ಮಂಗಳೂರು: ದೇಶದಲ್ಲಿ ಕೋವಿಡ್ -19ರ ಅಲೆ ತಾಂಡವವಾಡುವ ಸಂದರ್ಭದಲ್ಲಿ ಮಂಗಳೂರಿನಲ್ಲೊಬ್ಬ ಯುವ ನಾಯಕ ಮತ್ತು ಉದ್ಯಮಿ ಸಂಕಷ್ಟದಲ್ಲಿರುವ ಸಹಸ್ರಾರು ಮಂದಿಗೆ ತಮ್ಮ ಕೈಲಾಗುವಷ್ಟು ಸಹಾಯ ಹಸ್ತ ನೀಡುತ್ತಾ ಬಡವರ ಪಾಲಿಗೆ ಕಣ್ಮಣಿಯಾಗುತ್ತ "ಮಂಗಳೂರಿನಲ್ಲೊಬ್ಬ ಸೋನು ಸೂದ್" ಆಗುತ್ತಿದ್ದಾರೆ. ಅವರೇ ಪನಾಮ ನೇಚರ್ ಫ್ರೆಶ್ ಸಂಸ್ಥೆಯ ಅಧ್ಯಕ್ಷರಾಗಿರುವ ವಿವೇಕ್ ರಾಜ್ ಪೂಜಾರಿಯವರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿವೇಕ್ ರಾಜ್ ಪೂಜಾರಿಯವರು, ಈ ಬಾರಿ ಇಷ್ಟರ ತನಕ 16000 ಮಂದಿಗೆ ಊಟ, ಸುಮಾರು 4350 ಕುಟುಂಬದವರಿಗೆ ಮತ್ತು ದಿನಗೂಲಿ ನೌಕರರಿಗೆ ಕಿಟ್ಗಳನ್ನೂ ನೀಡಿದ್ದು, ಜೊತೆಗೆ ಹಲವು ಬಡ ಕುಟುಂಬಗಳ ಆಸ್ಪತ್ರೆ ಚಿಕಿತ್ಸೆಯ ವೆಚ್ಚವನ್ನು ಸಹ ಪನಾಮ ಕಂಪೆನಿ ವತಿಯಿಂದ ಭರಿಸಿದ್ದೇನೆ. ಪ್ರಸಕ್ತ ತಮ್ಮ ಕಡೆಯಿಂದ ನೀಡುವ ಕಿಟ್ ಒಂದು ಕುಟುಂಬಕ್ಕೆ 15 ದಿನಗಳ ಕಾಲ ಉಪಯೋಗಕ್ಕೆ ಬರಲಿದೆ. ಇದು ಹಲವು ಕುಟುಂಬಗಳಿಗೆ ಸಹಾಯವಾಗಲಿದೆ ಎಂದರು.
ಕಳೆದ ಲಾಕ್ಡೌನ್ ಸಂದರ್ಭ ಸುಮಾರು 14000 ಮಂದಿಗೆ ಬೀದಿ ಬದಿ ಊಟ, 2000 ಮಂದಿಗೆ ಕಿಟ್, 12 ಮಂದಿಗೆ ಮಾರಲು ತಳ್ಳುಗಾಡಿಯಲ್ಲಿ ಗಾಡಿ ತುಂಬಾ ತರಕಾರಿ, ಮತ್ತು 50 ದೊಡ್ಡ ದೊಡ್ಡ ಕೊಡೆಗಳನ್ನು ಉಚಿತವಾಗಿ ಸಹ ನೀಡಿದ್ದಾರೆ. ಜೊತೆ ತಮ್ಮ ಊರಿಗೆ ಹೋಗಲು ಸಂಕಷ್ಟದಲ್ಲಿದ್ದಾಗ ಆರ್ಥಿಕ ಸಹಾಯ ಮಾಡಿದ್ದಾರೆ.
ಇದೇ ಸಂದರ್ಭ ಸರ್ಕಾರ ಈ ಬಾರಿಯ ಲಾಕ್ಡೌನ್ ಅವಧಿಯಲ್ಲಿ ಮಾಡಿದ ವ್ಯವಸ್ಥೆಗಳು ಸಂಪೂರ್ಣ ವಿಫಲವಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ 10ರ ತನಕ ಲಾಕ್ ಡೌನ್ ಓಪನ್ ಮಾಡಿದ್ದಾರೆ. ಜೊತೆಗೆ ವಸ್ತುಗಳನ್ನು ಖರೀದಿಸಲು ವಾಹನಗಳನ್ನು ಉಪಯೋಗಿಸುವಂತಿಲ್ಲ. ಜನರು 3-4 ಕಿಮೀ ನಡೆದುಕೊಂಡು ಬಂದು ವಾಪಾಸ್ ಹೋಗುವಾಗ 12 ಗಂಟೆ ಆಗುತ್ತೆ. ಕೆಲಸಗಾರರಿಗೆ ಸಂಚಾರಕ್ಕೆ ಬೇರೆ ವ್ಯವಸ್ಥೆ ಇಲ್ಲ. ಜೊತೆಗೆ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದ್ದರಿಂದ ಜನರ ಸಮಸ್ಯೆಗಳು ಇನ್ನಷ್ಟು ಬಿಗಡಾಯಿಸಿವೆ ಎಂದರು.
