ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಪ್ರಕೃತಿಯ ಪಾಠವನ್ನು ಮನುಷ್ಯ ಕಲಿಯುವುದು ಯಾವಾಗ...? ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಮನುಷ್ಯ ಜೀವನದಲ್ಲಿ ಅನೇಕ ರೀತಿಯ ಆಸೆ ಆಕಾಂಕ್ಷೆಗಳನ್ನು ಇಟ್ಟುಕೊಂಡು ಅದರ ಈಡೇರಿಕೆಗಾಗಿಯೇ ಹೋರಾಡುತ್ತಿರುತ್ತಾನೆ. ಬೇಕು ಬೇಡಗಳ ಜಂಜಾಟದಲ್ಲಿ ತನ್ನ ಜೀವನವನ್ನು ಅದರಲ್ಲಿಯೇ ಕಳೆದುಕೊಳ್ಳುತ್ತಾನೆ. ಬೇಕುಗಳಿಗೆ ಬ್ರೇಕು ಬೀಳಲಿ ಎಂದು "ಕೊರೋನಾ" ದ ಆಗಮನವಾಯಿತು ನೋಡಿ. 

ಸಾಲು ಸಾಲು ಹೆಣಗಳ ರಾಶಿ, ತನ್ನವರ ಕಳೆದುಕೊಂಡು ದುಃಖಿಸುತ್ತಿರುವವರ ದೃಶ್ಯ ನೋಡಿ ನಾವು ಮನಸ್ಸಲ್ಲೇ ಅಂದುಕೊಂಡೆವು ಎಲ್ಲಿದೆ ನೋಡಿ ಹಣ ಸಂಪತ್ತಿನ ಗಳಿಕೆ, ಜಾತಿ ಧರ್ಮದ ಅಮಲು. ಸತ್ತಾಗ ಬರಿಯ ಹೆಣವಷ್ಟೇ ನಾವುಗಳು. ಜೀವನದುದ್ದಕ್ಕೂ ನಮ್ಮೊಂದಿಗೆ ಬರುವುದು ಸಂಪಾದಿಸಿದ ಪ್ರೀತಿ, ಮಾನವೀಯ ಸಂಬಂಧಗಳಷ್ಟೆ.  

ಆದರೆ ನಿನ್ನೆ ಮೊನ್ನೆ ತಾನೇ ಟಿವಿ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ತಂದೆಯ "ಅಪ್ಪಟ ಕುವರ" ಪ್ರತ್ಯಕ್ಷವಾಗಿಬಿಟ್ಟ. ಕೊರೋನಾದಿಂದ ಮೃತಪಟ್ಟ ತನ್ನ ಜನ್ಮದಾತನ ಹೆಣ ಬೇಡ, ಅವರ ಹಣ ಬೇಕು ಎಂದ. ಎಂತಹ ನೀಚ ಮನಸ್ಥಿತಿ, ಮನುಷ್ಯ ನ ದುರಾಸೆಯ ಪ್ರಮಾಣ ಯಾವ ಹಂತಕ್ಕೆ ತಲುಪಿತು ನೋಡಿ. ಹಾಗಾದರೆ ನಾವು ಕೊರೋನಾದಿಂದಾಗಿ ಕಲಿತದ್ದು ಏನು? ಪ್ರಕೃತಿಗೆ ತಲೆ ಬಾಗಬೇಕಾದವರು ಮತ್ತೆ ಮತ್ತೆ ಅದೇ ತಪ್ಪು ಮಾಡುತ್ತಿದ್ದೇವಲ್ಲ. ಸಂಬಂಧಗಳ ಬಾಂಧವ್ಯಕ್ಕಿಂತ ಹಣಕ್ಕೆ ಗಾತ್ರ ಹೆಚ್ಚಾಯಿತೇ...?

ಇದೇ ರೀತಿ ಹಣ ಆಸ್ತಿನ ವ್ಯಾಮೊಇಹದಲ್ಲಿ ಸಿಲುಕಿದ ಮನುಜ ಎಚ್ಚೆತ್ತುಕೊಳ್ಳುವುದು ಹೆಣವಾದಾಗಲೇನೋ..? ಪ್ರಕೃತಿಯಿಂದ ಪಾಠ ಕಲಿಯುವುದು ಯಾವಾಗ... ಪಾಡು ನರಕದ ಬೀಡಾದಾಗಲೇ...?

-ಅರ್ಪಿತಾ ಕುಂದರ್

Post a Comment

أحدث أقدم