ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಇಂದು ಅಂತಾರಾಷ್ಟ್ರೀಯ ಚಹಾ ದಿನ: ಚಹಾದ ಕಥೆ ಕೇಳಿ, ಹೊಸ ಬಗೆಯ ಚಹಾ ಮಾಡಿ ಸವಿಯಿರಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 


ಅಪ್ಪ ಬೆಳಗಾಯಿತು ಮೊದಲು ಚಹಾ ಕುಡಿದು ಮುಂದಿನ ಕೆಲಸ ಮಾಡೋಣ... ಪೆಟ್ರೋಲ್ ಹಾಕಿದರೆ ಮುಂದಿನ ಕೆಲಸ ಎನ್ನುವ ಮಟ್ಟಿಗೆ ಚಹಾದ ಜನ ಪ್ರಿಯತೆ ಬೆಳೆದಿದೆ. 

ವಿಶ್ವದ ಅತ್ಯಂತ ಜನಪ್ರಿಯ ಪಾನೀಯ, ಇದು ಬಿಸಿ ಪಾನೀಯವಾಗಿಯೇ ಹೆಚ್ಚು ಪ್ರಸಿದ್ಧ.

ನೀರಿನ ನಂತರ ವಿಶ್ವಾದ್ಯಂತ ಉಪಯೋಗಿಸುವ ಪಾನೀಯ ಚಹಾ. ಕ್ಯಮೆಲಿಯಾ ಸಿನೆನ್ಸಿಸ್ ವರ್, ಅಸ್ಸಾಮಿಕಾದಿಂದ ಚಹಾ ತಯಾರಿಸಲಾಗುತ್ತದೆ.

ನಮ್ಮ ಭಾರತ ಇರುವುದು ಏಷ್ಯಾ ಖಂಡದಲ್ಲಿ. ಸಾಮಾನ್ಯವಾಗಿ ಇಲ್ಲಿ ಎಲ್ಲದಕ್ಕೂ ಕಥೆಗಳು ಇರುವುದು ಸಹಜ, ಅದರಲ್ಲೂ ನಮ್ಮ ಭಾರತ ಸಂಸ್ಕೃತಿಗಳು ಬೀಡು ಕಥೆಗಳ ನಾಡು. 

ಬಂಡೆಗಲ್ಲು ಉರುಳುವುದನ್ನು ನೋಡಿ ಆದಿ ಮಾನವರು ಗಾಲಿಗಳನ್ನು ಕಂಡು ಹಿಡಿದರು ಹೇಗೆ ಮುಂದೆ ಸಾಕಷ್ಟು ಆವಿಷ್ಕಾರಗಳು ಆದವು ಅದರಂತೆ ಚಹಾಕ್ಕೂ ಒಂದು ದಂತ ಕಥೆ ಇದೆ.

ಶೆನ್ನಾಂಗ್ ಎನ್ನುವ ಚೈನಾದ ರಾಜ, ಅವನೊಬ್ಬ ಕೃಷಿ ಸಂಶೋಧಕ ಮತ್ತು ವೈದ್ಯ ಕೂಡಾ. ಒಂದು ಬಾರಿ ಮನೆಯ ಹೊರಭಾಗದಲ್ಲಿ ಕುಡಿಯುವ ನೀರನ್ನ ಕುದಿಸುತ್ತಿದ್ದಾಗ ಅದರಲ್ಲಿ ಎರಡು ಎಲೆಗಳು ಬಿದ್ದವು. ಕುದಿಯತ್ತಿದ್ದ ನೀರಿನ ಬಣ್ಣ ಕಂದು ಬಣ್ಣಕ್ಕೆ ತಿರುಗತೊಡಗಿತು.ಕುತೂಹಲದಿಂದ ಆ ನೀರನ್ನ ಸ್ವಲ್ಪ ಕುಡಿಯುತ್ತಾನೆ. ಅದರಿಂದ ಅವನಲ್ಲಿ ಚೈತನ್ಯ ಹೆಚ್ಚುತ್ತದೆ. ಇದನ್ನು ಅಭಿವೃದ್ಧಿ ಪಡಿಸುತ್ತಾನೆ. ಟೀ ಸೊಪ್ಪಿನ ಅಪ್ರತಿಮ ಶಕ್ತಿಯನ್ನ ಮನಗಂಡ ಶೆನ್ನಾಂಗ್ ತಾನು ಬೇರೆ ಬೇರೆ ಔಷಧೀಯ ಸಸ್ಯಗಳನ್ನ ಪರೀಕ್ಷಿಸುವಾಗ ಅವುಗಳಲ್ಲಿ ಕೆಲವು ವಿಷಯುಕ್ತವಾಗಿರುತ್ತವೆ. ಅಂತಹ ಸಮಯದಲ್ಲಿ ಟೀ ಸೊಪ್ಪನ್ನ ತಿಂದು ವಿಷದಿಂದಾಗುವ ಅಪಾಯವನ್ನ ತಪ್ಪಿಸಿಕೊಳ್ಳುತ್ತಿದ್ದೆನೆಂದು ಹೇಳಿಕೊಂಡಿದ್ದಾನೆ.