ಈ ಬಾರಿ ಸರಕಾರ ಸಾರ್ವಜನಿಕರನ್ನು ಕಳೆದ ಬಾರಿಗಿಂತ ಜಾಸ್ತಿ ನೆಗ್ಲೆಕ್ಟ್ ಮಾಡಿದೆ. ಸರಕಾರ ಬ್ಯಾಂಕ್ಗಳನ್ನೂ ಮಧ್ಯಾಹ್ನ 2 ಗಂಟೆಯ ತನಕ ಓಪನ್ ಇಟ್ಟಿದ್ದಾರೆ. ಆದರೆ ಸಾರ್ವಜನಿಕರು 10 ಗಂಟೆ ಮೇಲೆ ರಸ್ತೆಯಲ್ಲಿ ತಿರುಗುವಂತಿಲ್ಲ. ಆದರೆ ಇದರಿಂದ ಸಾರ್ವಜನಿಕರಿಗೆ ಉಪಯೋಗಕ್ಕಿಂತ ತೊಂದರೆ ಆಗಿದೆ. ಸರ್ಕಾರಕ್ಕೆ ತೆರಿಗೆ ಕಟ್ಟುವ ಉದ್ದಿಮೆದಾರರಿಗೂ ಇದರಿಂದ ಯಾವುದೇ ಉಪಯೋಗವಿಲ್ಲ ಎಂದು ಸರ್ಕಾರದ ಧೋರಣೆ ಬಗ್ಗೆ ಖೇದ ವ್ಯಕ್ತ ಪಡಿಸಿದರು.
ಮುಂದೆ ಮಾತನಾಡುತ್ತ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ರೈತರು ತಾವು ಬೆಳೆದ ತರಕಾರಿ, ಹಣ್ಣುಗಳನ್ನು ಖರೀದಿಸಲು ಯಾರು ಮುಂದೆ ಬರದೇ ಇರುವುದರಿಂದ ತಮ್ಮ ಬೆಳೆಗಳನ್ನು ಬೀದಿಗೆಸುರಿಯುವುದನ್ನು ನೋಡಿದ್ದೇನೆ. ಇನ್ನು ಮುಂದಕ್ಕೆ ರೈತರು ತಾವು ಬೆಳೆದ ತರಕಾರಿ, ಹಣ್ಣುಗಳನ್ನು ನಮ್ಮ ಸಂಸ್ಥೆಯ ಸಿಬ್ಬಂದಿಗಳಿಗೆ, ಅವರ ಸ್ಥಳಗಳಿಗೆ ಫಾರ್ಮ್ಗಳಿಗೆ ಬಂದು ನಮ್ಮ ಪನಾಮ ಕಂಪೆನಿ ಖರೀದಿ ಮಾಡಲಿದೆ ಎಂದರು.
ಮುಂದೆ ಜನಜೀವನ ಸರಿಯಾಗಲು ಇನ್ನೂ ಬಹಳ ಸಮಯ ಹಿಡಿಯಲಿದೆ. ಹೀಗಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಲು ಮುಂಜಾಗ್ರತಾ ಕ್ರಮವಾಗಿ ರೂ 50 ಲಕ್ಷ ವನ್ನು ಇಟ್ಟಿದ್ದೇನೆ ಎಂದರು. ಜೊತೆಗೆ ರೈತರಿಗೆ ಸಹಾಯ ವಾಗುವ ನಿಟ್ಟಿನಲ್ಲಿ ಸುಮಾರು 75 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿಕರು ಬೆಳೆದ ಉತ್ಪನಗಳನ್ನು ಖರೀದಿಸುವ ಯೋಜನೆಯನ್ನು ಕೈಗೊಂಡಿದ್ದೀನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿವೇಕ್ ರಾಜ್ ಪನಾಮ ಸಿಇಓ, ರಜಾಕ್ ಉಪಸ್ಥಿತರಿದ್ದರು.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق