ಮಂಗಳೂರು: ಕೊಣಾಜೆ ಪೊಲೀಸರು ಮತ್ತು ನಗರ ಅಪರಾಧ ಶಾಖೆ ಜೂನ್ 4 ಶುಕ್ರವಾರ, ಅಪಾರ ಪ್ರಮಾಣದ ಎಂಡಿಎಂಎ ಹರಳುಗಳನ್ನು (ಮಾದಕ ದ್ರವ್ಯ) ವಶಪಡಿಸಿಕೊಂಡಿದ್ದು ಉಪ್ಪಳದ ಮೂವರನ್ನು ಬಂಧಿಸಿದ್ದಾರೆ.
10 ಲಕ್ಷ ಮೌಲ್ಯದ 170 ಗ್ರಾಂ ಎಂಡಿಎಂಎ, ಒಂದು ಕಾರು ಮತ್ತು ನಾಲ್ಕು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೊಹಮ್ಮದ್ ಮುನಾಫ್, ಮೊಹಮ್ಮದ್ ಮುಜಾಂಬಿಲ್, ಮತ್ತು ಅಹ್ಮದ್ ಮಸೂಕ್ ಅವರು ಬಂಧಿತರಾಗಿದ್ದು ಇವರಲ್ಲಿ ಮುನಾಫ್ ಬಿಬಿಎ ಪೂರ್ಣಗೊಳಿಸಿದರೆ, ಮಸೂಕ್ ಬೆಂಗಳೂರಿನ ಜೆ.ಪಿ.ನಗರದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ. ಮುಜಾಂಬಿಲ್ ನೆಲಮಂಗಲ, ಬೆಂಗಳೂರುಗಳಲ್ಲಿ ಸ್ಪ್ರೋರ್ಟ್ಸ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ.
ಆರೋಪಿಗಳು ಬೆಂಗಳೂರು, ಮಂಗಳೂರು, ಉಪ್ಪಳ ಮತ್ತು ಕಾಸರಗೋಡುಗಳಲ್ಲಿ ಡ್ರಗ್ಸ್ ಮಾರಾಟ ಮಾಡಲು ಯತ್ನಿಸುತ್ತಿದ್ದರು.
ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 17,37,000 ರೂ. ಆಗಿದ್ದು ಇಎನ್‌ಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