ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಕೊರೋನಾ ಕಾಲದಲ್ಲಿ ರೈತರಿಗೆ ಅಂತರ್ಜಾಲ ಕಲಿಕೆ ತರಬೇತಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಕೊರೋನಾ ಸಂಕಷ್ಟವು ಹಲವರಿಗೆ ಹಲವಾರು ಜೇವನದ ಪಾಠವನ್ನು ಕಲಿಸುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಕಬ್ಬಿಣದ ಕಡಲೆಯೆಂದು ಭಾವಿಸಲಾಗಿದ್ದ ಅಂತರ್ಜಾಲ ಆಧಾರಿತ ಕಲಿಕೆಗಳು ರೈತರಿಂದ ದೂರವೇ ಉಳಿದಿದ್ದವು. ಆದರೆ ಕರೋನಾ ಯಾವಾಗ ಅಪ್ಪಳಿಸತೊಡಗಿತೋ ಆಗ ಎಲ್ಲಾ ಹೊರ ಮತ್ತು ಒಳ ಆವರಣ ತರಬೇತಿಗಳನ್ನು ಏರ್ಪಡಿಸಲು ಕಷ್ಟವಾಯಿತು. ಅನಿವಾರ್ಯವಾಗಿ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರಗಳು ಹಾಗು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳು ಹಾಗೂ ಹಲವಾರು ಕೃಷಿ ಅಭಿವೃದ್ದಿಯಲ್ಲಿ ತೊಡಗಿದ ಸರ್ಕಾರೇತರ ಸಂಸ್ಥೆಗಳು ಅನಿವಾರ್ಯವಾಗಿ ಅಂತರ್ಜಾಲ ಆಧಾರಿತ ತರಬೇತಿಗಳನ್ನು ಆಯೋಜಿಸಲು ಪ್ರಾರಂಭಿಸಿದವು.

ಮೊದಲಿಗೆ ಇಂತಹ ತರಬೇತಿಗಳಿಂದ ದೂರವೇ ಉಳಿದಿದ್ದ ಹಲವು ರೈತ ಬಾಂಧವರು ಕ್ರಮೇಣ ಆನ್ಲೈನ್ ತರಬೇತಿಗಳಲ್ಲಿ ಭಾಗವಹಿಸಲು ಆರಂಭಿಸಿದರು. ಪ್ರಾರಂಭದಲ್ಲಿ ನಿರ್ದಿಷ್ಟ ಪ್ರಗತಿಪರ ರೈತರಿಗೆ ಆನ್ಲೈನ್ ಬಳಕೆ ಬಗ್ಗೆ ಮಾಹಿತಿ ನೀಡಿ ನಂತರ ಅವರೊಂದಿಗೆ ಕೆಲವು ರೈತರು ಸೇರಿ ಭಾಗವಹಿಸಲು ವ್ಯವಸ್ಥೆ ಮಾಡಲಾಗುತ್ತಿತ್ತು. ಕ್ರಮೇಣ ಹಾಗೇ ಆಸಕ್ತಿಯಿಂದ ಸೇರಿದ ರೈತರು ಕ್ರಮೇಣ ತಾವೇ ವಿವಿಧ ಆಪ್ ಗಳನ್ನು ತಮ್ಮ ಮೊಬೈಲ್ ಗಳಲ್ಲಿ ಅಳವಡಿಸಿಕೊಂಡು ಬಳಸುವಷ್ಟು ಮೊಬೈಲ್ ಸಾಕ್ಷರತೆ ಬೆಳೆಸಿಕೊಂಡಿದ್ದಾರೆ.

