ಸಣ್ಣ ಪುಟ್ಟ ನೆರವಿನಿಂದ ಸಂತೋಷ ಪಡೆದ ಸಂಜನಾ
ಕೋವಿಡ್ ಕಷ್ಟಕಾಲದಲ್ಲಿ ಜನರಿಗೆ ಸಣ್ಣಪುಟ್ಟ ಸಹಾಯಕ್ಕೆ ಮುಂದಾದ ನಟಿ ಸಂಜನಾ. ಕೋರೋನಾ ಹೆಚ್ಚಾಗಿರುವುದರಿಂದ ಮನೆಯಿಂದ ಹೊರ ಬರಲು ಕಷ್ಟ ಸಾಧ್ಯ. ಈ ಸಮಯದಲ್ಲಿ ನಾನಿದ್ದಲ್ಲಿಂದಲೇ ಕೈಲಾದಷ್ಟು ಸಹಾಯವನ್ನು ಮಾಡಿದ್ದೇನೆ ಎನ್ನುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್‍ಗಳ ಸಂಖ್ಯೆ ಹೆಚ್ಚಿರುದರಿಂದ ಸ್ನೇಹಿತರ ಆಪ್ತರ ಸಮಸ್ಯೆಗಳನ್ನು ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದೆ. ಇದರಿಂದ ಕೆಲವರಿಗೆ ಅಗತ್ಯ ವಸ್ತುಗಳು ನೆರವಾಗಿದೆ ಎಂದು ನಟಿ ಸಂಜನಾ ಹೇಳುತ್ತಾರೆ.
ಸಂಕಷ್ಟದ ಜನರ ಬಾಳಿಗೆ ನೆರವಾದ ನಟಿ ಕಾವ್ಯಾ ಶಾಸ್ತ್ರಿ:
ಈ ಕೊರೋನಾ ಮಹಾಮಾರಿಯಿಂದ ಜನ ಜೀವನ ತತ್ತರಿಸಿಕೊಂಡಿದೆ. ಇಂತಹ ಸಮಯದಲ್ಲಿ ಲಾಕ್ ಡೌನ್‍ನಲ್ಲಿಯೂ ಮನೆಯಲ್ಲಿ ಕೂರದೆ ಜನರ ಸೇವೆಯಲ್ಲಿ ತೊಡಗಿಸಿಕೊಂಡ ನಟಿ ಕಾವ್ಯಾ ಶಾಸ್ತ್ರಿ, ಇವರು ರಾಜಧಾನಿಯ ಕೆಲವು ಪ್ರದೇಶಗಳಿಗೆ ತೆರಲಿ ಅಲ್ಲಿ ಕಷ್ಟದಲ್ಲಿ ಇರುವ ಜನರಿಗೆ ಕಿಟ್ ವಿತರಿಸಿ ಜನರ ಮೆಚ್ಚುಗೆಯನ್ನು ಪಡೆದಿದ್ದಾರೆ. ಜೊತೆಗೆ ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಜನರಿಗೂ ನೆರವಾಗಿದ್ದಾರೆ. ಈಗೆ ಜನರ ಸಾಕಷ್ಟು ಸಮಸ್ಯೆಗಳಿಗೆ ನೆರವಾಗಿದ್ದೇನೆ ಎನ್ನುತ್ತಾರೆ ನಟಿ ಕಾವ್ಯಾ ಶಾಸ್ತ್ರಿ.
-ಚೈತ್ರಾ
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق