ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಮಕ್ಕಳ ಭವಿಷ್ಯದ ದಿಕ್ಕೇನು? ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 


ಮನುಷ್ಯನ ಜೀವನದಲ್ಲಿ ಅದೆಷ್ಟೇ ಏರಿಳಿತಗಳು ಕಂಡುಬಂದರೂ ಅದಕ್ಕೆ ಒಂದು ಚೌಕಟ್ಟನ್ನು ಒದಗಿಸಿ ಕೊಡುವುದು ಮಾತ್ರ ಶಿಕ್ಷಣ. ಶಿಕ್ಷಣ ಮನುಷ್ಯನಿಗೆ ಗೌರವ ಸಂಪಾದಿಸಲು ನೆರವಾಗುವ ಒಂದು ಅದ್ಭುತ ವರ. ಮಕ್ಕಳು ಈ ಸಮಯದಲ್ಲಿ ಕಡ್ಡಾಯವಾಗಿ ವಿದ್ಯಾಭ್ಯಾಸ ಮಾಡಲೇಬೇಕು.

ಆದರೆ ಆಗುತ್ತಿರುವುದೇನು? ಕೋವಿಡ್ ಎಂಬ ಮಹಾಮಾರಿಯಿಂದಾಗಿ ಎಲ್ಲಾ ಕಾರ್ಯಗಳು ಸಮತೋಲನದ ಪರಿಸ್ಥಿತಿಯಲ್ಲಿದೆ. ಅದರ ಜೊತೆಗೆ ಶಿಕ್ಷಣದ ಕಥೆಯೂ ವಾರೆಕೋರೆಯಾಗಿ ಚಲಿಸುತ್ತಿದೆ.

ಒಬ್ಬ ವಿದ್ಯಾರ್ಥಿ ಶೈಕ್ಷಣಿಕ ವರ್ಷದಲ್ಲಿ ಪಡೆದ ಜ್ಞಾನ ಎಷ್ಟು, ಕಲಿಕೆಯ ಪ್ರಗತಿ ಯಾವ ರೀತಿ ಎಂಬುವುದನ್ನು ಮೌಲ್ಯಮಾಪನ ಮಾಡಲು ಮಾನದಂಡ ಎಂದರೆ ಅದು ಪರೀಕ್ಷೆ. ಆದರೆ ನಿನ್ನೆ ಮೊನ್ನೆ ತಾನೇ ಸರ್ಕಾರವು ಸಿಬಿಎಸ್ಇ ಹನ್ನೆರಡನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಿತು. ಹಾಗಾದರೆ ಚಿಂತನೆ ಮಾಡೋಣ ಮಕ್ಕಳ ಪ್ರಬುದ್ಧತೆ, ಶಿಕ್ಷಣದ ಬಗ್ಗೆ ಅರಿಯಲು ಪರ್ಯಾಯ ಕ್ರಮವೇನು...?

ಇರುವ ಅನಿವಾರ್ಯ ಪರಿಸ್ಥಿತಿಗೆ ಅನುಗುಣವಾಗಿ ಮಕ್ಕಳ ಹಿತದೃಷ್ಠಿಯಿಂದ ಈ ಯೋಜನೆ ಸರಿಯೆನಿಸಿರಬಹುದು. ಆದರೆ ನಿಜವಾಗಿಯೂ ಶಿಕ್ಷಣದಲ್ಲಿ ಮಕ್ಕಳು ಪ್ರೌಢತೆ ಗಳಿಸಿಕೊಂಡಿರುವುದರ ಬಗ್ಗೆ ನಮಗೆ ಅರಿವಿರಬೇಕಲ್ಲವೇ..? ಮುಂದಿನ ದಿನಗಳಲ್ಲಿ ಇದರ ಬಗ್ಗೆ ಯಾವ ರೀತಿಯ ಕಾರ್ಯ ಯೋಜನೆ ಅನುಷ್ಠಾನಕ್ಕೆ ಬರುತ್ತದೋ ತಿಳಿದಿಲ್ಲ. ಆದರೆ ಬದಲಾವಣೆಗೆ ಸಜ್ಜಾಗಿ ನಿಲ್ಲುವುದಷ್ಟೇ ನಮ್ಮ ಮುಂದಿರುವ ದಾರಿ.

-ಅರ್ಪಿತಾ ಕುಂದರ್


Post a Comment

أحدث أقدم