ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18 ವರ್ಷಕ್ಕೆ ಮೇಲ್ಪಟ್ಟ ಎಲ್ಲ ವಯೋಮಾನದ ದಿವ್ಯಾಂಗರಿಗೂ ತಾರತಮ್ಯವಿಲ್ಲದೆ ಕೋವಿಡ್ ಲಸಿಕೆ ನೀಡಬೇಕು ಎಂದು ಸಕ್ಷಮ ಜಿಲ್ಲಾ ಘಟಕವು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಜಿಲ್ಲಾ ಅಂಗವಿಕಲ ಕಲ್ಯಾಣಧಿಕಾರಿಗಳು ಮೇ 23ರಂದು ಹೊರಡಿಸಿದ ಆದೇಶದನ್ವಯ ದಿವ್ಯಾಂಗರಿಗೆ ಲಸಿಕೆ ವಿತರಣೆ ಆರಂಭವಾಗಿರುವುದು ನಿಜ. ಆದರೆ ಆದೇಶದಲ್ಲಿ 18ರಿಂದ 45 ವರ್ಷ ವಯೋಮಾನದ ಒಳಗಿನ ದಿವ್ಯಾಂಗರಿಗೆ ಹಾಗೂ ಅವರನ್ನು ಲಸಿಕಾ ಕೇಂದ್ರಕ್ಕೆ ಕರೆದುಕೊಂಡು ಬರುವ ಒಬ್ಬ ವ್ಯಕ್ತಿಗೆ ಲಸಿಕೆ ವಿತರಿಸಲಾಗುವುದು ಎಂದು ತಿಳಿಸಲಾಗಿದೆ.
ಆದರೆ ವಾಸ್ತವದಲ್ಲಿ 45ಕ್ಕಿಂತ ಹೆಚ್ಚಿನ ವಯೋಮಾನದ ದಿವ್ಯಾಂಗರಿಗೆ ಕೋವಿಡ್ ಸೋಂಕಿನ ಅಪಾಯದ ಸಾಧ್ಯತೆ ಹೆಚ್ಚಾಗಿದೆ. ಆದರೆ ಅಧಿಕಾರಿಗಳ ಆದೇಶದನ್ವಯ ಈ ವಯೋಮಾನದ ಹಿರಿಯರಿಗೆ ಲಸಿಕೆ ವಿತರಿಸಲಾಗುತ್ತಿಲ್ಲ. ಇದು ಸರಿಯಾದ ಕ್ರಮವಲ್ಲ ಎಂದು ಜಿಲ್ಲಾ ಸಕ್ಷಮ ಘಟಕ ಹೇಳಿದೆ.
https://amzn.to/3fyFaWu
ಅಷ್ಟೇ ಅಲ್ಲದೆ, ದಿವ್ಯಾಂಗರನ್ನು ಲಸಿಕಾ ಕೇಂದ್ರಕ್ಕೆ ಕರೆದುಕೊಂಡು ಬರುವ ವ್ಯಕ್ತಿ 45 ವರ್ಷಕ್ಕೆ ಮೇಲ್ಪಟ್ಟ ಹಿರಿಯ ನಾಗರಿಕರಾಗಿದ್ದಲ್ಲಿ ಅವರಿಗೆ ಲಸಿಕೆ ನಿರಾಕರಿಸಲಾಗುತ್ತಿದೆ ಎಂಬ ದೂರುಗಳೂ ಕೇಳಿಬಂದಿವೆ.
ದಿವ್ಯಾಂಗರಿಗೆ ಲಸಿಕೆ ನೀಡುವ ವಿಚಾರದಲ್ಲಿ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಇಲ್ಲದ ವಯೋಮಾನದ ನಿರ್ಬಂಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಯಾಗಿದೆ ಎಂದು ಸಕ್ಷಮ ಪದಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಕೂಡಲೇ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳಳಬೇಕು ಎಂದು ಒತ್ತಾಯಿಸಿ ಸಕ್ಷಮ ವತಿಯಿಂದ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರು, ಮುಖ್ಯಮಂತ್ರಿಗಳು ಹಾಗೂ ಪ್ರಧಾನ ಮಂತ್ರಿಗಳಿಗೆ ಕೋರಿಕೆ ಸಲ್ಲಿಸಲಾಗಿದೆ. ಇದರ ಜತೆಗೆ ವಿಕಲಚೇತನರಿಗೆ ಕೋವಿಡ್ ವಿಶೇಷ ಪ್ಯಾಕೇಜ್ ಒದಗಿಸುವಂತೆಯೂ ಮನವಿ ಸಲ್ಲಿಸಲಾಗಿದೆ ಎಂದು ಸಕ್ಷಮ ಅಧ್ಯಕ್ಷ ಡಾ. ವಿ. ಮುರಲೀಧರ ನಾಯಕ್ ತಿಳಿಸಿದ್ದಾರೆ.
Tags: Covid vaccination, Sakshama, Dakshina Kannada, ಕೋವಿಡ್ ಲಸಿಕೆ, ದಕ್ಷಿಣ ಕನ್ನಡ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