ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಭವಿಷ್ಯತ್ತಿನಲ್ಲಿ ವೈದ್ಯಕೀಯ ಹೇಗಿರುತ್ತದೆ ಗೊತ್ತಾ? ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ವೈದ್ಯಕೀಯ ಜಗತ್ತಿನಲ್ಲಿ ನಿರಂತರವಾಗಿ ಹೊಸ ಹೊಸ ಸಂಶೋಧನೆಗಳು ಮತ್ತು ಆವಿಷ್ಕಾರಗಳು ನಡೆಯುತ್ತಲೇ ಇರುತ್ತದೆ. ತಂತ್ರಜ್ಞಾನ ಮುಂದುವರೆದಂತೆಲ್ಲಾ ಹೊಸ ಹೊಸ ಯಂತ್ರಗಳು ಮತ್ತು ಸಲಕರಣೆಗಳು ವೈದ್ಯಕೀಯ ಸೇವೆಗೆ ಸೇರಿಕೊಳ್ಳುತ್ತವೆ. ಅದೇ ರೀತಿ ಹೊಸದಾದ ಔಷಧಿಗಳು, ಆಂಟಿಬಯೋಟಿಕ್‍ಗಳು ಮತ್ತು ಲಸಿಕೆಗಳು ನಿರಂತರವಾಗಿ ವೈದ್ಯಕೀಯ ಜಗತ್ತಿಗೆ ಸೇರ್ಪಡೆಗೊಳ್ಳುತ್ತಲೇ ಇದೆ. ಈ ರೀತಿ ಬದಲಾವಣೆಗೆ ತೆರೆದು ಕೊಳ್ಳುವ ಕಾರಣದಿಂದಲೇ ಇಂಗ್ಲೀಷ್ ಅಥವಾ ಅಲೋಪಥಿ ವೈದ್ಯಕೀಯ ಪ್ರವೃತ್ತಿಯನ್ನು ಮಾಡರ್ನ್ ಮೆಡಿಸಿನ್ ಎಂದೂ ಸಂಬೋಧಿಸಲಾಗುತ್ತಿದೆ.

ತನ್ನ ಸುತ್ತಲಿನ ವಾತಾವರಣ ಮತ್ತು ಪರಿಸರ ಬದಲಾದಂತೆ ಅದಕ್ಕೆ ಪೂರಕವಾಗಿ ಬದುಕುವ ಕಲೆಯನ್ನು ಸೂಕ್ಮಾಣು ಜೀವಿಗಳು ಕರಗತ ಮಾಡಿಕೊಂಡಿದೆ. ಈ ಕಾರಣದಿಂದಲೇ 1950ರಲ್ಲಿ ಬಳಸುತ್ತಿದ್ದ ಔಷಧಿ ಈಗ 2020 ರಲ್ಲಿ ಬಳಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವೈದ್ಯಕೀಯ ಜಗತ್ತು ಬದಲಾವಣೆಗಳಿಗೆ ತೆರೆದುಕೊಳ್ಳುವುದು ಅನಿವಾರ್ಯ. ವೈರಾಣುಗಳು ಮತ್ತು ಬ್ಯಾಕ್ಟೀರಿಯಗಳು ಬದಲಾದ ಸನ್ನಿವೇಶಕ್ಕೆ ತಮ್ಮ ದೇಹ ರಚನೆ ಬದಲಾವಣೆ ಮಾಡಿಕೊಂಡು ಬದುಕುವ ಕಲೆ ಕರಗತ ಮಾಡಿಕೊಂಡು ತಮ್ಮ ಅಸ್ಥಿತ್ವವನ್ನು ಸಾಬೀತು ಪಡಿಸಲು ನಿರಂತರವಾಗಿ ಯತ್ನಿಸುತ್ತಿರುತ್ತದೆ. ಇಂತಹ ಬದಲಾದ ವೈರಾಣು ಮತ್ತು ಬ್ಯಾಕ್ಟೀರಿಯಗಳನ್ನು ಗುರುತಿಸಿ, ಸೂಕ್ತ ಲಸಿಕೆ ಮತ್ತು ಔಷಧಿಗಳನ್ನು ಕಂಡುಹಿಡಿದು ಅಂತಹ ರೋಗಾಣುಗಳನ್ನು ಬಡಿದೋಡಿಸಲು ಮತ್ತು ನಿಯಂತ್ರಿಸಲು ವೈದ್ಯರು ಮತ್ತು ವಿಜ್ಞಾನಿಗಳು ನಿರಂತರವಾಗಿ ತಮ್ಮ ಜ್ಞಾನ, ಕೌಶಲ್ಯವನ್ನು ಬಳಸಿ, ಮನುಕುಲವನ್ನು ರಕ್ಷಿಸಲು ಟೊಂಕ ಕಟ್ಟಿ ನಿಂತಿರುತ್ತಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ಕಳೆದೆರಡು ವರುಷಗಳಲ್ಲಿ ನಡೆದ ಕ್ರಾಂತಿಕಾರಿ ಆವಿಷ್ಕಾರ ಮತ್ತು ಸಂಶೋಧನೆಗಳನ್ನು ಪಟ್ಟಿ ಮಾಡುವುದಾದರೆ ಈ ಕೆಳಗಿನಂತಿದೆ.

1. ಜೀನ್ ಎಡಿಟಿಂಗ್ ಅಥವಾ ಜೀನ್ ಪರಿವರ್ತನೆ.

