ಕಡಬ: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ|| ಮುರಳಿ ಮೋಹನ ಚೂಂತಾರು ಕಡಬ ಗೃಹರಕ್ಷಕ ದಳದ ಘಟಕಕ್ಕೆ ಇಂದು (ಜೂ.6) ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೊರೋನ 19 ಮಾರ್ಷಲ್ ಕರ್ತವ್ಯದ ಸಿಬಂದಿಯವರ, ಪ್ರವಾಹ ರಕ್ಷಣಾ ಕರ್ತವ್ಯದ ಸಿಬಂದಿ, ಹಾಗೂ ಘಟಕದ ಸಿಬಂದಿಯವರ ಬಗ್ಗೆ ಯೋಗ ಕ್ಷೇಮ ವಿಚಾರಿಸಿ ಮಾತುಕತೆ ನಡೆಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಡಬದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದ ಬದಿಯ ಸ್ಥಳದಲ್ಲಿ ಸಸಿ ನೆಡುವ ಕಾರ್ಯವನ್ನು ನಡೆಸಿ ಕೊಟ್ಟರು.
ಈ ಸಮಯದಲ್ಲಿ ಮಂಗಳೂರು ಘಟಕದ ಪ್ಲಟೂನ್ ಸಾರ್ಜಂಟ್ ಸುನಿಲ್ ಪೂಜಾರಿ, ಹಿರಿಯ ಗೃಹರಕ್ಷಕರಾದ ರಮೇಶ್ ಬಿ, ಕಮಾಂಡೆಂಟ್ ಜೀಪು ಚಾಲಕ ದಿವಾಕರ, ಗೃಹರಕ್ಷಕರಾದ ಸುನೀಲ್ ಕುಮಾರ್, ದುಶ್ಯಂತ್ ಕುಮಾರ್, ಮೊದಲಾದವರು. ಮತ್ತು ಕಡಬ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಹಾಗೂ ಕಡಬ ಗೃಹರಕ್ಷಕ ದಳದ ಹಿರಿಯ ಗೃಹರಕ್ಷಕ ಎಸ್ ಎಲ್ ಉದಯಶಂಕರ್, ಗೃಹರಕ್ಷಕರಾದ ಸಂದೇಶ, ತಿಲಕ್, ರವಿ, ಕಿರಣ್ ಕುಮಾರ್, ಲೋಲಾಕ್ಷ, ಶಿವಪ್ರಸಾದ್, ರಾಕೇಶ್, ಮೋನಪ್ಪ, ಶಿವಪ್ರಸಾದ್ ಕೆ, ಪವಿತ್ ಕುಮಾರ್, ಮತ್ತು ಮಹಿಳಾ ಗೃಹರಕ್ಷಕಿಯರಾದ ಮೀನಾಕ್ಷಿ, ಪ್ರಮಿತ, ಶ್ರೀಲತಾ, ಉಪಸ್ಥಿತರಿದ್ದರು.
ಕಡಬ ಗೃಹರಕ್ಷಕ ದಳ ಘಟಕದ ಪ್ರಭಾರ ಘಟಕಾಧಿಕಾರಿ ತೀರ್ಥೇಶ್ ಅಮೈ ಜಿಲ್ಲಾ ಕಮಾಂಡೆಂಟ್ ರವರಿಗೆ ಗೌರವ ವಂದನೆ ಸಲ್ಲಿಸಿ ವಂದಿಸಿದರು.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