ಬೌದ್ಧ ಧರ್ಮದ ಗುರುಗಳು ಇದನ್ನು ಹೆಚ್ಚು ಉಪಯೋಗಿಸುತ್ತಿದ್ದರು, ಇದು ಅವರಿಗೆ ದೀರ್ಘಕಾಲದವರೆಗೆ ಧ್ಯಾನ ಮಾಡಲು ನಿದ್ದೆ ಬರದಂತೆ ತಡೆಯುತ್ತಿತ್ತು ಅಲ್ಲದೇ ಮಾನಸಿಕ ಅಹಲ್ಲಾದತೆ ಹೆಚ್ಚಿಸುವ ಚೈತನ್ಯವನ್ನು ತುಂಬುವಂತಹ ಜನಪ್ರಿಯ ಪಾನೀಯವಾಯಿತು. 

ವಿಶ್ವದಲ್ಲಿ ಚಹಾದ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನ ಪಡೆದಿದೆ, ಆದರೂ ನಮ್ಮ ದೇಶದಲ್ಲಿ ಉತ್ಪಾದನೆ ಮಾಡುವ ಚಹದಲ್ಲಿ ಶೇಕಡ 80ರಷ್ಟು ನಮ್ಮ ದೇಶದಲ್ಲೇ ಖರ್ಚಾಗುತ್ತದೆ. 

ನಮ್ಮ ದೇಶದಲ್ಲಿ ಬೆಳೆಯುವ ಅಸ್ಸಾಂ ಚಹಾ, ದಾರ್ಜೆಲ್ಲಿಂಗ್ ಚಹಾ, ನೀಲಗಿರಿ ಬೆಟ್ಟದಲ್ಲಿ ಅತಿ ಹೆಚ್ಚು ಚಹಾದ ಉತ್ಪಾದನೆ ಆಗುತ್ತದೆ. ಈ ಚಹದಲ್ಲಿ ಹಲವಾರು ರೀತಿಯಲ್ಲಿ ಮಾಡಬಹುದು, ಪ್ರಾಂತಕ್ಕೆ ತಕ್ಕಂತೆ ಅಲ್ಲೊಂದು ಹೊಸ ಬಗೆಯ ಚಹಾ ರುಚಿ ಏರ್ಪಟ್ಟಿತ್ತು. 

ಅದರಲ್ಲಿ ಹಾಲಿನ ಜೊತೆಗೆ ಇರುವ ಚಹಾ ಅತ್ಯಂತ ಜನಪ್ರಿಯ.

ಹೇಗೆ ಶತಮಾನಗಳು ಕಳೆದಂತೆ ಹೊಸ ಹೊಸ ಚಹಾದ ರುಚಿಗಳು ಹುಟ್ಟಿದವು. 

ಬೇರೆ ಬೇರೆ ದೇಶಗಳು ಬೇರೆ ದಿನಗಳಲ್ಲಿ ಚಹಾ ದಿನವನ್ನು ಮಾಡುತಿದ್ದರು, ಎಲ್ಲಡೆ ಒಂದೇ ಸಾರಿ ಈ ದಿವಸ ಆಚರಿಸಿ ಚಹಾದ ಬೆಳೆಗಾರರಿಗೆ ಬೆಂಬಲ ನೀಡಲು ಈ ಅಂತರಾಷ್ಟ್ರೀಯ ಚಹಾದ ದಿನವನ್ನು ಮಾಡಲಾಯಿತು. 

ಇದೀಗ ಕರೊನಾ ಸಮಯದಲ್ಲಿ ಶುಂಠಿ ಚಹಾ, ಮಸಾಲಾ ಚಹಾ ಸೇವಿಸಿದರೆ ಗಂಟಲು ಮೂಗಿಗೆ ಹಾಯಾಗಿ ಇರುತ್ತದೆ. 

ಶುಂಠಿ ಚಹಾ 

2 ಕಪ್ ಹಾಲು

1/2 ಕಪ್ ನೀರು

ಟೀ ಪುಡಿ-2ಟೀ ಚಮಚ

1 ಇಂಚು ಶುಂಠಿ ಇಲ್ಲವೇ ಹಸಿ ಶುಂಠಿ

ಸಕ್ಕರೆ ಅಥವಾ ಬೆಲ್ಲ ಸ್ವಾದಾನುಸಾರ 

ಒಂದು ಪಾತ್ರೆಯಲ್ಲಿ ನೀರು ಮತ್ತು ಶುಂಠಿಯನ್ನು ಹಾಕಿ 2-3 ನಿಮಿಷ ಕುದಿಸಿ ನಂತರ ಹಾಲು ಟೀ ಪುಡಿ ಹಾಕಿ ಚೆನ್ನಾಗಿ ಕುದಿಸಿ ಕೊನೆಯಲ್ಲಿ ಸಕ್ಕರೆ ಇಲ್ಲವೇ ಬೆಲ್ಲ ಹಾಕಿ ಕುದಿಸಿ, ಬಿಸಿ ಬಿಸಿಯಾಗಿ ಕುಡಿಯಿರಿ. 


ಖಡಕ್ ಮಸಾಲಾ ಚಾಯ್ 

ಹಾಲು-2 ಕಪ್

ನೀರು -1/2 ಕಪ್

ಚಹಾ ಪುಡಿ-2 ಚಮಚ

ಸಕ್ಕರೆ ಅಥವಾ ಬೆಲ್ಲ ಸ್ವಾದಾನುಸಾರ

ಲವಂಗ-1

ಶುಂಠಿ-1/2 ಇಂಚ್

ಚಕ್ಕಿ-1/2ಇಂಚ್

ಏಲಕ್ಕಿ-2

ಈ ಎಲ್ಲಾ ಮಸಾಲೆಗಳನ್ನು ಪುಡಿಮಾಡಿಯಾದರು ಹಾಕಬಹುದು ಎಲ್ಲವೇ ಹಾಗೆಯೇ ಹಾಕಿ ಕುಡಿಸಬಹುದು.

ನೀರು ಹಾಲು ಮಸಾಲೆ ಪುಡಿ, ಚಹಾ ಪುಡಿ ಬೆರೆಸಿ ಚೆನ್ನಾಗಿ ಕುದಿಸಿ 5 ನಿಮಿಷದ ನಂತರ ಸಕ್ಕರೆ ಅಥವಾ ಬೆಲ್ಲ ಹಾಕಿ ಕುದಿಸಿ ಬಿಸಿ ಬಿಸಿಯಾಗಿ ಕುಡಿಯಿರಿ.  


ಅಸ್ಸಾಂ ಗುರ್ ಗುರ್ ಟೀ 

ಟೀ ಎಲೆಗಳು-1 ಚಮಚ

ಬೆಣ್ಣೆ-1ಟೇಬಲ್ ಚಮಚ

ನೀರು -1 ಕಪ್

ಉಪ್ಪು-1/4 ಟೀ ಚಮಚ

ಹಾಲು-1 ಕಪ್ 

ಒಂದು ಪಾತ್ರೆಯಲ್ಲಿ ನೀರು ಕುಡಿಯಲು ಇಟ್ಟು ಅದರಲ್ಲಿ ಚಹಾದ ಎಲೆಗಳು ಹಾಕಿ ಒಂದು ಚಿಟಿಕೆ ಅಡುಗೆ ಸೋಡಾ ಪುಡಿ ಹಾಕಿ ಚೆನ್ನಾಗಿ ಕುದಿಸಿ.

ಇನ್ನೊಂದು ಪಾತ್ರೆಯಲ್ಲಿ ಬೆಣ್ಣೆ ಹಾಕಿ ಕರಗಿದ ತಕ್ಷಣ ಅದರಲ್ಲಿ ಹಾಲು ಹಾಕಿ ಒಂದು ಕ್ಷಣ ಕುದಿಸಿ. ಅದರಲ್ಲಿ ಇನ್ನೊಂದು ಪಾತ್ರೆಯಲ್ಲಿ ಮಾಡಿದ ಮಿಶ್ರಣ ಹಾಕಿ ಕಲಿಸಿ ನಂತರ ಮಣ್ಣಿನ ಚಿಕ್ಕ ಮಡಿಕೆಯಲ್ಲಿ ಸರ್ವ್ ಮಾಡಿ. 

  • ಪ್ರತಿಯೊಬ್ಬರು ಒಂದು ವಿಷಯ ತಿಳಿದು ಕೊಳ್ಳಿ ಯಾವಾಗಲೂ ಚಹಾ ಅಥವಾ ಕಾಫಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ.
  • ಜೇನುತುಪ್ಪವನ್ನು ಹಲವಾರು ಸಕ್ಕರೆಬದಲಾಗಿ ಉಪಯೋಗಿಸುತ್ತಾರೆ ಆದರೆ ಜೇನನ್ನು ಯಾವತ್ತೂ ಬಿಸಿಯಾಗಿರುವುದರಲ್ಲಿ ಬೆರೆಸಬಾರದು, ಇದರಿಂದ ಮಧುರ ತನ್ನ ಎಲ್ಲಾ ಅಂಶಗಳನ್ನು ಕಳೆದುಕೊಳ್ಳುತ್ತದೆ.
  • ಆದಷ್ಟು ಸಕ್ಕರೆ ಕಡಿಮೆ ಬಳಸಿ.


- ಹೇಮಾ ವೆಂಕಟೇಶ್ ಹಂದ್ರಾಳ, ಬಾಗಲಕೋಟೆ


Tags:

International Tea Day, Tea, ಚಹಾ, ಅಂತಾರಾಷ್ಟ್ರೀಯ ಚಹಾ ದಿನ


Post a Comment

ನವೀನ ಹಳೆಯದು