2. ಟೆಲೆ ಮೆಡಿಸಿನ್ (ದೂರ ವೈದ್ಯ ಚಿಕಿತ್ಸೆ)

3. ಆನ್‍ಲೈನ್ ಮತ್ತು ಔಷಧಿಗಳ ಚಿಕಿತ್ಸೆ

4. ವರ್ಚುವಲ್ ರಿಯಾಲಿಟಿ/ ಕಾಲ್ಪನಿಕ ಜಗತ್ತು

5. ಕೃತಕ ಅಂಗಾಂಗಗಳು

6. ಥ್ರೀ-ಡಿ (3D) ಪ್ರಿಂಟಿಂಗ್

7. ನಿರ್ಣಾಯಕ ನಿಖರ ಔಷಧಿಗಳು

8. ಬ್ಲೂಟೂತ್ ಆರೋಗ್ಯ ಉಪಕರಣಗಳು

9. ನಿಸ್ತಂತು ಮೆದುಳು ವಾಹಕಗಳು ಮತ್ತು ಉಪಕರಣಗಳು

10. ರೋಬೋಟಿಕ್ ಸರ್ಜರಿ ಅಥವಾ ರೋಬೋಟಿಕ್ಸ್ ವೈದ್ಯ ಚಿಕಿತ್ಸೆ

11. ಆಕರ ಕೋಶಗಳು ಅಥವಾ ಸ್ಟೆಮ್ ಸೆಲ್‍ಗಳು

12. ಕೃತಕ ಬುದ್ಧಿ ಮತ್ತೆ ಅಥವಾ ಯಾಂತ್ರಿಕ ಬುದ್ಧಿ ಮತ್ತೆ

13. ಲೇಸರ್ ಚಿಕಿತ್ಸೆ 

14. ದಂತ ಇಂಪ್ಲಾಂಟ್ ಚಿಕಿತ್ಸೆ


1. ಜೀನ್ ಎಡಿಟಿಂಗ್ ಅಥವಾ ಜೀನ್ ಪರಿವರ್ತನೆ:

ಇದೊಂದು ವಿಶೇಷ ತಂತ್ರಜ್ಞಾನವಾಗಿದ್ದು ಬ್ಯಾಕ್ಟೀರಿಯಾದೊಳಗೆ ಸೇರಿಕೊಡು ವೈರಾಣುಗಳು ಸಂತಾನೋತ್ಪತ್ತಿ ಮಾಡುವಾಗ ಅಂತಹಾ ವೈರಾಣುಗಳ ಸೋಂಕಿತ ಅಥವಾ ಶಂಕಿತ…ಡಿಎನ್‌ಎ ಎಳೆಗಳನ್ನು ಕತ್ತರಿಸಿ ಅಥವಾ ರೂಪಾಂತರಿಸಿ ಡಿಎನ್‌ಎ ಎಳೆಗಳಿರುವ ವೈರಾಣುಗಳನ್ನು ಬಳಸಿ, ಕ್ಯಾನ್ಸರ್ ಮತ್ತು ಏಡ್ಸ್ ಮುಂತಾದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಪ್ರಯತ್ನ ಹಾಗೂ ಸಂಶೋಧನೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಇದರಲ್ಲಿ ಯಶಸ್ಸು ಸಿಗುವ ಆಶಾಭಾವನೆ ವಿಜ್ಞಾನಿಗಳು ಮತ್ತು ವೈದ್ಯರು ಹೊಂದಿದ್ದಾರೆ. ಆದರೆ ಈ ತಂತ್ರಜ್ಞಾನ ಬಳಸಿ ಹುಟ್ಟುವ ಮಗುವಿನ ವಂಶವಾಹಿಕ ಅಥವಾ ಜೀನ್‍ಗಳನ್ನು ಬದಲು ಮಾಡಿ ಬೇಕಾದಂತೆ ಮಾಡುವ ಸಾಧ್ಯತೆ ಇರುವುದರಿಂದ ಕೆಲವೊಂದು ಅಪಸ್ವರ ಕೂಡಾ ಕೇಳಿ ಬಂದಿದೆ.

2. ಟೆಲೆ ಮೆಡಿಸಿನ್ (ದೂರ ವೈದ್ಯ ಚಿಕಿತ್ಸೆ)

ಬದಲಾದ ತಂತ್ರಜ್ಞಾನ ಮತ್ತು ವೈಜ್ಞಾನಿಕತೆಯಿಂದಾಗಿ ಹೆಚ್ಚಿನ ರೊಗಿಗಳು ಹೆಚ್ಚು ಹೆಚ್ಚು ತಂತ್ರಜ್ಞಾನ ಆಧಾರಿತ ವೈದ್ಯಕೀಯ ಸೇವೆಗಳನ್ನು ಬಳಸಲು ಇಷ್ಟಪಡುತ್ತಾರೆ. ವೈದ್ಯರ ಜೊತೆ ನೇರ ಸಂದರ್ಶನದ ಬದಲಾಗಿ ದೂರವಾಣ ಮುಖಾಂತರ ಚರ್ಚಿಸಿ, ವಾಟ್ಸ್‍ಆಪ್ಗಳ ಮೂಲಕ ರೋಗದ ಮತ್ತು ಖಾಯಿಲೆಯ ವಿವರ ಕಳುಹಿಸಿ, ಚಿಕಿತ್ಸೆ ಪಡೆಯಲು ಹೆಚ್ಚು ಕಾತರರಾಗಿದ್ದಾರೆ. ಈಗ ಹೆಚ್ಚು ವೈದ್ಯಕೀಯ ಸೇವೆ ಪಡೆಯುವ ಆಪ್‍ಗಳು ಬಳಕೆಯಲ್ಲಿದೆ. ಈ ಆಪ್‍ಗಳ ಮುಖಾಂತರ ವೈದ್ಯರನ್ನು ಭೇಟಿಯಾಗದೆ ಕಾಲ್ಪನಿಕ ಅಥವಾ ವರ್ಚವಲ್ ಭೇಟಿ ಮಾಡಿ ರೋಗ ನಿರ್ಣಯ ಮಾಡಿ, ಚಿಕಿತ್ಸೆ ಪಡೆಯಲು ರೋಗಿಗಳು ಹೆಚ್ಚು ಇಷ್ಟಪಡುತ್ತಾರೆ, ವೈದ್ಯರÀ ಬಳಿ ಹೋಗಿ ಕಾಯಲು ಯಾರೂ ಇಷ್ಟಪಡುವುದಿಲ್ಲ. ಹಿಂದಿನ ಕಾಲದಂತೆ ವೈದ್ಯರ ಸ್ಪರ್ಶದಿಂದ, ಮಾತಿನಿಂದ ರೋಗ ವಾಸಿಯಾಗಯವ ಕಾಲ ಇದಲ್ಲ. ಈಗಿನ ವ್ಯಾವಹಾರಿಕ ಜಗತ್ತಿನಲ್ಲಿ, ಜನರಿಗೆ ಸಾಂಪ್ರದಾಯಿಕ ಚಿಕಿತ್ಸೆ ಮಾಡಿಸಲು ಸಮಯವೂ ಇಲ್ಲ. ಆಸಕ್ತಿಯೂ ಇಲ್ಲ ಮತ್ತು ವ್ಯವಧಾನವೂ ಇಲ್ಲ. ಎಲ್ಲವೂ ಕುಳಿತಲ್ಲಿಗೇ, ಕಾಲಬುಡದಲ್ಲಿ ಸಿಗುವ ಕಾಲ ಇದಾಗಿದೆ. ಈಗ ಸಾಂಕ್ರಾಮಿಕ ರೋಗ ಕೋವಿಡ್-19 ಕಾರಣದಿಂದಾಗಿ ವೈದ್ಯರನ್ನು ರೋಗಿಯು ನೇರ ಭೇಟಿ ಮಾಡಲಾರ. ರೋಗಿಯನ್ನು ಸ್ಪರ್ಶಿಸುವ ಅಥವಾ ಕೂಲಂಕುಷ ಪರೀಕ್ಷೆ ಸಾಧ್ಯವಾಗದ ಹಿನ್ನಲೆಯಲ್ಲಿ, ಈ ಟೆಲಿ ಮೆಡಿಸಿನ್ ಮತ್ತಷ್ಟು ಮುನ್ನತಿಗೆ ಬಂದಿದೆ ಎಂದರೂ ತಪ್ಪಾಗಲಾರದು.

