಬೇಕು, ಇಲ್ಲದಿದ್ದರೆ ಈ ಜನ್ಮ ಏಕೆ”. ಈ ಸುಂದರ ವಾಕ್ಯಗಳು ಕೇಳುಗರ ಮನ ಮುಟ್ಟುವುದರಲ್ಲಿ ಸಂದೇಹವೇ ಇಲ್ಲ.

ಇವರ ಈ ಸಾಧನೆಯನ್ನು ಗಮನಿಸಿ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನ ಹಳೆ ವಿದ್ಯಾರ್ಥಿ ಸಂಘದಿಂದ ರಾಜ್ಯಮಟ್ಟದ “ದ್ವಾರಕಾನಾಥ್ ಶ್ರೇಷ್ಠ ಕೃಷಿಕ ಪ್ರಶಸ್ಥಿ” ನೀಡಿ ಗೌರವಿಸಿದೆ. ಆತ್ಮ ಯೋಜನೆಯ “ಶ್ರೇಷ್ಠ ಕೃಷಿಕ” ಸನ್ಮಾನವು ಅವರಿಗೆ ಲಭಿಸಿದೆ. ಸುತ್ತಮುತ್ತಲ ಹಲವಾರು ಕೃಷಿಕರು ಹಾಗೂ ಆಸಕ್ತರಿಗೆ ಬಿಡುವಿನ ವೇಳೆಯಲ್ಲಿ ಮಾಹಿತಿ ನೀಡಿ ಪ್ರೋತ್ಸಾಹಿಸುತ್ತಾರೆ. ಅವರಿಗೊಂದು ಶುಭಹಾರೈಕೆ ತಿಳಿಸಬಯಸುವವರು ಈ ಮೊಬೈಲ್ ಸಂಖ್ಯೆಯಲ್ಲಿ ( 94801 45737) ಅವರನ್ನು ಸಂಪರ್ಕಿಸಬಹುದು.

-ಡಾ. ಪಿ. ಆರ್ ಬದರಿಪ್ರಸಾದ್

ಸಹಾಯಕ ಪ್ರಾಧ್ಯಾಪಕರು (ಕೀಟಶಾಸ್ತ್ರ)

ಕೃಷಿ ಮಹಾವಿದ್ಯಾಲಯ, ಗಂಗಾವತಿ

Tags: Integrated farming, Gangavati, ಸಮಗ್ರ ಕೃಷಿ, ಗಂಗಾವತಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು