ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಇಂದು ಗೃಹ ಮಿಲನ: ಕೌಟುಂಬಿಕ ಬಾಂಧವ್ಯ ಬೆಸೆಯುವ ವಿಶಿಷ್ಟ ಕಾರ್ಯಕ್ರಮ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad




ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ  ಕುಟುಂಬ ಪ್ರಬೋಧನ ವಿಭಾಗದ ವತಿಯಿಂದ ಇಂದು ಗೃಹ ಮಿಲನ ದಿನವಾಗಿ ಆಚರಿಸಲಾಗುತ್ತಿದೆ. ಸ್ಥಾನೀಯವಾಗಿ ನಿಗದಿಪಡಿಸಿದ ಸಮಯದಲ್ಲಿ ಸುಮಾರು 45ರಿಂದ 60 ನಿಮಿಷದ ಅವಧಿಯಲ್ಲಿ ಈ ವಿನೂತನ ಕಾರ್ಯಕ್ರಮ ನಡೆಯಲಿದೆ.

ಪ್ರತಿಮನೆಯಲ್ಲೂ ಮನೆಯ ಸದಸ್ಯರು ಎಲ್ಲರೂ ಈ ಗೃಹಮಿಲನದಲ್ಲಿ ಪಾಲ್ಗೊಂಡು ಹೊಸ ಅನುಭವವನ್ನು ಸವಿಯೋಣ ಎಂದು ಪ್ರಕಟಣೆ ಕೋರಿದೆ.

ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬವೇ ಸಮಾಜದ ಅಡಿಪಾಯವಾಗಿದ್ದು, ಸಂಸ್ಕಾರಯುತ, ಸಂತೃಪ್ತ ಕುಟುಂಬಗಳು ನೆಮ್ಮದಿ- ಸಹಕಾರ-ಸೌಹಾರ್ದದಿಂದ ಬಾಳುತ್ತಿದ್ದರೆ ಇಡೀ ಸಮಾಜದಲ್ಲಿ ಈ ಗುಣಗಳು ಪ್ರತಿಫಲಿಸುತ್ತವೆ. ಇದರಿಂದ ಆರೋಗ್ಯಯುತ ಸದೃಢ ಸಮಾಜದ ನಿರ್ಮಾಣವೂ ಆಗುತ್ತದೆ.

ಜಗತ್ತನ್ನೇ ಕಾಡುತ್ತಿರುವ ಸಾಂಕ್ರಾಮಿಕದ ಈ ಸನ್ನಿವೇಶದಲ್ಲಿ ಸಾಮಾಜಿಕವಾಗಿ ಒಟ್ಟುಸೇರುವ ಅವಕಾಶವಿಲ್ಲ. ದೇಶಾದ್ಯಂತ ಮಂಕು ಕವಿದ ವಾತಾವರಣವನ್ನು ತಿಳಿಗೊಳಿಸುವ, ಲವಲವಿಕೆ ಮತ್ತು ಜೀವನೋತ್ಸಾಹ ತುಂಬುವ ನಿಟ್ಟಿನಲ್ಲಿ ಆರೆಸ್ಸೆಸ್‌ ಈ ದಿನವನ್ನು ಗೃಹ ಮಿಲನ ದಿನವಾಗಿ ಆಚರಿಸುವ ವಿಶಿಷ್ಟ ಕಲ್ಪನೆಯನ್ನು ಪ್ರಸ್ತುತಪಡಿಸುತ್ತಿದೆ.



ಎಲ್ಲರೂ ಅವರವರ ಮನೆಯಲ್ಲೇ ನಿಗದಿತ ಸಮಯದಲ್ಲಿ ಒಟ್ಟಿಗೆ ಸೇರಿ ಇದನ್ನು ಆಚರಿಸಲಾಗುತ್ತಿದೆ. ಇದಕ್ಕೆ ನಿಗದಿತ ಕಾರ್ಯಸೂಚಿಯನ್ನೂ ಬಿಡುಗಡೆ ಮಾಡಲಾಗಿದೆ.

ಆರಂಭದಲ್ಲಿ 10 ನಿಮಿಷ ಮೂರು ಬಾರಿ ಓಂಕಾರವನ್ನು ಉಚ್ಚರಿಸಿ, ನಂತರ ಪ್ರಾಣಾಯಾಮ/ ಧ್ಯಾನದಲ್ಲಿ ತೊಡಗುವುದು. ಬಳಿಕ 5-6 ನಿಮಿಷ ಭಜನೆ, ದೇಶಭಕ್ತಿಗೀತೆ ಹಾಡುವುದು. ಅನಂತರ ವಿಷಯದ ಮಂಡನೆ- 10 ನಿಮಿಷಗಳ ಕಾಲ ಸಂಘದ ಪ್ರಾಥಮಿಕ ಪರಿಚಯ, 15 ನಿಮಿಷಗಳ ಕಾಲ ಪರಿಸರ ಸಂರಕ್ಷಣೆಯಲ್ಲಿ ನಮ್ಮ ಪಾತ್ರ ಮತ್ತು ಸಂಕಲ್ಪದ ವಿಷಯವಾಗಿ ಮಾತನಾಡುವುದು, ಕೊನೆಯ 5 ನಿಮಿಷದಲ್ಲಿ ಶಾಂತಿಮಂತ್ರ/ ಪ್ರಾರ್ಥನೆ ನೆರವೇರಿಸುವುದು ಈ ಕಾರ್ಯಸೂಚಿಯಲ್ಲಿದೆ.

ಕಾರ್ಯಕ್ರಮದ ನಂತರ ಆಯಾ ನಗರ/ ತಾಲೂಕು ಸ್ತರದ ಕಾರ್ಯಕರ್ತರಿಗೆ ನಮ್ಮ ಅನುಭವದ ಮಾಹಿತಿಯನ್ನು ಹಂಚಿಕೊಳ್ಳೋಣ ಎಂದು ಕುಟುಂಬ ಪ್ರಬೋಧನದ ಪ್ರಕಟಣೆ ಕೋರಿದೆ.




Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


 


Post a Comment

أحدث أقدم