3. ಆನ್‍ಲೈನ್ ಚಿಕಿತ್ಸೆ ಮತ್ತು ಔಷಧಿಗಳು:

ಆನ್‍ಲೈನ್ ಮುಖಾಂತರ ವೈದ್ಯರನ್ನು ಸಂಪರ್ಕಿಸಿ ಸಲಹೆ ಸೂಚನೆ ಪಡೆಯಲು ಸಾಧ್ಯವಿದೆ. ಎಲ್ಲೋ ಇರುವ ರೋಗಿ ಇನ್ನೆಲ್ಲೋ ಇರುವ ವೈದ್ಯರನ್ನು ಸಂದರ್ಶಿಸಲು ಅವಕಾಶವಿದೆ. ಇದೊಂದು ಎರಡು ಅಲುಗಿನ ಕತ್ತಿಯಾಗಿದ್ದು ಬಹಳ ಅನುಕೂಲಗಳು ಇದೆ ಮತ್ತು ಅಷ್ಟೇ ಅನಾನುಕೂಲಗಳು ಇದೆ. ಸಾಂಕ್ರಾಮಿಕ ರೋಗ ಇರುವ ಸಮಯದಲ್ಲಿ ಇದು ಹೆಚ್ಚು ಉಪಯೋಗಕ್ಕೆ ಬರುತ್ತದೆ. ಆನ್‍ಲೈನ್ ಮೂಲಕ ಔಷಧಿ ಖರೀದಿಸುವುದು ಬಹಳ ಅನುಕೂಲವಾದರೂ ಇದರಿಂದ ಹೆಚ್ಚು  ಔಷಧಿಗಳ ದುರ್ಬಳಕೆ ಆಗುವ ಎಲ್ಲಾ ಸಾಧ್ಯತೆಗಳೂ ಇದೆ.

4. ವರ್ಚುವಲ್ ರಿಯಾಲಿಟಿ ಅಥವಾ ಕಾಲ್ಪನಿಕ ಜಗತ್ತು

ಇದೊಂದು ವಿಶೇಷ ತಂತ್ರಜ್ಞಾನವಾಗಿದ್ದು ನಮ್ಮ ದೇಹದ ಅಂಗಾಂಗಗಳ ಸಂಪೂರ್ಣವಾದ ರಚನೆ ಮತ್ತು ಸಂಕೀರ್ಣಗಳ ವಿನ್ಯಾಸವನ್ನು ಗಣಕ ಯಂತ್ರದ ಮುಖಾಂತರ ತಿಳಿಯ ಬಹುದಾಗಿದೆ, ಅದಲ್ಲದೆ ರೋಗಿಗೆ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಲು  ರೋಗದ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಲು ಮತ್ತು  ಚಿಕಿತ್ಸೆಯ ಸ್ಪಂದನೆ ಬಗ್ಗೆ  ಮನ ಒಲಿಸಲು ಬಹಳ ಸಹಾಯ ಮಾಡುತ್ತದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಂಗಾಂಗಗಳ ರಚನೆಯನ್ನು ಅಭ್ಯಸಿಸಲು  ಮತ್ತು ರೋಗವನ್ನು ಅರ್ಥೈಸಲು ಈಗಲೂ ಬಹಳ ಉಪಯುಕ್ತವಾಗಿವೆ. ವಿಶೇಷ ತಂತ್ರಜ್ಞಾನದ ಮುಖಾಂತರ  ದೇಹದ ಸಂಪೂರ್ಣವಾದ  ರಚನೆಯನ್ನು ಮತ್ತು ವಿನ್ಯಾಸವನ್ನು ಸಿದ್ಧಪಡಿಸಿ ಆ ಮೂಲಕ ರೋಗ ಪತ್ತೆಗೆ ಹಾಗೂ ರೋಗದ  ಸಂಕೀರ್ಣತೆಯನ್ನು ತಿಳಿಯಲು ವೈದ್ಯರಿಗೆ ಅನುಕೂಲವಾಗುತ್ತದೆ.

5. ಕೃತಕ ಅಂಗಾಂಗಗಳು

3-ಡಿ ತಂತ್ರಜ್ಞಾನ ಬಳಸಿ, ಬಯೋಪ್ರಿಟಿಂಗ್ ಎಂಬ ವೈದ್ಯಕೀಯ ತಂತ್ರಜ್ಞಾನ ಬಳಸಿ, ವೈದ್ಯರು ಮತ್ತು ವಿಜ್ಞಾನಿಗಳು ಮಾನವ ದೇಹದಲ್ಲಿನ ರಕ್ತನಾಳಗಳು, ಕೃತಕ ಅಂಡಾಶಯಗಳು, ಮೇಧೋಜೀರಕ ಗ್ರಂಥಿಗಳನ್ನು ಸೃಷ್ಟಿಮಾಡಲು ಸಾಧ್ಯವಿದೆ. ರೋಗಯುಕ್ತ ಅಂಗಾಂಗಳನ್ನು ತೆಗೆದು ಅದೇ ರೀತಿಯ ಹೊಸ ಅಂಗಾಂಗಗಳನ್ನು 3-ಡಿ ತಂತ್ರಜ್ಞಾನ ಬಳಸಿ ರೋಗಿಯ ದೇಹದೊಳಗೆ ಬೆಳೆಸುವ ಹಂತಕ್ಕೂ ವೈದ್ಯವಿಜ್ಞಾನ ಬೆಳೆದಿದೆ. ಈ ನಿಟ್ಟಿನಲ್ಲಿ ನಿರಂತರ ಸಂಶೋಧನೆ ನಡೆಯುತ್ತಿದ್ದು, ಯಶಸ್ವಿಯಾದಲ್ಲಿ ಮುಂದೊಂದು ದಿನ ಕ್ರಾಂತಿಕಾರಕ ವ್ಯವಸ್ಥೆಗೆ ನಾಂದಿ ಹಾಡಲಿದೆ. ಇದರಿಂದಾಗಿ ಇನ್ನೊಬ್ಬರಿಂದ ಅಂಗಗಳನ್ನು ಪಡೆಯುವುದರ ಬದಲು ರೋಗಿಯ ದೇಹದಲ್ಲಿಯೇ ಅಂಗ ಉತ್ಪಾದನೆ ಮಾಡಿ ಬಳಸುವಂತೆ ಮಾಡುವ ಪ್ರಯತ್ನ ನಡೆದಿದೆ.

6. ಥ್ರೀ-ಡಿ ಪ್ರಿಂಟಿಂಗ್ ಅಥವಾ ಯಥಾನಕಲು ತಂತ್ರಜ್ಞಾನ:

3-ಡಿ ತಂತ್ರಜ್ಞಾನದ ಮುಖಾಂತರ ಕಳೆದು ಹೋದ ಅಥವಾ ರೋಗಯುಕ್ತ ಅಂಗಾಂಗಗಳು ಅಥವಾ ಕೀಲುಗಳನ್ನು ಬದಲಾಯಿಸಲು ಬಳಸಲಾಗುತ್ತದೆ. ಕಳೆದು ಹೋದ ಅಂಗಗಳನ್ನು ಹೋಲುವ, ಅದೇ ವಿನ್ಯಾಸದ ಕೀಲು ಸಿದ್ಧಪಡಿಸಿ, ರೋಗಿಗಳಲ್ಲಿ ಬಳಸುವಲ್ಲಿ ಈ ತಂತ್ರಜ್ಞಾನ ಬಹಳ ಉಪಯುಕ್ತವಾಗಿದೆ.

7. ನಿರ್ಣಾಯಕ ನಿಖರ ಔಷಧಿಗಳು

ಒಬ್ಬ ವ್ಯಕ್ತಿಯ ವಂಶವಾಹಕಗಳ ರಚನೆ ವಿನ್ಯಾಸವನ್ನು ಅಭ್ಯಾಸ ಮಾಡಿ ಅದಕ್ಕೆ ಪೂರಕವಾದ ಔಷಧಿ ಮತ್ತು ಚಿಕಿತ್ಸೆಯನ್ನು ಈ ವೈದ್ಯಕೀಯ ತಂತ್ರಜ್ಞಾನದ ಮುಖಾಂತರ ಮಾಡಲು ಸಾಧ್ಯವಿದೆ. ಉದಾಹರಣೆಗೆ ಕ್ಯಾನ್ಸರ್ ಚಿಕಿತ್ಸೆಗೆ ಈ ತಂತ್ರಜ್ಞಾನ ಬಳಸಲಾಗಯತ್ತದೆ. ಇಲ್ಲಿ ರೋಗಿಯ ಜೀವ ಕೋಶಗಳು ಮತ್ತು ಪ್ರೋಟಿನ್ ರಚನೆಗೆ ಅನುಗುಣವಾಗಿ ಔಷಧಿ ತಯಾರಿಸಿ, ಕೇವಲ ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ಸರಿಯಾಗಿಸಿ ಚಿಕಿತ್ಸೆ ನೀಡಿ ಕ್ಯಾನ್ಸರ್ ಅನ್ನು ಗುಣಪಡಿಸಲು ಬಳಸಲಾಗುತ್ತದೆ.

8. ಬ್ಲೂಟೂತ್ ಆರೋಗ್ಯ ಉಪಕರಣಗಳು

2000 ನೇ ಇಸವಿಯಲ್ಲಿ ಬ್ಲೂಟೂತ್ ತಂತ್ರಜ್ಞಾನ ಬಳಕೆಗೆ ಬಂದಿತ್ತು. ಈ ಬ್ಲೂಟೂತ್ ತಂತ್ರಜ್ಞಾನದ ಉಪಕರಣಗಳು ಬಳಸಿ ರೋಗಿಯ ದೈಹಿಕ ಕ್ಷಮತೆ, ಹೃದಯಬಡಿತ, ರಕ್ತದೊತ್ತಡ, ಹೃದಯದ ಇಸಿಜಿ, ನಿದ್ರೆಯ ವ್ಯತ್ಯಾಸ ಎಲ್ಲವನ್ನು ಕಂಡು ಹಿಡಿಯಲು ಸಾಧ್ಯವಿದೆ. ಮದುಮೇಹಿಗಳಲ್ಲಿ ಮತ್ತು ಹೃದಯ ತೊಂದರೆ ಇರುವವರಲ್ಲಿ ಉಪಕರಣ ಹೆಚ್ಚು ಉಪಯೋಗಕ್ಕೆ ಬರುತ್ತದೆ. ಇತ್ತೀಚಿಗೆ ಏಪಲ್ ಕಂಪನಿ ಹೃದಯ ಚಲನೆಯ ವ್ಯತ್ಯಾಸವನ್ನು ಪತ್ತೆ ಹಚ್ಚಿ ಇಅಉ ದಾಖಲು ಮಾಡುವ ವಾಚ್ ಸಿದ್ಧಪಡಿಸಿದ್ದು ಹೆಚ್ಚು ಉಪಯೋಗಕ್ಕೆ ಬಂದಿದೆ. ಒಟ್ಟಿನಲ್ಲಿ ಬ್ಲೂಟೂತ್ ತಂತ್ತಜ್ಞಾನ ರೋಗಿಯ ಜೀವ ಉಳಿಸುವಲ್ಲಿ ವೈದ್ಯರಿಗೆ ನೆರವಾಗಿದೆ. ಇನ್ನು ಚತುರ ಬ್ಲೂಟೂತ್ ಇನ್‍ಹೀಲರ್‍ಗಳು ಅತ್ಯಂತ ನಿಖರವಾಗಿ ರೋಗಿಗೆ ಬೇಕಾದ ಸಮಯದಲ್ಲಿ ಎಚ್ಚರಿಸಿ ಬೇಕಾದ ಪ್ರಮಾಣದಲ್ಲಿ ಔಷಧಿ ಪಡೆಯಲು ಎಚ್ಚರಿಸುತ್ತದೆ ಮತ್ತು ಪ್ರಚೋದಿಸುತ್ತದೆ.

9. ನಿಸ್ತಂತು ಮೆದುಳು ವಾಹಕಗಳು

ಮೆದುಳಿನ ಒಳಗೆ ಹುದುಗಿಸಿಡಬಹುದಾದ ಮೆದುಳಿನ ಬಗ್ಗೆ ಮಾಹಿತಿ ನೀಡುವ ಕರಗಿ ಹೋಗ ಬಹುದಾದ ಚಿಕ್ಕ ವಾಹಕಗಳು ಲಭ್ಯವಿದ್ದು, ಅವುಗಳು ತಮ್ಮ ಕೆಲಸ ಮುಗಿದ ಬಳಿಕ ಕರಗಿ ಹೋಗುತ್ತದೆ. ಅವುಗಳನ್ನು ಸರ್ಜರಿ ಮಾಡಿ ತೆಗೆಯಬೇಕಾದ ಅನಿವಾರ್ಯತೆ ಇರುವುದಿಲ್ಲ.

10. ರೋಬೋಟಿಕ್ ಸರ್ಜರಿ

ರೋಬೋಟಿಕ್ ಸರ್ಜರಿ ಮುಖಾಂತರ ಅತ್ಯಂತ ಕ್ಲಿÀಷ್ಟಕರವಾದ ಸಂಕೀರ್ಣವಾದ ಚಿಕಿತ್ಸೆ ಮಾಡುವಲ್ಲಿ, ರೋಬೋಟ್‍ಗಳು ವೈದ್ಯರಿಗೆ ಸಹಾಯ ಮಾಡುತ್ತದೆ. ಅತ್ಯಂತ ನಿಖರವಾಗಿ ಮತ್ತು ಪರಿಪೂರ್ಣವಾದ ಸರ್ಜರಿ ಮಾಡಲು ಈ ರೋಬೋಟ್‍ಗಳು ವೈದ್ಯರಿಗೆ ನೆರವು ನೀಡುತ್ತದೆ. ಇದರ ಜೊತೆಗೆ ಸರ್ಜರಿ ಮಾಡುವಾಗಲೇ ನಿಖರವಾದ ಮಾಹಿತಿ ಪಡೆಯಲು ಸಾಧ್ಯವಾಗಿದೆ. ಮುಂದೊಂದು ದಿನ ಸರ್ಜನ್‍ನ ಬದಲಾಗಿ ರೋಬೋಟ್ ಸಂಪೂರ್ಣವಾಗಿ ಸರ್ಜರಿ ಮಾಡಿದರೂ ಆಶ್ಚರ್ಯವಿಲ್ಲ. ಈ ದಿಸೆಯಲಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿದೆ. ಈಗ ಕಿಡ್ನಿ ಸರ್ಜರಿ, ಮೆದುಳಿನ ಸರ್ಜರಿ ಹಾಗೂ ಹೃದಯದ ಸರ್ಜರಿಗಳಿಗೆ ಈ ರೋಬೋಟ್‍ಗಳು ಹೆಚ್ಚು ಬಳಸುತ್ತಿದ್ದಾರೆ.

11. ಆಕರ ಕೋಶಗಳು

ಆಕರ ಕೋಶಗಳನ್ನು ದೇಹದಿಂದ ಹೊರತೆಗೆದು, ಕೃತಕವಾಗಿ ಬೆಳೆಸಿ, ಕಳೆದು ಹೋದ ಅಂಗಾಂಶಗಳನ್ನು ಪುನರ್ ಸೃಷ್ಟಿಸುವಲ್ಲಿ ವಿಶೇಷ ಪ್ರಯತ್ನಗಳು ನಡೆಯುತ್ತಿದೆ. ಇದು ಯಶಸ್ವಿಯಾದಲ್ಲಿ ವೈದ್ಯಕೀಯ ಜಗತ್ತಿನಲ್ಲಿ ಕ್ರಾಂತಿಕಾರಿ ಬದಲಾವಣೆ ಬರಲು ಸಾಧ್ಯವಿದೆ. ಈಗ ಒಬ್ಬರಿಂದ ಆಕರ ಕೋಶ ತೆಗೆದು ಇನ್ನೊಬ್ಬರಿಗೆ ಕಸಿಮಾಡಿ ಸಾಕಷ್ಟು ಯಶಸ್ಸು ಪಡೆದಿದ್ದೇವೆ. ಒಟ್ಟಿನಲ್ಲಿ ಈ ಆಕರ ಕೋಶಗಳು ಮುಂದೊಂದು ದಿನ ವೈದ್ಯರಿಗೆ ಬ್ರಹ್ಮಾಸ್ತ್ರವಾಗುವುದರಲ್ಲಿ ಸಂಶಯವೇ ಇಲ್

12. ಕೃತಕ ಬುದ್ಧಿಮತ್ತೆ 

ಕೃತಕ ಬುದ್ಧಿ ಮತ್ತೆ ಅಥವಾ ಯಾಂತ್ರಿಕ ಬುದ್ಧಿ ಮತ್ತೆ ವಿಜ್ಞಾನದ ಒಂದು ವಿಭಾಗವಾಗಿರುತ್ತದೆ. ಇಲ್ಲಿ ಗಣಕ ಯಂತ್ರದ ಸಹಾಯದಿಂದ ಯಂತ್ರವು ತನ್ನ ಪರಿಸರವನ್ನು ಗ್ರಹಿಸಿ ತನಗೆ ಕೊಟ್ಟಿರುವ ಕೆಲಸವನ್ನು ಅಂದಾಜಿಸಿ ತನ್ನ ಗುರಿಯನ್ನು ತಲುಪಲು ಅಗತ್ಯವಿರುವ ಕ್ರಮಗಳನ್ನು ತಾವೇ ಕೈಗೊಳ್ಳುತ್ತದೆ. ಮನುಷ್ಯನ ಬುದ್ಧಿ ಮತ್ತೆಯ ಎಲ್ಲಾ ಸಾಮಥ್ರ್ಯಗಳನ್ನು ಮರು ರಚಿಸಲು ಸಾಧ್ಯ ಎಂದು ಕೃತಕ ಬುದ್ಧಿ ಮತ್ತೆಯ ವಾದವಾಗಿರುತ್ತದೆ. ಈ ಕೃತಕ ಬುದ್ಧಿ ಮತ್ತೆಯ ಕೌಶಲವನ್ನು ವೈದ್ಯಕೀಯ ಶಾಸ್ತ್ರದಲ್ಲಿಯೇ ಅಳವಡಿಸಿಕೊಳ್ಳುವ ಪ್ರಯತ್ನ ನಡೆದು ಒಂದಷ್ಟು ಯಶಸ್ಸು ಪಡೆಯಲಾಗಿದೆ. ರೋಗ ಪತ್ತೆ  ಹಚ್ಚುವಿಕೆ ಮತ್ತು ರೋಗದ ಚಿಕಿತ್ಸೆಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಹೊಸದಾದ ಔಷಧಿ ಕಂಡು ಹಿಡಿಯಲು ಮತ್ತು ಹೊಸದಾದ ಔಷಧಿಯ ಬಗ್ಗೆ ಸಂಶೋಧನೆ ಮಾಡಲು ಸಂಶೋಧನೆ ಸಮಯದಲ್ಲಿ ಔಷಧಿಯ ಕ್ಲಿನಿಕಲ್ ಟ್ರಯಲ್ ಕೃತಕ ಬುದ್ದಿಮತ್ತೆ ಬಹಳ ಉಪಯುಕ್ತವಾಗಿರುತ್ತದೆ. ಒಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯನ್ನು  ಪರಿಣಾಮಕಾರಿಯಾಗಿ ಬಳಸಿಕೊಂಡಲ್ಲಿ ವೈದ್ಯರು ತಮಗೆ ಮಾಡಬಹುದಾದ ಕೆಲಸವನ್ನು  ಬಹಳಷ್ಟು  ಶೀಘ್ರವಾಗಿ  ಯಾವುಧೇ ಅಡೆತಡೆ ಇಲ್ಲದೆ, ಸುಲಲಿತವಾಗಿ  ಮಾಡಲು ಸಾಧ್ಯವಿದೆ. ಅದೇ ರೀತಿ  ಕೆಲವೊಮ್ಮೆ ತಮಗೆ ಮಾಡಲಾಗದ ಕೆಲಸವನ್ನು ಈ ಗಣಕಯಂತ್ರಕ್ಕೆ ವಹಿಸಿಕೊಟ್ಟಿಲ್ಲಿ, ಅದು ತನ್ನ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ವೈದ್ಯರಿಗೆ ಬೇಕಾದ ಮಾಹಿತಿ ಪಡೆದುಕೊಂಡು ವೈದ್ಯರ ಕೆಲಸವನ್ನು ಸುಗಮಗೊಳಿಸುತ್ತದೆ ಎಂದು ತಿಳಿದುಬಂದಿದೆ.

13. ಲೇಸರ್ ಚಿಕಿತ್ಸೆ

ಇತ್ತೀಚಿಗೆ ವೈದ್ಯಕೀಯ ಚಿಕಿತ್ಸೆಯಲ್ಲಿ ಲೇಸರ್‍ಗಳಿಗೆ ಹೆಚ್ಚು ಪ್ರಾಮುಖ್ಯತೆ ಬಂದಿದೆ. ನೋವಿಲ್ಲದ ಸರಳ ಮತ್ತು ಆಸ್ಪತ್ರೆಯಲ್ಲಿ ಹೆಚ್ಚು ದಿನ ಇರಲೇಬೇಕಾದ ಅನಿವಾರ್ಯತೆ ಇಲ್ಲದ ಚಿಕಿತ್ಸೆ ಇದಾಗಿರುತ್ತದೆ. ದಂತ ಚಿಕಿತ್ಸೆಯಲ್ಲಿಯೂ ಇದರ ಬಳಕೆ ಹೆಚ್ಚಾಗಿದೆ. ವಸಡಿನ ಬಣ್ಣ ಬದಲಾಯಿಸಲು, ಸಣ್ಣ ಪುಟ್ಟ ಗಡ್ಡೆಗಳನ್ನು ತೆಗೆಯಲು ಲೇಸರ್ ಬಳಸುತ್ತಾರೆ. ಆರಂಭಿಕ ಹಂತದಲ್ಲಿರುವ ದಂತಕ್ಷಯವನ್ನು ಪತ್ತೆ ಹಚ್ಚಲು ಮತ್ತು ಚಿಕಿತ್ಸೆ ಮಾಡಲು ಇದು ಬಹಳ ಉಪಯುಕ್ತವಾಗಿದೆ. ಹುಳುಕಾದ ಹಲ್ಲನ್ನು ತುಂಬಿಸುವ ಮೊದಲು ಹಲ್ಲನ್ನು ಡ್ರಿಲ್ ಮಾಡಿ ತೂತು ಮಾಡುತ್ತಾರೆ. ಹೆಚ್ಚಿನ ಜನರು ಇದಕ್ಕೆ ಹೆದರುತ್ತಾರೆ. ಈ ಲೇಸರ್ ಮುಖಾಂತರ ಹುಳುಕಾದ ಹಲ್ಲಿನ ಭಾಗವನ್ನು ತೆಗೆದು, ಅಲ್ಲಿಗೆ ಹಲ್ಲಿನ ಬಣ್ಣದ ಸಿಮೆಂಟ್ ತುಂಬಿಸಲಾಗುತ್ತದೆ. ದಂತಕ್ಷಯ ಚಿಕಿತ್ಸೆಯಲ್ಲಿ ಮತ್ತು ವಸಡು ಬಣ್ಣ ಬದಲಾಯಿಸುವ ಚಿಕಿತ್ಸೆಯಲ್ಲಿ ಲೇಸರ್ ಹೆಚ್ಚು ಜನಪ್ರಿಯವಾಗಿದೆ ಮತ್ತು ಹೊಸ ಆಶಾವಾದವನ್ನು ಜನರಲ್ಲಿ ಹುಟ್ಟಿಸಿದೆ.

14. ದಂತ ಇಂಪ್ಲಾಂಟ್ಸ್

ದಂತ ಇಂಪ್ಲಾಂಟ್ಸ್ ದಂತ ವೈದ್ಯಕೀಯ ಕ್ಷೇತ್ರದ ಹೊಸ ಆವಿಷ್ಕಾರವಾಗಿ ರೋಗಿಗಳಿಗೆ ವರದಾನವಾಗಿದೆ. ಈ ಹಿಂದೆ ಕಳೆದು ಹೋದ ಹಲ್ಲನ್ನು ತೆಗೆದು ಹಾಕುವ ಸೆಟ್ ಅಥವಾ ಅಕ್ಕ ಪಕ್ಕದ ಹಲ್ಲನ್ನು ಸಣ್ಣದು ಮಾಡಿ ಸೇತುವೆ ಅಥವಾ ಬ್ರಿಡ್ಜ್ ಮಾಡಿ ಸರಿಪಡಿಸಲಾಗುತ್ತಿತ್ತು. ಆದರೆ ಈಗ ಟೈಟಾನಿಯನ್ ಲೋಹದಿಂದ ಮಾಡಿದ ಇಂಪ್ಲಾಂಟ್ಸ್‌ ಅನ್ನು ದವಡೆ ಎಲುಬಿನ ಒಳಗೆ ಸಿಲುಕಿಸಿ, ಅದಕ್ಕೆ ಹಲ್ಲನ್ನು ಜೋಡಣೆ ಮಾಡಲಾಗುತ್ತದೆ. ಇದನ್ನು ಮೂರನೇ ಡೆಂಟಿಷನ್ ಎಂದೂ ಕರೆಯುತ್ತಾರೆ. ಈ ಮೊದಲು ನಮಗೆ ಹಾಲು ಹಲ್ಲು ಮತ್ತು ಶಾಶ್ವತ ಹಲ್ಲು ಎಂಬ ಎರಡೇ ರೀತಿಯ ಹಲ್ಲು ಇತ್ತು. ಈಗ ಇದಕ್ಕೆ ದಂತ ವೈದ್ಯರು ಮತ್ತು ವಿಜ್ಞಾನಿಗಳು ಸೇರಿ ತಯಾರಿಸಿದ ಮೂರನೇ ಹಲ್ಲು ದಂತ ಇಂಪ್ಲಾಂಟ್ಸ್ ಸೇರಿಕೊಂಡಿರುವುದು ರೋಗಿಗಳಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದೆ. ಬರೀ ಹಲ್ಲು ಮಾತ್ರವಲ್ಲದೆ ಕಳೆದು ಹೋದ ಗಲ್ಲ, ಕೆನ್ನೆ, ಗದ್ದ ಹಾಗೂ ಕಣ್ಣು ಹೀಗೆ ಎಲ್ಲಾ ಅಂಗಗಳನ್ನು ಪುನರ್ ನಿರ್ಮಿಸಲು ಸಾಧ್ಯವಾಗಿದೆ. ಒಟ್ಟಿನಲ್ಲಿ ಇಂಪ್ಲಾಂಟ್ಸ್‍ನಿಂದಾಗಿ ರೋಗಿಗಳಿಗೆ ಪುನಃ ಮೂಲ ಮುಗುಳುನಗೆಯನ್ನು ಮರುಸೃಷ್ಟಿ ಮಾಡಲು ಸಹಕಾರಿಯಾಗಿದೆ ಎಂದರೂ ತಪ್ಪಾಗಲಾರದು.

ಕೊನೆಮಾತು:

ಈಗಿನ ಸದ್ಯದ ವಿದ್ಯಮಾನ ಮತ್ತು ಬೆಳವಣಿಗಳನ್ನು ಗಮನಿಸುವಾಗ ಹೆಚ್ಚಿನ ಎಲ್ಲಾ ರೋಗಗಳು ನಮ್ಮ ದೇಹದ ರಕ್ಷಣಾ ವ್ಯವಸ್ಥೆಗಳಿಗೆ ಮತ್ತು ಜೀವನ ಶೈಲಿಗೆ ನೇರವಾದ ಸಂಬಂಧ ಹೊಂದಿದೆ ಎಂದು ತಿಳಿದು ಬಂದಿದೆ. ಈಗ ನಮ್ಮ ದೇಶ ಮತ್ತು ವಿಶ್ವ ಅನುಭವಿಸುತ್ತಿರುವ ಕೋವಿಡ್-19 ರೋಗ ಕೂಡಾ ರಕ್ಷಣಾ ವ್ಯವಸ್ಥೆ ಕುಸಿದವರಲ್ಲಿ ಹೆಚ್ಚು ಮಾರಣಾಂತಿಕವಾಗಿ ಕಾಡುತ್ತಿರುವುದು ನಮಗೆ ತಿಳಿದು ಬಂದಿದೆ. ಇನ್ನು ಸ್ಟಿರಾಯ್ಡ್ ಬಳಕೆ ಮತ್ತು ಮಧುಮೇಹ ಇವೆರಡೂ ಸೇರಿಕೊಂಡು ರೋಗ ಮತ್ತಷ್ಟು ಮಾರಣಾಂತಿಕ ವಾಗಿರುವುದು ಬಹಳ ಸತ್ಯವಾದ ವಿಚಾರವಾಗಿದೆ. ಅದೇ ರೀತಿ ಶತಮಾನಗಳ ಹಿಂದೆ ನಮ್ಮನ್ನು ಕಾಡಿದ ರೋಗಗಳಾದ ಕಪ್ಪು ಶಿಲೀಂಧ್ರ ರೋಗ ಅಥವಾ ಮ್ಯುಕೋರ್ ಮೈಕೋಸಿಸ್ ರೋಗ ಕೂಡಾ ಈಗ ಮೈಕೊಡವಿ ಎದ್ದು ನಿಂತು ಮನುಕುಲವನ್ನು ಬೆಚ್ಚಿಬೀಳಿಸಿದೆ. ಈ ನಿಟ್ಟಿನಲ್ಲಿ ನಮ್ಮ ವೈದ್ಯರುಗಳು ಪುನರಾಮರ್ಷಿಸಿಕೊಂಡು ಅಥವಾ ಸಿಂಹಾವಲೋಕನ ಮಾಡಿಕೊಂಡು ರೋಗಿಗಳ ರಕ್ಷಣಾ ವ್ಯವಸ್ಥೆಯನ್ನು ಸುದೃಢಗೊಳಿಸುವತ್ತ ಹೆಚ್ಚಿನ ಅರಿವು ಮತ್ತು ಜಾಗೃತಿ ರೋಗಿಗಳಲ್ಲಿ ಮಾಡಬೇಕಾದ ಅನಿವಾರ್ಯತೆ ಇದೆ.

ಈಗಿನ ಕಾಲಘಟ್ಟದಲ್ಲಿ ನಮ್ಮ ಜೀವನಶೈಲಿ, ಆಹಾರ ಪದ್ಧತಿ ಮತ್ತು ಕೆಲಸದ ಒತ್ತಡ, ವಾತಾವರಣದಿಂದಾಗಿ ಹೆಚ್ಚಿನ ರೋಗಗಳು ಬರುತ್ತದೆ ಎಂದೂ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್, ಮಾನಸಿಕ ಖಿನ್ನತೆ, ಹೃದಯಾಘಾತ ಇವೆಲ್ಲವೂ ಜೀವನಶೈಲಿ ಮತ್ತು ಆಹಾರ ಪದ್ಧತಿಗೆ ನೇರವಾದ ಸಂಬಂಧ ಹೊಂದಿದೆ. ಈ ನಿಟ್ಟಿನಲ್ಲಿ 21ನೇ ಶತಮಾನದಲ್ಲಿ ರೋಗದ ಚಿಕಿತ್ಸೆಗಿಂತ ರೋಗ ತಡೆಗಟ್ಟುವುದು ಲೇಸು ಎಂದು ವೈದ್ಯರು ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ. ಈ ಕಾರಣದಿಂದ ವೈದ್ಯರು ಹೆಚ್ಚು ಹಚ್ಚು ರೋಗಿಗಳನ್ನು ಮನವೊಲಿಸಿ, ಜೀವನಶೈಲಿ ಪರಿವರ್ತನೆ, ಆಹಾರ ಪರಿವರ್ತನೆ ಮತ್ತು ಆರೋಗ್ಯ ಪೂರ್ಣ ಜೀವನ ಕ್ರಮ ಅನುಸರಿಸುವಂತೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ 21ನೇ ಶತಮಾನದಲ್ಲಿ ವೈದ್ಯರುಗಳ ಚಿಂತನಾ ಲಹರಿ ಮತ್ತು ಚಿಕಿತ್ಸಾ ಪದ್ಧತಿ ಈ ನಿಟ್ಟಿನಲ್ಲಿ ಸಾಗುತ್ತಿರುವುದು ತುಂಬಾ ಧನಾತ್ಮಕ ಬೆಳವಣಿಗೆ ಎಂದರೂ ತಪ್ಪಾಗಲಾರದು.

-ಡಾ|| ಮುರಲೀಮೋಹನ ಚೂಂತಾರು

 9845135787

ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು


Tags: Future Medicine, Medical Technologies, ಭವಿಷ್ಯದ ವೈದ್ಯಕೀಯ, ವೈದ್ಯಕೀಯ ತಂತ್ರಜ್ಞಾನ


(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು