ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಇಂದು ಗೃಹ ಮಿಲನ: ಕೌಟುಂಬಿಕ ಬಾಂಧವ್ಯ ಬೆಸೆಯುವ ವಿಶಿಷ್ಟ ಕಾರ್ಯಕ್ರಮ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad
ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ  ಕುಟುಂಬ ಪ್ರಬೋಧನ ವಿಭಾಗದ ವತಿಯಿಂದ ಇಂದು ಗೃಹ ಮಿಲನ ದಿನವಾಗಿ ಆಚರಿಸಲಾಗುತ್ತಿದೆ. ಸ್ಥಾನೀಯವಾಗಿ ನಿಗದಿಪಡಿಸಿದ ಸಮಯದಲ್ಲಿ ಸುಮಾರು 45ರಿಂದ 60 ನಿಮಿಷದ ಅವಧಿಯಲ್ಲಿ ಈ ವಿನೂತನ ಕಾರ್ಯಕ್ರಮ ನಡೆಯಲಿದೆ.

ಪ್ರತಿಮನೆಯಲ್ಲೂ ಮನೆಯ ಸದಸ್ಯರು ಎಲ್ಲರೂ ಈ ಗೃಹಮಿಲನದಲ್ಲಿ ಪಾಲ್ಗೊಂಡು ಹೊಸ ಅನುಭವವನ್ನು ಸವಿಯೋಣ ಎಂದು ಪ್ರಕಟಣೆ ಕೋರಿದೆ.

ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬವೇ ಸಮಾಜದ ಅಡಿಪಾಯವಾಗಿದ್ದು, ಸಂಸ್ಕಾರಯುತ, ಸಂತೃಪ್ತ ಕುಟುಂಬಗಳು ನೆಮ್ಮದಿ- ಸಹಕಾರ-ಸೌಹಾರ್ದದಿಂದ ಬಾಳುತ್ತಿದ್ದರೆ ಇಡೀ ಸಮಾಜದಲ್ಲಿ ಈ ಗುಣಗಳು ಪ್ರತಿಫಲಿಸುತ್ತವೆ. ಇದರಿಂದ ಆರೋಗ್ಯಯುತ ಸದೃಢ ಸಮಾಜದ ನಿರ್ಮಾಣವೂ ಆಗುತ್ತದೆ.

ಜಗತ್ತನ್ನೇ ಕಾಡುತ್ತಿರುವ ಸಾಂಕ್ರಾಮಿಕದ ಈ ಸನ್ನಿವೇಶದಲ್ಲಿ ಸಾಮಾಜಿಕವಾಗಿ ಒಟ್ಟುಸೇರುವ ಅವಕಾಶವಿಲ್ಲ. ದೇಶಾದ್ಯಂತ ಮಂಕು ಕವಿದ ವಾತಾವರಣವನ್ನು ತಿಳಿಗೊಳಿಸುವ, ಲವಲವಿಕೆ ಮತ್ತು ಜೀವನೋತ್ಸಾಹ ತುಂಬುವ ನಿಟ್ಟಿನಲ್ಲಿ ಆರೆಸ್ಸೆಸ್‌ ಈ ದಿನವನ್ನು ಗೃಹ ಮಿಲನ ದಿನವಾಗಿ ಆಚರಿಸುವ ವಿಶಿಷ್ಟ ಕಲ್ಪನೆಯನ್ನು ಪ್ರಸ್ತುತಪಡಿಸುತ್ತಿದೆ.ಎಲ್ಲರೂ ಅವರವರ ಮನೆಯಲ್ಲೇ ನಿಗದಿತ ಸಮಯದಲ್ಲಿ ಒಟ್ಟಿಗೆ ಸೇರಿ ಇದನ್ನು ಆಚರಿಸಲಾಗುತ್ತಿದೆ. ಇದಕ್ಕೆ ನಿಗದಿತ ಕಾರ್ಯಸೂಚಿಯನ್ನೂ ಬಿಡುಗಡೆ ಮಾಡಲಾಗಿದೆ.

ಆರಂಭದಲ್ಲಿ 10 ನಿಮಿಷ ಮೂರು ಬಾರಿ ಓಂಕಾರವನ್ನು ಉಚ್ಚರಿಸಿ, ನಂತರ ಪ್ರಾಣಾಯಾಮ/ ಧ್ಯಾನದಲ್ಲಿ ತೊಡಗುವುದು. ಬಳಿಕ 5-6 ನಿಮಿಷ ಭಜನೆ, ದೇಶಭಕ್ತಿಗೀತೆ ಹಾಡುವುದು. ಅನಂತರ ವಿಷಯದ ಮಂಡನೆ- 10 ನಿಮಿಷಗಳ ಕಾಲ ಸಂಘದ ಪ್ರಾಥಮಿಕ ಪರಿಚಯ, 15 ನಿಮಿಷಗಳ ಕಾಲ ಪರಿಸರ ಸಂರಕ್ಷಣೆಯಲ್ಲಿ ನಮ್ಮ ಪಾತ್ರ ಮತ್ತು ಸಂಕಲ್ಪದ ವಿಷಯವಾಗಿ ಮಾತನಾಡುವುದು, ಕೊನೆಯ 5 ನಿಮಿಷದಲ್ಲಿ ಶಾಂತಿಮಂತ್ರ/ ಪ್ರಾರ್ಥನೆ ನೆರವೇರಿಸುವುದು ಈ ಕಾರ್ಯಸೂಚಿಯಲ್ಲಿದೆ.

ಕಾರ್ಯಕ್ರಮದ ನಂತರ ಆಯಾ ನಗರ/ ತಾಲೂಕು ಸ್ತರದ ಕಾರ್ಯಕರ್ತರಿಗೆ ನಮ್ಮ ಅನುಭವದ ಮಾಹಿತಿಯನ್ನು ಹಂಚಿಕೊಳ್ಳೋಣ ಎಂದು ಕುಟುಂಬ ಪ್ರಬೋಧನದ ಪ್ರಕಟಣೆ ಕೋರಿದೆ.
Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


 


Post a Comment

ನವೀನ ಹಳೆಯದು