ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಮೈಸೂರು: ಕೋವಿಡ್ ವಿರುದ್ಧ ಹೋರಾಡಲು ಜನತೆಗೆ ಅಗರ್ವಾಲ್ ಸಮಾಜದಿಂದ ನೆರವು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಮೈಸೂರು: ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಮೈಸೂರಿನ ಜನತೆಗೆ ಸಹಾಯದ ಬೆನ್ನೆಲುಬಾಗಿ ಕಳೆದ ಮೂರು ತಿಂಗಳಿಂದಲೂ ಅವಿರತ ಸೇವೆ ಮಾಡುತ್ತಾ ಜೊತೆಗೆ ನಿಂತಿದೆ ಮೈಸೂರಿನ ಅಗರ್ವಾಲ್ ಸಮಾಜ.

ಮೈಸೂರು ಪರಿಸರದಲ್ಲಿ ಕೋವಿಡ್‌ನಿಂದ ಮೃತಪಟ್ಟ ಬಡವರ ಶವಸಂಸ್ಕಾರಕ್ಕಾಗಿ 1500 ಕ್ವಿಂಟಾಲ್ ಸೌದೆ ಪೂರೈಸಿದೆ. ನೈರ್ಮಲ್ಯ ನಿಟ್ಟಿಲ್ಲಿ ಸ್ಯಾನಿಟೈಜರ್, ಸೋಪ್ ಹಾಗೂ ಸುರಕ್ಷತೆಗಾಗಿ ಮಾಸ್ಕ್, ಥರ್ಮಾಮೀಟರ್ ಸೇರಿದಂತೆ ನಾನಾ ವಿಧದ ಔಷಧೀಯ ವಸ್ತುಗಳನ್ನೂ ಸಕಾಲಿಕವಾಗಿ ಜಿಲ್ಲಾಡಳಿತ ವರ್ಗಕ್ಕೆ ಪೂರೈಸಿದೆ.

ಸುಮಾರು 4,000 ಔಷಧಿ ಕಿಟ್‌ಗಳನ್ನು, ಆಕ್ಸಿಜನ್ ಆನ್ ವೀಲ್ ಯೋಜನೆ ಅಡಿಯಲ್ಲಿ ಸಂಪೂರ್ಣ ಆಮ್ಲಜನಕ, ಆಕ್ಸಿ ಮತ್ತು ಪ್ಲಸ್ ಮೀಟರ್ ಇತ್ಯಾದಿ ಸೌಕರ್ಯಗಳನ್ನು ಹೊಂದಿರುವ ಎರಡು ಬಸ್ಸುಗಳು ನೀಡಿ ಮೈಸೂರು ಜನತೆಯ ಗೌರವಕ್ಕೆ ಪಾತ್ರವಾಗಿದೆ. ಸರ್ಕಾರದ ಶಿಷ್ಟಾಚಾರದಂತೆ ಇವುಗಳನ್ನು ಸಂಬಂಧಿತ  ಜಿಲ್ಲಾಡಳಿತ ಅಧಿಕಾರಿಗಳಿಗೆ  ಪೂರೈಸಲಾಗಿದೆ.

ವಿನೂತನ “ಆಕ್ಸಿಜನ್ ಆನ್ ವ್ಹೀಲ್” ಯೋಜನೆಯಡಿ ಪ್ರಥಮ ಹಂತದಲ್ಲಿ ಎರಡು ಸುಸಜ್ಜಿತ ವಾಹನಗಳನ್ನು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ಶಿಲ್ಪಾ ನಾಗ್ ಐಎಎಸ್, ಡಾ. ಎಸ್.ಕೆ. ಮಿತ್ತಲ್ ನೇತೃತ್ವದ ಅಗರ್ವಾಲ್ ಸಮಾಜ, ಮೈಸೂರು ಇವರಿಂದ ಸ್ವೀಕರಿಸಿದರು.

ಈ ನಿಟ್ಟಿನಲ್ಲಿ ಸಹಕರಿಸಿ, ಬೆಂಬಲಿಸಿ, ಪ್ರೋತ್ಸಾಹಿಸಿ ಭಾಗಿಗಳಾದ ಮೈಸೂರು ಜನತೆಗೆ, ಆಡಳಿತ ವರ್ಗದವರಿಗೆ, ಸಹಾಯದ ಕೈ ನೀಡಿ ಪಾಲ್ಗೊಂಡ ಮೈಸೂರಿನ ಅಗರ್ವಾಲ್ ಸಮಾಜದ ಸದಸ್ಯರಿಗೆಲ್ಲಾ ಅಗರ್ವಾಲ್ ಸಮಾಜ, ಮೈಸೂರು ಇದರ ಅಧ್ಯಕ್ಷ ಡಾ. ಎಸ್.ಕೆ. ಮಿತ್ತಲ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

أحدث أقدم