ಅಂತರ್ಜಾಲ ತರಬೇತಿಗಳಿಂದ ಆಗುತ್ತಿರುವ ಪ್ರಯೋಜನಗಳು:

ಕೃಷಿ ವಿಸ್ತರಣಾ ಕೇಂದ್ರಗಳು ಆಯೋಜಿಸುತ್ತಿರುವ ತರಬೇತಿಗಳು ಸಕಾಲಿಕವಾಗಿದ್ದು ಹೆಚ್ಚು ಹೆಚ್ಚು ರೈತರನ್ನು ತಲುಪುತ್ತಿದೆ. ರೈತರಿಗೂ ಹಂಗಾಮಿನಲ್ಲಿ ವಿಪರೀತ ಕಾರ್ಯ ಒತ್ತಡ ಇದ್ದು ತರಬೇತಿ ಕೇಂದ್ರಗಳಿಗೆ ಬರಲು ಒಪ್ಪುತ್ತಿರಲಿಲ್ಲ. ಆದರೆ ಈಗ ಅವರು ಇರುವ ಸ್ಥಳದಲ್ಲಿಯೇ ಇದ್ದು ವಿಷಯ ಜ್ಞಾನ ಅರಿಯುವುದಕ್ಕೆ ಸಹಕಾರಿಯಾಗಿದೆ. ತರಬೇತಿ ಕಾರ್ಯಕ್ರಮಗಳಿಗೆ ಯಾರು ಬೇಕಾದರೂ ಭಾಗವಹಿಸಬಹುದಾಗಿದ್ದು ರಾಜ್ಯದೆಲ್ಲೆಡೆಯಿಂದ ಆಸಕ್ತರು ಭಾಗವಹಿಸುತ್ತಾರೆ.

ಇದರಿಂದಾಗಿ ರೈತರ ನಡುವೆ ಬಾಂಧವ್ಯ ಏರ್ಪಟ್ಟು ಅನುಭವ ಹಂಚಿಕೆಗೆ ವೇದಿಕೆ ಏರ್ಪಡುತ್ತಿದೆ. ಹಲವಾರು ತಜ್ಞರನ್ನು ಸಾಮಾನ್ಯವಾಗಿ ಭೇಟಿಯಾಗಲು ಕಷ್ಟವಾಗುವುದರಿಂದ ಇಂತಹ ಆನ್ಲೈನ್ ವೇದಿಕೆಗಳು ತಜ್ಞರನ್ನು ಹಾಗೂ ರೈತರನ್ನು ಹತ್ತಿರ ತರಲು ಮತ್ತು ಉತ್ತಮ ಕಲಿಕೆಗೆ ಅವಕಾಶ ಕಲ್ಪಿಸಿವೆ. ರೈತರು ತಮಗೆ ಬೇಕಾದ ಅಥವ ಅವಶ್ಯಕವಿರುವ ವಿಷಯಗಳನ್ನು ಆರಿಸಿಕೊಂಡು ಅಂತಹ ವಿಷಯಗಳಿಗೆ ಭಾಗವಹಿಸುವುದು ನೋಡಿ ಅದಕ್ಕೆ ತಕ್ಕಂತೆ ತರಬೇತಿ ವಿಷಯಗಳನ್ನು ಆಯೋಜಿಸುವುದು ಸುಲಭವಾಗುತ್ತಿದೆ.

ಉದಾ: ಮೇ 20ರಂದು ಜರುಗಿದ ವಿಶ್ವ ಜೇನುಹುಳು ದಿನಾಚರಣೆ ಸಂದರ್ಭದಲ್ಲಿ ದೇಶದಾದ್ಯಂತ ಸುಮಾರು 730 ಕೃಷಿ ವಿಜ್ಞಾನ ಕೇಂದ್ರಗಳು ಹಾಗು ಅಸಂಖ್ಯ ವಿಸ್ತರಣಾ ಕೇಂದ್ರಗಳು ಹಾಗೂ ಅನೇಕ ಸಂಘ ಸಂಶ್ಥೆಗಳು ಜೇನು ಕೃಷಿ ಕುರಿತು ಅಂತರ್ಜಾಲ ತರಬೇತಿ ಏರ್ಪಡಿಸಿದ್ದವು. ಕನಿಷ್ಠ ಒಂದು ತರಬೇತಿಯಲ್ಲಿ ಅಂದಾಜು 50 ಜನ ಭಾಗವಹಿಸಿದ್ದಾರೆಂದು ಕೊಂಡರೂ ಒಟ್ಟು ಆಸಕ್ತರ ಸಂಖ್ಯೆ 50000 ಆಗುತ್ತದೆ. ಇದರಲ್ಲಿ ಶೇ.10ರಷ್ಟು ರೈತರು ತರಬೇತಿ ಪ್ರಯೋಜನ ಅಳವಡಿಸಿಕೊಂಡರೂ ಒಂದೇ ದಿನದಲ್ಲಿ ಹೆಚ್ಚು ಖರ್ಚಿಲ್ಲದೇ ಆಗುವ ಪರಿಣಾಮಕ್ಕೆ ಬೆಲೆ ಕಟ್ಟಲೂ ಸಾಧ್ಯವಿಲ್ಲ. 

ಅಂತರ್ಜಾಲ ತರಬೇತಿಗಳ ಅನಾನುಕೂಲಗಳು ಮತ್ತು ಕಷ್ಟಗಳು:

ರೈತರು ಎಲ್ಲಿಯೋ ಕುಳಿತು ಕೇಳುವುದರಿಂದ ಅವರ ಮನಸ್ಸು ಚಂಚಲತೆಗೆ ಒಳಗಾಗಬಹುದು. ತರಬೇತಿ ಕೇಂದ್ರಗಳಲ್ಲಿ ದೃಶ್ಯ ಶ್ರವಣ ಮಾದ್ಯಮಗಳು ಹಾಗು ಪ್ರಾಯೋಗಿಕ ಕಲಿಕೆಗೆ ಹೆಚ್ಚು ಅವಕಾಶವಿರುತ್ತದೆ. ಗ್ರಾಮೀಣ ಭಾಗದಲ್ಲಿ ಅಂತರ್ಜಾಲ ಸಂಪರ್ಕ ದುರ್ಬಲವಿರುತ್ತದೆ.

ಪರಿಹಾರ:

ರೈತರು ತಾವು ಆನ್ಲೈನ್ ಅಲ್ಲಿ ಕಲಿತ ವಿಷಯಗಳನ್ನು ಮನನ ಮಾಡಿಕೊಂಡು ಬಿಡುವಿನ ವೇಳೆಯಲ್ಲಿ ಸಮೀಪದ ಕೃಷಿ ವಿಜ್ಞಾನ ಕೇಂದ್ರ ಅಥವ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಪ್ರಾಯೋಗಿಕ ಅನುಭವ ಪಡೆಯಬಹುದು. ಇತ್ತೀಚೆಗೆ ಹಲವಾರು ತಂತ್ರಜ್ಞಾನಗಳ ವಿಡಿಯೋಗಳು ಸಹ ಆಯಾ ಸಂಸ್ಥೆಯ ವೆಬ್ ಸೈಟ್‌ಗಳಲ್ಲಿ ಲಭ್ಯವಿರುತ್ತದೆ ಮತ್ತು ಯೂ ಟ್ಯೂಬ್ ಮೂಲಕ ವೀಕ್ಷಿಸಿ ಅರಿಯಬಹುದು.

- ಡಾ. ಪಿ.ಆರ್. ಬದರಿಪ್ರಸಾದ್

ಸಹಾಯಕ ಪ್ರಾಧ್ಯಾಪಕರು

ಕೃಷಿ ಮಹಾವಿದ್ಯಾಲಯ

ಗಂಗಾವತಿ

*****

Tags: Online learning, Farmers, Covid 19, ಅಂತರ್ಜಾಲ ಕಲಿಕೆ, ರೈತರು

Post a Comment

ನವೀನ ಹಳೆಯದು