ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಎಸ್‌ಪಿಬಿ ಸ್ಮರಣೆ- ಅಮರ ಕೋಗಿಲೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಇನ್ನಿನಿಸು ನೀ ಬದುಕ ಬೇಕಿತ್ತು  

ಸಿರಿಕಂಠ ಕೋಗಿಲೆಯೆ | 

ಕಾಯವಳಿದರು ನೀನು ತೊಲಗದಿರು 

ನನ್ನೆದೆಯ ಗುಡಿಯಿಂದ ||  


ನಿನ್ನ ಹಾಡನು ಕೇಳಿ ಮರೆತು ಬನ್ನವನು 

ಹಾಯಾಗಿದ್ದೆ ನಾನಿಲ್ಲಿ ವರೆಗೆ | 

ಸಗ್ಗದಲಿಹ ಪರಮಾತ್ಮ ಕರೆದಾಗ  ನಿನ್ನನ್ನು  

ಕುಗ್ಗದೆಯೆ ಹೋದೆ ನೀನಲ್ಲಿಗೆ || 


ತಬ್ಬಿಕೊಂಡಿದೆ ನಿನ್ನ ಶಾರೀರ ಗಾಳಿಯನು 

ಸದ್ದುಗದ್ದಲವಿರದ ಮೌನದಲಿ |  

ಸುಸ್ಪಷ್ಟ ಕಂಠದಲಿ ಅಸ್ಪಷ್ಟವಿನಿತಿರದು  

ಕಷ್ಟವೆಲ್ಲವ ಮರೆಸುತಿಹುದು || 


ಮೌನವಾಗಿಹೆ ನೀನಿಂದೇಕೆ ಗಾಯಕನೆ  

ತಂತಿ ಕಡಿಯಲು ಹಾಡು ನಿಂತೀತೆ | 

ಸದ್ದಡಗಿ ನಿದ್ರಿಸಲು ನಿನಗೆ ಬಿಡುವಿಹುದೆ 

ಮೋನದಲು ಧ್ಯಾನ ತುಂಬಿರಲು ||   


ಸಲಿಸುವೆನು ನಿನಗಿಂದು ನಾನಶ್ರು ತರ್ಪಣವ   

ಸ್ಮರಿಸುವೆನು ಮನದೊಳಗೆ ನಿನ್ನಾತ್ಮವ | 

ನಿನ್ನ ಗಾಯನಕಿರದು ಸರಿಸಾಟಿ ಬೇರೊಂದು  

ನಮಿಸುವೆನು ನಿನಗಿಂದು ನಾನು ತಲೆವಾಗಿ|| 


ಜನಿಸಿ ಬರಬೇಕು ನೀನಿನ್ನೊಮ್ಮೆ ನಮ್ಮ ಬಳಿ  

ಕನಸಿನಲು ನಿನ್ನ ಸವಿಗಾನ  ಕೇಳಿಸುತ | 

ನಿನಗೆ ನಮಿಸುತ ಧನ್ಯರಾಗಿಹೆವು ನಾವೆಲ್ಲ 

ಇನ್ನೊಮ್ಮೆ ನೀನವತರಿಸು ನಮ್ಮ ನಾಡಿನಲಿ|| 


(ನಮ್ಮನ್ನಗಲಿದ ಗಾನ ಗಂಧರ್ವ ಶ್ರೀ ಎಸ್ಪೀಬಿಯವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರಿ ರಚಿಸಿದ ಕವನ ನಮನ)

ವಿ.ಬಿ.ಕುಳಮರ್ವ, ಕುಂಬ್ಳೆ

Post a Comment

ನವೀನ ಹಳೆಯದು