ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಸುಬ್ರಹ್ಮಣ್ಯ: ಗೃಹರಕ್ಷಕ ದಳ ಘಟಕಕ್ಕೆ ರಬ್ಬರ್ ಬೋಟ್ ಹಸ್ತಾಂತರ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ದ.ಕ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರ ರಕ್ಷಣಾತಂಡದ ವತಿಯಿಂದ ಹಸ್ತಾಂತರ

ಈ ಬೋಟ್‌ ಸೇವೆ ಖಾಯಂ ಆಗಿ ಸುಬ್ರಹ್ಮಣ್ಯದಲ್ಲೇ ಲಭ್ಯ


ಸುಬ್ರಹ್ಮಣ್ಯ: ಪೌರ ರಕ್ಷಣಾ ಪಡೆ ಮುಖ್ಯ ಪಾಲಕರಾದ ಡಾ. ಮುರಲೀ ಮೋಹನ್ ಚೂಂತಾರು ಅವರು ಇಂದು ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ಸ್ನಾನ ಘಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ 10 ಜನ ಪ್ರಯಾಣಿಸುವಂತಹ ರಬ್ಬರ್ ಬೋಟ್ ಅನ್ನು ಗೃಹರಕ್ಷಕ ದಳ ಸುಬ್ರಹ್ಮಣ್ಯ ಘಟಕಕ್ಕೆ ಹಸ್ತಾಂತರ ಮಾಡಿದರು.

ನಂತರ  ಮಾತನಾಡಿದ ಡಾ. ಮುರಳಿ ಮೋಹನ್ ಚೂಂತಾರು ಅವರು, ಪ್ರತಿ ವರ್ಷ ಮಳೆಗಾಲ ಬಂದಾಗ ಸುಬ್ರಹ್ಮಣ್ಯದಲ್ಲಿ ನೆರೆ ಬರುವುದು ಸಹಜ, ನೆರೆ ಬಂದಾಗ ಇಲ್ಲಿಯ ಜನರನ್ನು ರಕ್ಷಿಸಬೇಕು, ಆಸ್ತಿಪಾಸ್ತಿಯನ್ನು ರಕ್ಷಿಸಬೇಕು ಎನ್ನುವ ಉದ್ದೇಶದಿಂದ ಗ್ರಹರಕ್ಷಕ ದಳದ ವತಿಯಿಂದ, ಗಾಳಿ ತುಂಬಿಸಿ ಓಡಿಸಬಹುದಾದ ಬೋಟ್ ಅನ್ನು ಖಾಯಂ ಅಗಿ ಸುಬ್ರಹ್ಮಣ್ಯದಲ್ಲೇ ಲಭ್ಯ ಆಗುವ ರೀತಿ ವ್ಯವಸ್ಥೆ ಮಾಡಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಬೋಟ್‌ಗಳಿದ್ದು ಎರಡು ಪ್ರಧಾನ ಕಚೇರಿಯಲ್ಲಿ ಹಾಗೂ ಉಳಿದ ಮೂರೂ ಬೋಟ್ ಉಪ್ಪಿನಂಗಡಿ, ಮೂಲ್ಕಿ, ಬಂಟ್ವಾಳ ಘಟಕದಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.



ಎಲ್ಲರಿಗೂ ತಿಳಿದಂತೆ ಕಳೆದ ವರ್ಷ ಸುಬ್ರಮಣ್ಯದಲ್ಲಿ ನೆರೆ ಬಂದಿತ್ತು. ತುಂಬಾ ಸಮಸ್ಯೆಗಳಿಗಾಗಿತ್ತು. ಈ ಸಂದರ್ಭದಲ್ಲಿ ಮಂಗಳೂರಿನಿಂದ ಬೋಟ್ಅನ್ನು ತಂದು ರಕ್ಷಣೆ ಕಾರ್ಯ ಕಷ್ಟ ಆದ್ದರಿಂದ  ಜಿಲ್ಲಾಧಿಕಾರಿಗಳ ಆದೇಶದಂತೆ ಸ್ಥಳೀಯ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಇಂದು ಸುಬ್ರಹ್ಮಣ್ಯ ಗೃಹರಕ್ಷಕ ದಳದ ಘಟಕಕ್ಕೆ ಬೋಟ್ ಹಾಗೂ ರಕ್ಷಣಾ ಸಂದರ್ಭದಲ್ಲಿ ಬೇಕಾದ ಸಲಕರಣೆಗಳನ್ನು ಹಸ್ತಾಂತರ ಮಾಡುತ್ತಿದ್ದೇವೆ ಎಂದರು.

ಹಸ್ತಾಂತರ ಸಂದರ್ಭದಲ್ಲಿ ಸುಬ್ರಹ್ಮಣ್ಯ ಪಿಡಿಒ ಮುತ್ತಪ್ಪ, ಗ್ರಾಮಕರಣಿಕ ರಂಜನ್, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸವಿತಾ ಭಟ್, ಗ್ರಾಮ ಪಂಚಾಯತ್ ಸದಸ್ಯರು ಭಾರತಿ ದಿನೇಶ್, ಗಿರೀಶ್, ನಾರಾಯಣ ಅಗ್ರಹಾರ, ಹೆಚ್.ಎಲ್ ವೆಂಕಟೇಶ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೋನಪ್ಪ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಎನ್. ಯಸ್, ಗೃಹರಕ್ಷಕ ದಳದ ಘಟಕಾಧಿಕಾರಿ ನಾರಾಯಣ. ಹೆಚ್, ಸಾರ್ಜೆಂಟ್ ಹರಿಚಂದ್ರ, ಮಂಗಳೂರು ಘಟಕ ಗೃಹರಕ್ಷಕ ದಳದ ಸಿಬಂದಿಗಳು ಹಾಗೂ ಸುಬ್ರಹ್ಮಣ್ಯ ಗೃಹರಕ್ಷಕದಳದ ಸಿಬಂದಿಗಳು ಉಪಸ್ಥಿತರಿದ್ದರು.

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

ನವೀನ ಹಳೆಯದು